ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಚಾರಿ ನಿಯಮ ಉಲ್ಲಂಘನೆ ದಂಡ ಕಡಿತಗೊಳಿಸಿದ ಗುಜರಾತ್

|
Google Oneindia Kannada News

ಅಹ್ಮದಾಬಾದ್, ಸೆಪ್ಟೆಂಬರ್ 10: ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಾಡಿ ಸಂಚಾರಿ ನಿಯಮ ಉಲ್ಲಂಘನೆಗೆ ಭಾರಿ ದಂಡವನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಬಗ್ಗೆ ಭಾರಿ ವಿರೋಧವೂ ವ್ಯಕ್ತವಾಗುತ್ತಿದೆ. ಈ ನಡುವೆ ಗುಜರಾತ್ ರಾಜ್ಯವು ದಂಡ ಪ್ರಮಾಣವನ್ನು ಕಡಿಮೆಗೊಳಿಸಿ ರಾಜ್ಯದ ಜನರ ಆತಂಕ ಕಡಿಮೆಗೊಳಿಸಿದೆ.

ಮೋಟಾರು ವಾಹನ ಕಾಯ್ದೆಯ ಹೊಸ ತಿದ್ದುಪಡಿಯಿಂದ ಹೊರಿಸಲಾಗಿರುವ ಹೊಸ ತೆರಿಗೆಯಿಂದ ರಾಜ್ಯದ ಜನರಿಗೆ ಅಲ್ಪ ವಿನಾಯಿತಿ ನೀಡಿದೆ ಗುಜರಾತ್ ಸರ್ಕಾರ. ಬಹುತೇಕ ಸಂಚಾರಿ ನಿಯಮ ಉಲ್ಲಂಘನೆಗಳಿಗೆ ವಿಧಿಸಲಾಗಿರುವ ದಂಡದ ಅರ್ಧದಷ್ಟು ಮೊತ್ತವನ್ನು ಕಡಿತಗೊಳಿಸಿ ಸಿಎಂ ವಿಜಯ್ ರೂಪಾಣಿ ಆದೇಶ ಹೊರಡಿಸಿದೆ.

ಟ್ರಾಫಿಕ್ ಇಲಾಖೆಯ ಸ್ಪಷ್ಟ ಆದೇಶ: ಈ ದಾಖಲೆ ಒರಿಜಿನಲ್ ಇಲ್ಲಾಂದ್ರೆ ಭಾರೀ ಫೈನ್ಟ್ರಾಫಿಕ್ ಇಲಾಖೆಯ ಸ್ಪಷ್ಟ ಆದೇಶ: ಈ ದಾಖಲೆ ಒರಿಜಿನಲ್ ಇಲ್ಲಾಂದ್ರೆ ಭಾರೀ ಫೈನ್

ಗುಜರಾತ್ ಸರ್ಕಾರ ಹೊರಡಿಸಿರುವ ಹೊಸ ಆದೇಶದ ಪ್ರಕಾರ ಹೆಲ್ಮೆಟ್ ಧರಿಸದೇ ಇದ್ದರೆ 500 ರೂಪಾಯಿ ದಂಡ ವಿಧಿಸಲಾಗುತ್ತದೆ. ತಿದ್ದುಪಡಿ ಆಗಿರುವ ಮೋಟಾರು ಕಾಯ್ದೆಯ ಪ್ರಕಾರ ಈ ಮೊತ್ತ 1000 ಇದೆ. ಹಾಗೆಯೇ ಸೀಟ್ ಬೆಲ್ಟ್‌ ಧರಿಸಿದೇ ಇದ್ದರೆ 1000 ರೂಪಾಯಿ ಬದಲಿಗೆ 500 ದಂಡ ಕಟ್ಟಬೇಕಾಗಿದೆ.

Gujrat Government Reduces Fines Under Motor Vehicle Act

ಹೀಗೆಯೇ ಇನ್ನೂ ಹಲವು ಭಾರಿ ದಂಡದ ಮೊತ್ತವನ್ನು ಗುಜರಾತ್ ರಾಜ್ಯ ಸರ್ಕಾರ ಕಡಿತಗೊಳಿಸಿ ಅರ್ಧಕ್ಕೆ ಇಳಿಸಿದೆ. ಇದು ರಾಜ್ಯದ ಜನರಿಗೆ ಅಲ್ಪ ನಿರಾಳತೆ ನೀಡಿದೆ.

ಟ್ರಾಫಿಕ್ ನಿಯಮ ಉಲ್ಲಂಘನೆ: ಬೆಂಗಳೂರಿನ ಯುವಕನಿಗೆ 17000 ರೂ. ದಂಡ!ಟ್ರಾಫಿಕ್ ನಿಯಮ ಉಲ್ಲಂಘನೆ: ಬೆಂಗಳೂರಿನ ಯುವಕನಿಗೆ 17000 ರೂ. ದಂಡ!

ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯಗಳು ಮೊಟಾರು ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿವೆ. ಸಾರ್ವಜನಿಕವಾಗಿಯೂ ಹೊಸ ದಂಡದ ಮೊತ್ತಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.

English summary
Gujrat CM Vijay Rupani order to cut down fines for traffic violation under Motor vehicle act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X