ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬ್ಬಾ! ಗುಜರಾತಿಗಳು ಘೋಷಿಸಿದ್ದ ತೆರಿಗೆ ಕಟ್ಟದ ಮೊತ್ತ 18,000 ಕೋಟಿ

|
Google Oneindia Kannada News

ಅಹಮದಾಬಾದ್ (ಗುಜರಾತ್), ಅಕ್ಟೋಬರ್ 2: ಇನ್ ಕಮ್ ಟ್ಯಾಕ್ಸ್ ಡಿಕ್ಲರೇಷನ್ ಸ್ಕೀಮ್ (ಐಡಿಎಸ್) ಅಡಿಯಲ್ಲಿ ಗುಜರಾತಿಗಳು ಘೋಷಣೆ ಮಾಡಿಕೊಂಡ ಮೊತ್ತ ಎಷ್ಟು ಗೊತ್ತಾ? 18,000 ಕೋಟಿ ರುಪಾಯಿ. ಅದು ಕೂಡ ಬರೀ ನಾಲ್ಕು ತಿಂಗಳ ಅವಧಿಯಲ್ಲಿ ಆಚೆಗೆ ಬಂದ ಮೊತ್ತ.

ಇಡೀ ದೇಶದಲ್ಲಿ ಬಯಲಾದ ಲೆಕ್ಕಕ್ಕೆ ನೀಡದ ಹಣದಲ್ಲಿ ಗುಜರಾತಿಗಳ ಪಾಲು 29%. ಇದು ಜೂನ್ ಹಾಗೂ ಸೆಪ್ಟೆಂಬರ್ 2016ರ ಮಧ್ಯೆ ನಡೆದಿದೆ. ಅಪನಗದೀಕರಣ ಘೋಷಣೆಗೂ ಮುನ್ನ ಘೋಷಣೆಯಾದ ಮೊತ್ತ ಇದು. ಮಹೇಶ್ ಶಾರ ಕಾನೂನುಬಾಹಿರ ಆದಾಯ 13,860 ಕೋಟಿ ಬಯಲು ಮಾಡಿದ ಮುಂಚಿನ ಲೆಕ್ಕಾಚಾರ ಇದು.

ರುಪಾಯಿ ದುರ್ಬಲಕ್ಕೆ ಪಿ-ನೋಟ್ಸ್ ಕಾರಣ ಎಂದ ಸ್ವಾಮಿ, ಏನಿದು ಪಿ-ನೋಟ್ಸ್? ರುಪಾಯಿ ದುರ್ಬಲಕ್ಕೆ ಪಿ-ನೋಟ್ಸ್ ಕಾರಣ ಎಂದ ಸ್ವಾಮಿ, ಏನಿದು ಪಿ-ನೋಟ್ಸ್?

ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಹಾಕಿದ ಅರ್ಜಿಗೆ ಆದಾಯ ತೆರಿಗೆ ಇಲಾಖೆ ಈ ಉತ್ತರ ನೀಡಿದೆ. ಜೂನ್ ನಿಂದ ಸೆಪ್ಟೆಂಬರ್ 2016ರ ಮಧ್ಯೆ ಗುಜರಾತ್ ನಲ್ಲಿ ಐಡಿಎಸ್ ಅಡಿಯಲ್ಲಿ 18,000 ಘೋಷಣೆ ಆಗಿತ್ತು. ಇಡೀ ದೇಶದಲ್ಲಿ ಘೋಷಣೆಯಾದ 65,250 ಕೋಟಿಗೆ ಲೆಕ್ಕ ಹಾಕಿ ಹೇಳುವುದಾದರೆ ಆ ಮೊತ್ತದ 29%ನಷ್ಟು ಒಂದು ರಾಜ್ಯದಲ್ಲಿ ಸಿಕ್ಕಂತಾಗಿದೆ ಎಂದಿದ್ದಾರೆ.

