ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂತ್ರಿ ಮಗನನ್ನು ಬಂಧಿಸಿದ್ದ ಮಹಿಳಾ ಕಾನ್ಸ್‌ಟೇಬಲ್ ರಾಜೀನಾಮೆ!

|
Google Oneindia Kannada News

ಅಹಮದಾಬಾದ್, ಜುಲೈ 16: ಲಾಕ್‌ಡೌನ್‌ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಗುಜರಾತ್ ಸಚಿವರ ಮಗನನ್ನು ಬಂಧಿಸಿ ಗಮನ ಸೆಳೆದಿದ್ದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಸುನೀತಾ ಯಾದವ್ ಇಂದು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Recommended Video

Plasma ದಾನ ಮಾಡಿದರೆ 5000 ಕೊಡ್ತೀವಿ - Karnataka Government | Oneindia Kannada

''ಉನ್ನತ ಅಧಿಕಾರಿಗಳಿಂದ ನನಗೆ ಬೆಂಬಲ ಸಿಗದ ಕಾರಣ ನಾನು ರಾಜೀನಾಮೆ ನೀಡಿದ್ದೇನೆ. ನಾನು ಕಾನ್‌ಸ್ಟೆಬಲ್‌ ಆಗಿ ಮಾತ್ರ ನನ್ನ ಕರ್ತವ್ಯವನ್ನು ಮಾಡುತ್ತಿದ್ದೆ. ಅವರನ್ನು ವಿವಿಐಪಿಗಳು ಎಂದು ಭಾವಿಸುವುದು ನಮ್ಮ ವ್ಯವಸ್ಥೆಯ ತಪ್ಪು" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅತ್ಯಾಚಾರಿಯನ್ನು ರಕ್ಷಿಸುವುದಕ್ಕೆ 35 ಲಕ್ಷ ಲಂಚ ಕೇಳುವುದೇ ಪಿಎಸ್ಐ?ಅತ್ಯಾಚಾರಿಯನ್ನು ರಕ್ಷಿಸುವುದಕ್ಕೆ 35 ಲಕ್ಷ ಲಂಚ ಕೇಳುವುದೇ ಪಿಎಸ್ಐ?

ಆದರೆ, ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ರಾಜೀನಾಮೆ ನೀಡಿಲ್ಲ ಎಂದು ಹಿರಿಯ ಅಧಿಕಾರಿ ಈ ಸುದ್ದಿಯನ್ನು ನಿರಾಕರಿಸಿದ್ದಾರೆ. 'ಅವರು ರಾಜೀನಾಮೆಯನ್ನು ನೀಡಿಲ್ಲ. ವಿಚಾರಣೆ ಇನ್ನೂ ಮುಂದುವರೆದಿದೆ. ತಾಂತ್ರಿಕವಾಗಿ ಈ ಹಂತದಲ್ಲಿ ಅವರು ರಾಜೀನಾಮೆ ನೀಡಲು ಸಾಧ್ಯವಿಲ್ಲ" ಎಂದು ಸೂರತ್ ಪೊಲೀಸ್ ಆಯುಕ್ತ ಆರ್ ಬಿ ಬ್ರಹ್ಮಭಟ್ ಹೇಳಿದ್ದಾರೆ.

Gujarat Woman Constable Resigned Who Arrested Minister’s Son

ಕೊವಿಡ್ ವೈರಸ್ ಭೀತಿಯಲ್ಲಿ ಸೂರತ್‌ನಲ್ಲಿ ಭಾನುವಾರ ರಾತ್ರಿ ಕರ್ಫ್ಯೂ ಮತ್ತು ಲಾಕ್‌ಡೌನ್‌ ವಿಧಿಸಲಾಗಿತ್ತು. ಗುಜರಾತ್ ಆರೋಗ್ಯ ಸಚಿವ ಕುಮಾರ್ ಕಣಾನಿ ಅವರ ಮಗ ಪ್ರಕಾಶ್ ಕಣಾನಿ ಮತ್ತು ಸ್ನೇಹಿತರು ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ್ದನ್ನು ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಪ್ರಶ್ನಿಸಿದ್ದರು. ಲಾಕ್‌ಡೌನ್‌ ಉಲ್ಲಂಘನೆ ಅಡಿ ಪ್ರಕಾಶ್ ಕಣಾನಿ ಮತ್ತು ಸ್ನೇಹಿತರನ್ನು ಬಂಧಿಸಲಾಗಿತ್ತು.

ಈ ವೇಳೆ ಆರೋಗ್ಯ ಸಚಿವ ಕುಮಾರ್ ಕಣಾನಿ ಅವರು ಕಾನ್ಸ್‌ಟೇಬಲ್ ಜೊತೆ ಫೋನ್‌ನಲ್ಲಿ ಮಾತಿನ ಚಕಮಕಿ ನಡೆಸಿದ ವಿಡಿಯೋ ಸಾಮಾಜಿಕ ತಾಲಜಾಣದಲ್ಲಿ ವೈರಲ್ ಆಗಿತ್ತು. ಮಂತ್ರಿನ ಮಗ ಎನ್ನುವುದು ಲೆಕ್ಕಿಸದೆ ನಿಷ್ಠಾವಂತವಾಗಿ ಕಾರ್ಯನಿರ್ವಹಿಸಿದ್ದ ಮಹಿಳಾ ಪೊಲೀಸ್ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

ಈ ಘಟನೆ ಬಳಿಕ ಸುನೀತಾ ಯಾದವ್ ಲೇಡಿ ಸಿಂಗಂ ಎಂದು ಖ್ಯಾತಿ ಗಳಿಸಿದರು. ಇನ್ನು ಕೆಲವರು 2022ರ ಚುನಾವಣೆಯಲ್ಲಿ ಸ್ಪರ್ಧಿಸಿ ಎಂದು ಸಲಹೆ ನೀಡಿದರು.

English summary
Gujarat woman constable resigned who arrested minister’s son for lockdown violation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X