ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ನಲ್ಲಿ ‘ತ್ರಿವರ್ಣ ಯಾತ್ರೆ’: ‘ಗುಜರಾತ್ ಬದಲಾವಣೆ ಬಯಸಿದೆ’ ಕೇಜ್ರಿವಾಲ್

|
Google Oneindia Kannada News

ಗಾಂಧಿನಗರ ಜೂನ್ 6: ಚುನಾವಣೆಗೂ ಮುನ್ನ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಸಂಜೆ ಗುಜರಾತ್‌ನ ಮೆಹ್ಸಾನಾದಲ್ಲಿ 'ತ್ರಿವರ್ಣ ಯಾತ್ರೆ' ನಡೆಸಿದರು. ಮೆಹ್ಸಾನಾ ಬಿಜೆಪಿ ಭದ್ರಕೋಟೆಯಾಗಿದೆ ಇತ್ತೀಚಿನ ದಿನಗಳಲ್ಲಿ ಕೇಜ್ರಿವಾಲ್ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಇದು ನಾಲ್ಕನೇ ಬಾರಿಯಾಗಿದೆ.

'ತಿರಂಗಾ ಯಾತ್ರೆ' ವೇಳೆ ಕೇಜ್ರಿವಾಲ್ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿ ಗುಜರಾತ್ ಬದಲಾವಣೆ ಬಯಸಿದೆ ಎಂದು ಹೇಳಿದರು. ನಮ್ಮ ಪಕ್ಷದ ಸದಸ್ಯರು ರಾಜ್ಯದ ವಿವಿಧ ಕ್ಷೇತ್ರಗಳಿಗೆ ಹೋಗಿದ್ದಾರೆ. ಅವರು ಸಾವಿರಾರು ಜನರೊಂದಿಗೆ ಸಂವಾದ ನಡೆಸಿದ್ದಾರೆ ಎಂದು ಹೇಳಿದರು.

ಕಾಶ್ಮೀರದಲ್ಲಿ ಪರಿಸ್ಥಿತಿ ನಿಭಾಯಿಸಲು ಬಿಜೆಪಿ ವಿಫಲ: ಅರವಿಂದ ಕೇಜ್ರಿವಾಲ್ಕಾಶ್ಮೀರದಲ್ಲಿ ಪರಿಸ್ಥಿತಿ ನಿಭಾಯಿಸಲು ಬಿಜೆಪಿ ವಿಫಲ: ಅರವಿಂದ ಕೇಜ್ರಿವಾಲ್

‘ತ್ರಿವರ್ಣ ಯಾತ್ರೆ’ ಭಾಗವಹಿಸಲು ಕೇಜ್ರಿವಾಲ್ ಮನವಿ

‘ತ್ರಿವರ್ಣ ಯಾತ್ರೆ’ ಭಾಗವಹಿಸಲು ಕೇಜ್ರಿವಾಲ್ ಮನವಿ

ಈ ಹಿಂದೆ "ತ್ರಿವರ್ಣ ಧ್ವಜ ನಮ್ಮ ಹೆಮ್ಮೆ" ಎಂದು ಒತ್ತಿಹೇಳಿರುವ ಕೇಜ್ರಿವಾಲ್ ಈ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಜನರನ್ನು ಒತ್ತಾಯಿಸಿದ್ದರು. "ತ್ರಿವರ್ಣ ಧ್ವಜ ನಮ್ಮ ಹೆಮ್ಮೆ. ತ್ರಿವರ್ಣ ಧ್ವಜ ನಮ್ಮ ಧ್ವಜ. ತ್ರಿವರ್ಣ ಧ್ವಜ ನಮ್ಮ ಜೀವನ. ಇಂದು ಸಂಜೆ ಗುಜರಾತ್‌ನ ಮೆಹ್ಸಾನಾದಲ್ಲಿ ತ್ರಿವರ್ಣ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇನೆ. ಗುಜರಾತಿನ ಎಲ್ಲಾ ಜನರು ಇದರಲ್ಲಿ ಭಾಗವಹಿಸಬೇಕು. ಇದು ನನ್ನ ವಿನಂತಿ" ಎಂದು ಅವರು ಟ್ವೀಟ್ ಮಾಡಿದ್ದರು.

ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡ ಹಾರ್ದಿಕ್ ಪಟೇಲ್ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡ ಹಾರ್ದಿಕ್ ಪಟೇಲ್

ರಾಜ್‌ಕೋಟ್‌ನಲ್ಲಿ ರ್‍ಯಾಲಿ

ರಾಜ್‌ಕೋಟ್‌ನಲ್ಲಿ ರ್‍ಯಾಲಿ

ಈ ಹಿಂದೆ, ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಏಪ್ರಿಲ್ 2 ರಂದು ಅಹಮದಾಬಾದ್‌ನಲ್ಲಿ ರೋಡ್‌ಶೋ ನಡೆಸಿದ್ದರು. ಇದಕ್ಕೂ ಮೊದಲು ಮೇ 11 ಮತ್ತು ಮೇ 1 ರಂದು ಗುಜರಾತ್‌ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಕ್ರಮವಾಗಿ ಭರೂಚ್ ಮತ್ತು ರಾಜ್‌ಕೋಟ್‌ನಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು.

ಎಸ್‌ಎಂಸಿ ರೇಸ್‌ನಲ್ಲಿ ಎಎಪಿಗೆ 27 ಸ್ಥಾನ

ಎಸ್‌ಎಂಸಿ ರೇಸ್‌ನಲ್ಲಿ ಎಎಪಿಗೆ 27 ಸ್ಥಾನ

2017 ರ ವಿಧಾನಸಭಾ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಪಕ್ಷ ಪಾದಾರ್ಪಣೆ ಮಾಡಿತ್ತು, ಆದರೆ ಅದರ ಖಾತೆಯನ್ನು ತೆರೆಯಲು ಸಾಧ್ಯವಾಗಲಿಲ್ಲ. 2021 ರ ಸೂರತ್ ಮುನ್ಸಿಪಲ್ ಕಾರ್ಪೊರೇಶನ್ (ಎಸ್‌ಎಂಸಿ) ಚುನಾವಣೆಯಲ್ಲಿ ಬಿಜೆಪಿ 93 ಸ್ಥಾನಗಳನ್ನು ಗೆದ್ದುಕೊಂಡಿತು. ಆದರೆ ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಎಎಪಿ 27 ಸ್ಥಾನಗಳನ್ನು ಗೆದ್ದುಕೊಂಡಿತು, ಕಾಂಗ್ರೆಸ್ ಯಾವುದೇ ಸ್ಥಾನವನ್ನು ಪಡೆದುಕೊಳ್ಳಲಿಲ್ಲ.

ಗೆಲುವಿನ ವಿಶ್ವಾಸವಿದೆ- ಸಿಸೋಡಿಯಾ

ಗೆಲುವಿನ ವಿಶ್ವಾಸವಿದೆ- ಸಿಸೋಡಿಯಾ

ಶುಕ್ರವಾರ, ದೆಹಲಿ ಉಪಮುಖ್ಯಮಂತ್ರಿ ಮತ್ತು ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರು ಗುಜರಾತ್‌ನ ಎಲ್ಲಾ 182 ಸ್ಥಾನಗಳಲ್ಲಿ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದಾರೆ. ಎಎಪಿ ಸ್ಪರ್ಧಿಸುವುದರೊಂದಿಗೆ ಸಿಸೋಡಿಯಾ ಅವರು, "ರಾಜ್ಯದ ಜನರು ಚುನಾವಣೆಯಲ್ಲಿ ಎಎಪಿಯನ್ನು ಆಯ್ಕೆ ಮಾಡುತ್ತಾರೆ" ಎಂದು ಹೇಳಿದ್ದಾರೆ.

ಪಂಜಾಬ್‌ನಲ್ಲಿ ಪ್ರಮುಖ ವಿಜಯವನ್ನು ಗಳಿಸಿದ ನಂತರ, ಎಎಪಿ ಈಗ ಇತರ ರಾಜ್ಯಗಳಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುತ್ತಿದೆ. ಸುಮಾರು ಮೂರು ದಶಕಗಳಿಂದ ರಾಜ್ಯದಲ್ಲಿ ಭದ್ರಕೋಟೆಯನ್ನು ಹೊಂದಿದ್ದ ಬಿಜೆಪಿ ವಿರುದ್ಧವಾಗಿ ಗುಜರಾತ್‌ನಲ್ಲಿ ಆಪ್ ಸ್ಪರ್ಧಿಸಲಿದೆ.

Recommended Video

ಏನ್ ಗುರೂ.... Hardik Pandya, ಬಗ್ಗೆ ಎಂಥಾ‌ ಮಾತು ಹೇಳ್ಬಿಟ್ರು Ravi Shastri | *Cricket | OneIndia Kannada

English summary
Delhi Chief Minister and Aam Aadmi Party's National Convener Arvind Kejriwal, held a tricolor trip in Mehsana, Gujarat on Monday evening before the elections. says Gujarat wants change.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X