• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸರ್ದಾರ್ ವಿಗ್ರಹದ ಸುತ್ತ ಅಭಿವೃದ್ಧಿ ಕಾರ್ಯಕ್ಕೆ ಬುಡಕಟ್ಟು ಜನಾಂಗದವರ ವಿರೋಧ

|

ಅಹ್ಮದಾಬಾದ್ (ಗುಜರಾತ್), ಜನವರಿ 28: ಗುಜರಾತ್ ನಲ್ಲಿರುವ ಏಕತಾ ಮೂರ್ತಿ ಸುತ್ತಮುತ್ತ ನಡೆಯುತ್ತಿರುವ ಮೂಲಸೌಕರ್ಯ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಮತ್ತಷ್ಟು ಉಗ್ರ ಸ್ವರೂಪ ಪಡೆದಿದೆ. ಸೋಮವಾರದಂದು ಸಾವಿರಾರು ಸಂಖ್ಯೆಯಲ್ಲಿ ಬುಡಕಟ್ಟು ಜನಾಂಗದವರು ನರ್ಮದ ಜಿಲ್ಲೆಯಲ್ಲಿ ಕೇವಾಡಿಯದಿಂದ ರಾಜ್ ಪಿಪ್ಲಾ ತನಕ ಮೂವತ್ತು ಕಿ.ಮೀ. ಪಾದಯಾತ್ರೆ ನಡೆಸಿದ್ದಾರೆ.

ವಿಶ್ವದ ಅತಿ ದೊಡ್ಡ ವಿಗ್ರಹ ಎಂದು ಖ್ಯಾತಿ ಪಡೆದಿರುವ ಸರ್ದಾರ್ ವಲ್ಲಭ ಭಾಯ್ ಪಟೇಲ್ ವಿಗ್ರಹದ ಬಳಿ ಹರಿಯಾಣ ಭವನಕ್ಕೆ ಶಂಕುಸ್ಥಾಪನೆ ಕಳೆದ ವಾರ ಆಯೋಜಿಸಿದ್ದ ವೇಳೆ ಬುಡುಕಟ್ಟು ಸಮುದಾಯದವರು ಹಾಗೂ ಪೊಲೀಸರ ಮಧ್ಯ ವಾಗ್ವಾದ ಆಗಿತ್ತು. ಅಂದಹಾಗೆ ಸರ್ದಾರ್ ವಿಗ್ರಹವು ಕೇವಾಡಿಯದ ಸರ್ದಾರ್ ಸರೋವರ್ ಅಣೆಕಟ್ಟಿನ ಬಳಿಯೇ ಇದೆ.

ಕಳೆದ ವರ್ಷ ಅಕ್ಟೋಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸರ್ದಾರ್ ವಿಗ್ರಹವನ್ನು ಉದ್ಘಾಟನೆ ಮಾಡಿದ ದಿನದಿಂದ ಹದಿನೈದಕ್ಕೂ ಹೆಚ್ಚು ಹಳ್ಳಿಗಳ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ವಿಗ್ರಹ ಇರುವ ಸ್ಥಳದಲ್ಲಿ ಅತಿಥಿ ಗೃಹಗಳನ್ನು ನಿರ್ಮಿಸಿಕೊಳ್ಳುವಂತೆ ಗುಜರಾತ್ ಸರಕಾರವು ವಿವಿಧ ರಾಜ್ಯಗಳಿಗೆ ಆಹ್ವಾನ ನೀಡಿದೆ.

ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬಾರದೆಂದು ಮನವಿ

ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬಾರದೆಂದು ಮನವಿ

ಭಿಲಿಸ್ತಾನ್ ಟೈಗರ್ ಸೇನಾ, ಆದಿವಾಸಿ ಏಕತಾ ಪರಿಷದ್, ಸಮಸ್ತ್ ಆದಿವಾಸಿ ಸಮಾಜ್, ಇಂಡಿಜಿನಿಯಸ್ ಆರ್ಮಿ ಆಫ್ ಇಂಡಿಯಾ, ರಾಯಲ್ ರಥ್ವಾ ಗ್ರೂಪ್, ಜಮೀನ್ ‌ಆದಿವಾಸಿ ಬಚಾವೋ ಆಂದೋಲನ್ ಸಮಿತಿ, ಆದಿವಾಸಿ ಮಹಾಸಭಾ ಹಾಗೂ ಇತರ ಗುಂಪುಗಳು ಸೇರಿ ನರ್ಮದಾ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದವು. ಈ ಪ್ರದೇಶದಲ್ಲಿ ಇನ್ಮುಂದೆ ಮೂಲಸೌಕರ್ಯ ಅಭಿವೃದ್ಧಿ ಕೈಗೊಳ್ಳಬಾರದು, ಕಳೆದ ವಾರ ಪ್ರತಿಭಟನೆ ನಡೆಸಿದ ಬುಡಕಟ್ಟು ಸಮುದಾಯದ ನಾಯಕರ ವಿರುದ್ಧ ದಾಖಲಿಸಿದ ಪ್ರಕರಣಗಳನ್ನು ಹಿಂಪಡೆಯಬೇಕು ಎಂಬುದು ಸೇರಿ ವಿವಿಧ ಮನವಿ ಒಳಗೊಂಡ ಪತ್ರವನ್ನು ಸಲ್ಲಿಸಿದ್ದೇವೆ ಎಂದು ಬುಡಕಟ್ಟು ಸಮುದಾಯದ ಮುಖಂಡ ಪ್ರಫುಲ್ ವಸವ ತಿಳಿಸಿದ್ದಾರೆ.

