ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲ್ಯದ ಗೆಳತಿ ಜೊತೆ ಹಸೆಮಣೆ ಏರಿದ ಹಾರ್ದಿಕ್ ಪಟೇಲ್

|
Google Oneindia Kannada News

ಅಹ್ಮದಾಬಾದ್, ಜನವರಿ 28: ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸುವ ಮೂಲಕ ಪ್ರಸಿದ್ಧಿ ಪಡೆದಿದ್ದ ಪಾಟೀದಾರ್ ಅನಾಮತ್ ಆಂದೋಲನ ಸಮಿತಿಯ ಮುಖಂಡ ಹಾರ್ದಿಕ್ ಪಟೇಲ್ ತಮ್ಮ ಬಾಲ್ಯದ ಗೆಳತಿಯನ್ನು ಭಾನುವಾರ ಮದುವೆಯಾದರು.

ಕಿಂಜಲ್ ಪಾರಿಖ್ ಅವರನ್ನು ಗುಜರಾತಿನ ಸುರೆಂದರ್ ನಗರ ಜಿಲ್ಲೆಯ ದಿಸ್ಗರ್ ಎಂಬ ಹಳ್ಳಿಯಲ್ಲಿ ವರಿಸಿದ ಅವರು ಕೇವಲ 100 ಜನರನ್ನಷ್ಟೇ ಮದುವೆಗೆ ಆಮಂತ್ರಿಸಿದ್ದರು. ತೀರಾ ಸರಳವಾಗಿಯೇ ವಿವಾಹವಾಗಬೇಕು ಎಂಬುದು 25 ವರ್ಷ ವಯಸ್ಸಿನ ಹಾರ್ದಿಕ್ ಪಟೇಲ್ ಆಸೆಯಾಗಿತ್ತು.

ಆಹ್ಹಾ! ಹಾರ್ದಿಕ್ ಪಟೇಲ್ ಮದ್ವೆ ಅಂತೆ, ವಧು ಯಾರಂತೆ?!ಆಹ್ಹಾ! ಹಾರ್ದಿಕ್ ಪಟೇಲ್ ಮದ್ವೆ ಅಂತೆ, ವಧು ಯಾರಂತೆ?!

"ಇದು ನನ್ನ ಕುಟುಂಬ ಜೀವನದ ಎರಡನೇ ಇನ್ನಿಂಗ್ಸ್ ನ ಆರಂಭ. ನಾವಿಬ್ಬರೂ ದೇಶದ ನವನಿರ್ಮಾಣಕ್ಕೆ ಒಟ್ತಾಗಿಯೇ ದುಡಿವ ಸಂಕ್ಲಪ ಮಾಡಿದ್ದೇವೆ. ನಾವಿಬ್ಬರೂ ನಮ್ಮ ಕೊನೇ ಉಸಿರುರುವರೆಗೂ ಸತ್ಯಕ್ಕಾಗಿ, ಜನರಿಗಾಗಿ ಮತ್ತು ಸಮಾನತೆಯ ಹಕ್ಕಿಗಾಗಿ ಹೋರಾಡುತ್ತೇವೆ" ಎಂದು ಮದುವೆಯ ಸಂದರ್ಭದಲ್ಲಿ ಪಟೇಲ್ ಹೇಳಿದರು.

Hardik Patel ties knot with his childhood friend

ಕಾಂಗ್ರೆಸ್ ಬೆಂಬಲಕ್ಕೆ ಹಾರ್ದಿಕ್ ಪಟೇಲ್ ರೆಡಿ... ಆದ್ರೆ ಷರತ್ತುಗಳು ಅನ್ವಯ!ಕಾಂಗ್ರೆಸ್ ಬೆಂಬಲಕ್ಕೆ ಹಾರ್ದಿಕ್ ಪಟೇಲ್ ರೆಡಿ... ಆದ್ರೆ ಷರತ್ತುಗಳು ಅನ್ವಯ!

ಸೂರತ್ತಿನಲ್ಲಿ ವಾಸವಿರುವ ಕಿಂಜಾಲ್ ವಿರಾಮ್ಗಾಂ ಮೂಲದವರು. ಹಾರ್ದಿಕ್ ಪಟೇಲ್ ಸಹ ಇದೇ ಊರಿನ ಪಕ್ಕದ ಊರಾದ ಚಂದನ್ ನಗರಿಯವರು. ಇಬರಬೂ ಬಾಲ್ಯದಿಂದಲೂ ಸ್ನೇಹಿತರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು.

Hardik Patel ties knot with his childhood friend

ಮೇಲ್ಜಾತಿಗೆ ಮೀಸಲಾತಿ? ಹಾರ್ದಿಕ್ ಪಟೇಲ್ ಏನಂತಾರೆ?ಮೇಲ್ಜಾತಿಗೆ ಮೀಸಲಾತಿ? ಹಾರ್ದಿಕ್ ಪಟೇಲ್ ಏನಂತಾರೆ?

ಮೀಸಲಾತಿ ಮತ್ತು ರೈತರ ಸಾಲಮನ್ನಾಕ್ಕೆ ಒತ್ತಾಯಿಸಿ ಕಳೆದ ಸೆಪ್ಟೆಂಬರ್ ನಲ್ಲಿ ಹಾರ್ದಿಕ್ ಪಟೇಲ್ ಹತ್ತೊಂಬತ್ತು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು.

English summary
Gujarat Patidar quota leader, Hardik Patel tied knot with his childhood friend Nikhil Savani on Jan 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X