Gujaratis disclosed Rs 18,000 crore in black money in 4 months

ಆರ್ ಟಿಐ ಅರ್ಜಿದಾರ ಭರತ್ ಸಿನ್ಹಾ ಝಲ ಕೇಳಿದ ಈ ಪ್ರಶ್ನೆಗೆ ಮಾಹಿತಿ ಒದಗಿಸುವುದಕ್ಕೆ ಆದಾಯ ತೆರಿಗೆ ಇಲಾಖೆ ಎರಡು ವರ್ಷ ತೆಗೆದುಕೊಂಡಿದೆ. ಅರ್ಜಿದಾರರು ಡಿಸೆಂಬರ್ 21,2016ರಲ್ಲಿ ಮಾಹಿತಿ ಕೇಳಿದ್ದರು. ಅಹಮದಾಬಾದ್ ಮೂಲದ ಆಸ್ತಿಗಳ ಮಾರಾಟ ಉದ್ಯಮಿ ಮಹೇಶ್ ಶಾ 13,860 ಕೋಟಿ ಘೋಷಿಸಿದ ನಂತರ ಅರ್ಜಿ ಹಾಕಲಾಗಿತ್ತು.

ಐಡಿಎಸ್ ಅಡಿಯಲ್ಲಿ ಮೊದಲ ಕಂತು ಪಾವತಿಸುವುದಕ್ಕೆ ವಿಫಲವಾದ ನಂತರ ಆತನ ಘೋಷಣೆಯನ್ನು ವಜಾ ಮಾಡಲಾಯಿತು. ಪೊಲೀಸ್ ಅಧಿಕಾರಿಗಳು, ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳು ಘೋಷಿಸಿಕೊಂಡ ಹಣದ ಬಗ್ಗೆ ಐಟಿ ಇಲಾಖೆ ತುಟಿ ಬಿಚ್ಚಲಿಲ್ಲ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅಕ್ಟೋಬರ್ 15ರ ವರೆಗೆ ಕಾಲಾವಕಾಶಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅಕ್ಟೋಬರ್ 15ರ ವರೆಗೆ ಕಾಲಾವಕಾಶ

"ಇದು ಎರಡು ವರ್ಷದ ಶ್ರಮ. ಮೊದಲಿಗೆ ಅರ್ಜಿ ಕಳೆದುಹೋಗಿದೆ ಎಂದರು. ಆ ನಂತರ ಅರ್ಜಿ ಗುಜರಾತಿ ಭಾಷೆಯಲ್ಲಿದೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂಬ ಉತ್ತರ ಬಂತು. ಈ ವರ್ಷದ ಸೆಪ್ಟೆಂಬರ್ ಐದನೇ ತಾರೀಕು ಮುಖ್ಯ ಮಾಹಿತಿ ಆಯುಕ್ತರು ಮಾಹಿತಿ ಒದಗಿಸುವಂತೆ ಸೂಚಿಸಿದ ನಂತರ ಒದಗಿಸಲಾಯಿತು" ಎಂದು ಆರ್ ಟಿಐ ಅರ್ಜಿದಾರ ಝಲ ಹೇಳಿದ್ದಾರೆ.

ಫಾರ್ಮ್ 16 ಇಲ್ಲದೆ ಆದಾಯ ತೆರಿಗೆ ಇ ರಿಟರ್ನ್ಸ್ ಹೇಗೆ?ಫಾರ್ಮ್ 16 ಇಲ್ಲದೆ ಆದಾಯ ತೆರಿಗೆ ಇ ರಿಟರ್ನ್ಸ್ ಹೇಗೆ?

2016ರ ಜೂನ್ ನಿಂದ ಸೆಪ್ಟೆಂಬರ್ ಮಧ್ಯೆ ಐಡಿಎಸ್ ಅಡಿಯಲ್ಲಿ ಆದಾಯ ಘೋಷಿಸಿಕೊಳ್ಳಲು ಕೇಂದ್ರ ಸರಕಾರ ಅವಕಾಶ ನೀಡಿತ್ತು. ಆ ನಂತರ ಮೂರು ಕಂತಿನಲ್ಲಿ ತೆರಿಗೆ ಪಾವತಿಸಲು ಕಾಲಾವಕಾಶ ಇತ್ತು.

English summary
Gujaratis declared a whopping Rs 18,000 crore in four months flat under the Income Declaration Scheme (IDS), about 29% of the total unaccounted money disclosed across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X