ಬುಡಕಟ್ಟು ಸಮುದಾಯದವರ ಸ್ಥಳಾಂತರ

ಬುಡಕಟ್ಟು ಸಮುದಾಯದವರ ಸ್ಥಳಾಂತರ

ವಿಶ್ವದ ಅತಿ ದೊಡ್ಡ ವಿಗ್ರಹ ಸ್ಥಾಪನೆ ಮಾಡುವ ಮೂಲಕ ಈ ಭಾಗದಲ್ಲಿ ಈಗಾಗಲೇ ಸಾಕಷ್ಟು ಹಾನಿ ಮಾಡಲಾಗಿದೆ ಎಂದು ಬುಡಕಟ್ಟು ಸಮಾಜದವರು ಆರೋಪಿಸಿದ್ದಾರೆ. "ರಸ್ತೆಗಳನ್ನು ಮಾಡುವ ಸಲುವಾಗಿ ಹಲವಾರು ಮರಗಳಿಗೆ ಕೊಡಲಿ ಹಾಕಲಾಗಿದೆ. ಬುಡಕಟ್ಟು ಸಮುದಾಯದವರನ್ನು ಸ್ಥಳಾಂತರ ಮಾಡಿಸಲಾಗಿದೆ. ಈಗ ಅತಿಥಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ" ಎಂದು ವಸವ ಹೇಳಿದ್ದಾರೆ.

ಅತಿಥಿಗೃಹ ನಿರ್ಮಾಣ ವಿರೋಧಿಸಿ ನಿರ್ಣಯ

ಅತಿಥಿಗೃಹ ನಿರ್ಮಾಣ ವಿರೋಧಿಸಿ ನಿರ್ಣಯ

ಯಾವುದೇ ರಾಜ್ಯದ ಅತಿಥಿಗೃಹ ನಿರ್ಮಾಣ ಆಗಬಾರದು ಎಂದು ಕೇವಡಿಯ ಗ್ರಾಮ ಪಂಚಾಯಿತಿಯಿಂದ ನಿರ್ಣಯ ಕೈಗೊಂಡಿದ್ದರೂ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹರಿಯಾಣ ಸರಕಾರದ ಅತಿಥಿ ಗೃಹ ನಿರ್ಮಾಣದ ಶಂಕುಸ್ಥಾಪನೆಗೆ ಅವಕಾಶ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಫೈವ್ ಸ್ಟಾರ್ ವಾಸ್ತವ್ಯದ ವ್ಯವಸ್ಥೆ

ಫೈವ್ ಸ್ಟಾರ್ ವಾಸ್ತವ್ಯದ ವ್ಯವಸ್ಥೆ

ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಗುಜರಾತ್ ಸರಕಾರ ಈಗಾಗಲೇ ಫೈವ್ ಸ್ಟಾರ್ ವಾಸ್ತವ್ಯದ ವ್ಯವಸ್ಥೆಗಳನ್ನು ಮಾಡಿದೆ. ಜತೆಗೆ ಸರ್ದಾರ್ ಸರೋವರ್ ಡ್ಯಾಮ್ ನಲ್ಲಿ ಸೀ ಪ್ಲೇನ್ ಇಳಿಲು ವ್ಯವಸ್ಥೆ ಮಾಡಲಾಗಿದೆ. ಅಲ್ಲಿಗೆ ಅಹ್ಮದಾಬಾದ್ ನಂಥ ನಗರಗಳಿಂದ ಸಂಪರ್ಕ ಕಲ್ಪಿಸಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Intensifying their protests against infrastructure development around Statue of Unity in Gujarat, thousands of tribals Monday took out a 30-km foot rally from Kevadiya to Rajpipla in Narmada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more