• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಓಡಿಹೋದ ಕಾರಣಕ್ಕೆ ಮಹಿಳೆಗೆ ಪತಿಯನ್ನು ಹೆಗಲ ಮೇಲೆ ಹೊರುವ ಶಿಕ್ಷೆ!

|
Google Oneindia Kannada News

ಅಹಮದಾಬಾದ್‌, ಜು.14: ದಾಹೋಡ್ ಜಿಲ್ಲೆಯ ಹಳ್ಳಿಯೊಂದರಲ್ಲಿ 23 ವರ್ಷದ ವಿವಾಹಿತ ಮಹಿಳೆಯೊಬ್ಬಳು ವಿವಾಹೇತರ ಸಂಬಂಧ ಹೊಂದಿದ್ದಕ್ಕಾಗಿ ಸಾರ್ವಜನಿಕವಾಗಿ ಆಕೆಗೆ ಅವಮಾನ ಮಾಡಲಾಗಿದೆ. ಅಷ್ಟೇ ಅಲ್ಲದೇ ಆಕೆಯ ಬಟ್ಟೆಯನ್ನು ಆಕೆಯ ಪತಿಯ ಕುಟುಂಬಸ್ಥರು ಬಿಚ್ಚಿದ್ದು, ಆಕೆಗೆ ಥಳಿಸಿ ಪತಿಯನ್ನು ಹೆಗಲ ಮೇಲೆ ಹೊರುವಂತೆ ಒತ್ತಾಯಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಬಳಿಕ ಆಕೆಯ ಮಾವ ಸೇರಿದಂತೆ 19 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

'2022 ರ ಗುಜರಾತ್ ಚುನಾವಣೆಯಲ್ಲಿ ಎಲ್ಲಾ ಸ್ಥಾನದಲ್ಲಿ ಆಪ್‌ ಸ್ಪರ್ಧೆ': ಅರವಿಂದ್ ಕೇಜ್ರಿವಾಲ್'2022 ರ ಗುಜರಾತ್ ಚುನಾವಣೆಯಲ್ಲಿ ಎಲ್ಲಾ ಸ್ಥಾನದಲ್ಲಿ ಆಪ್‌ ಸ್ಪರ್ಧೆ': ಅರವಿಂದ್ ಕೇಜ್ರಿವಾಲ್

ಮಹಿಳೆಯು ದಾಹೋಡ್ ಜಿಲ್ಲೆಯ ಧನ್ಪುರ್ ತಾಲೂಕಿನ ಖಜುರಿ ಗ್ರಾಮದ ನಿವಾಸಿ. ಮಹಿಳೆಯು ವಿವಾಹದ ಬಳಿಕ ಬೇರೊಬ್ಬ ಪುರುಷನೊಂದಿಗೆ ಸಂಬಂಧ ಹೊಂದಿದ್ದು, ಆತನೊಂದಿಗೆ ಊರು ಬಿಟ್ಟು ಓಡಿಹೋದಳು.

ಬಳಿಕ ಆಕೆ ಎಲ್ಲಿದ್ದಾಳೆ ಎಂದು ತಿಳಿದುಕೊಂಡ ಆಕೆಯ ಪತಿಯ ಕುಟುಂಬಸ್ಥರನ್ನಯ ಆಕೆಯನ್ನು ಹಳ್ಳಿಗೆ ಕರೆತಂದಿದ್ದಾರೆ. ಬಳಿಕ ಸಾರ್ವಜನಿಕವಾಗಿ ಅವಮಾನ ಮಾಡಿ, ಹಲ್ಲೆ ನಡೆಸಿದ್ದಾರೆ. ಪತಿಯನ್ನು ಹೆಗಲ ಮೇಲೆ ಹೊರುವಂತೆ ಒತ್ತಾಯಿಸಿದ್ದಾರೆ.

ಈ ವಿಚಾರದಲ್ಲಿ ಮಹಿಳೆ ಸಲ್ಲಿಸಿದ ದೂರಿನ ಪ್ರಕಾರ, ಆಕೆಯನ್ನು ಗ್ರಾಮಕ್ಕೆ ಕರೆತಂದ ನಂತರ ಆಕೆಯನ್ನು ನಿಲ್ಲಿಸಿ ತಳ್ಳಿ ಥಳಿಸಿದ್ದಾರೆ. ಆರೋಪಿಗಳು ಆಕೆಗೆ ಕೋಲುಗಳಿಂದ ಹೊಡೆದಿದ್ದಾರೆ. ಅಷ್ಟೇ ಅಲ್ಲದೇ ಆಕೆಯ ಬಟ್ಟೆಯನ್ನು ಹರಿದು ಹಾಕಿದ್ದಾರೆ.

ಗುಜರಾತ್‌: ಮತಾಂತರ ನಿಷೇಧ ಕಾನೂನಿನಡಿ ಮೊದಲ ಪ್ರಕರಣ- 6 ಜನರ ಬಂಧನಗುಜರಾತ್‌: ಮತಾಂತರ ನಿಷೇಧ ಕಾನೂನಿನಡಿ ಮೊದಲ ಪ್ರಕರಣ- 6 ಜನರ ಬಂಧನ

ಜುಲೈ 6 ರಂದು ನಡೆದ ಘಟನೆ ಸೋಮವಾರ ಬೆಳಕಿಗೆ ಬಂದಿದ್ದು, ಈ ಘಟನೆಯ ವಿಡಿಯೋ ವೈರಲ್ ಆಗಿದೆ. "ಮಹಿಳೆ ದೂರು ದಾಖಲಿಸಿದ ನಂತರ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಯಿತು. ಘಟನೆಯಲ್ಲಿ ಭಾಗಿಯಾದ 19 ಆರೋಪಿಗಳನ್ನು ಹೆಸರಿಸಲಾಗಿದೆ. ಅಪರಾಧಕ್ಕೆ ಸಂಬಂಧಿಸಿದಂತೆ ಆ ಪೈಕಿ 11 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ," ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಕಾನನ್ ದೇಸಾಯಿ ತಿಳಿಸಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
A 23-year-old married woman was thrashed and forced to carry her husband on her shoulders at a village in Dahod district for eloping with a man with whom she had an affair.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X