• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತನ್ನ ವೀರ್ಯದಿಂದ ತಾನೇ ಮಗು ಹೆರಲು ಮುಂದಾದ ಗುಜರಾತ್‌ ಮಂಗಳಮುಖಿ ವೈದ್ಯೆ

|
Google Oneindia Kannada News

ಅಹಮದಾಬಾದ್, ಫೆಬ್ರವರಿ 18: ಗಂಡಾಗಿ ಹುಟ್ಟಿ ಹೆಣ್ಣಾಗಿ ಪರಿವರ್ತನೆಯಾಗಿರುವ ಮಂಗಳಮುಖಿ ವೈದ್ಯರೊಬ್ಬರು ತಮ್ಮ ವೀರ್ಯದಿಂದ ತಾವೇ ಮಗು ಹೆರಲು ಸಿದ್ಧರಾಗಿದ್ದು, ಇದಕ್ಕಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ.

25 ವರ್ಷದ ಜೆನ್ಸೂರ್ ದಯಾರಾ, ಗುಜರಾತ್ ನ ಮೊದಲ ಮಂಗಳಮುಖಿ ವೈದ್ಯೆ ಎನಿಸಿಕೊಂಡವರು. ರಷ್ಯಾದ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಪದವಿ ಪಡೆದಿರುವ ಅವರು, ಗುಜರಾತ್‌ನ ಪಂಚಮಹಲ್ ಗೋಧ್ರಾ ಇವರ ಹುಟ್ಟೂರು. ಗಂಡಾಗಿ ಹುಟ್ಟಿ ಆನಂತರ ಹೆಣ್ಣಾಗಿ ಪರಿವರ್ತನೆಯಾಗಿರುವ ಇವರು, ವೈದ್ಯ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಮಂಗಳಮುಖಿಯಿಂದಲೇ ತನ್ನ ಮಗುವಿಗೆ ಅಮೃತಧಾರೆ!ಮಂಗಳಮುಖಿಯಿಂದಲೇ ತನ್ನ ಮಗುವಿಗೆ ಅಮೃತಧಾರೆ!

"ನನಗೆ ಮಗು ಪಡೆಯಬೇಕೆಂಬ ಹಂಬಲವಿದೆ. ಹೀಗಾಗಿ ಗರ್ಭಕೋಶ ಕಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದೇನೆ. ನನ್ನ ವೀರ್ಯವನ್ನು ಘನೀಕೃತ ಪ್ರಕ್ರಿಯೆಯಲ್ಲಿ ಶೇಖರಿಸಿಟ್ಟಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾದರೆ, ಕೃತಕ ಗರ್ಭಧಾರಣೆ ಮೂಲಕ ನಾನು ನನ್ನದೇ ಮಗು ಪಡೆಯಲು ಸಾಧ್ಯವಿದೆ. ಇದು ಸಾಧ್ಯವಾಗಿಲ್ಲವಾದರೆ ಬಾಡಿಗೆ ತಾಯಿ ಮೂಲಕ ಮಗು ಪಡೆಯುತ್ತೇನೆ" ಎಂದು ಡಾ. ಜೆನ್ಸೂರ್ ದಯಾರಾ ತಿಳಿಸಿದ್ದಾರೆ.

2019ರ ಲೋಕಸಭಾ ಅಧಿವೇಶನದಲ್ಲಿ ಬಾಡಿಗೆ ತಾಯ್ತನದ ಕುರಿತು ಕಾಯ್ದೆ ತರಲಾಯಿತು. ಆದರೆ ಇದರಲ್ಲಿ ಒಂಟಿ ಪುರುಷ ಅಥವಾ ಗೇ, ಲೆಸ್ಬಿಯನ್, ಬೈಸೆಕ್ಸುಯಲ್ ಹಾಗೂ ಮಂಗಳಮುಖಿ ದಂಪತಿ ಅಥವಾ ಲಿವ್ ಇನ್ ರಿಲೇಷನ್ ‌ಷಿಪ್ ‌ನಲ್ಲಿರುವವರು ಬಾಡಿಗೆ ತಾಯ್ತನಕ್ಕೆ ಅರ್ಹರಲ್ಲ ಎಂದು ತಿಳಿಸಿದೆ. ಹೀಗಾಗಿ ಬಾಡಿಗೆ ತಾಯ್ತನ ಅಥವಾ ಗರ್ಭಧಾರಣೆ ಕುರಿತು ಯಾವುದೇ ಕಠಿಣ ಕಾನೂನು ಇಲ್ಲದಿರುವ ಕಾರಣ ವಿದೇಶದಲ್ಲಿ ನೆಲೆಸಲಿರುವುದಾಗಿ ಹೇಳಿದ್ದಾರೆ.

"ನಾನು ಮಂಗಳಮುಖಿ ಎಂಬುದನ್ನು ನನಗೆ ನಾನೇ ಒಪ್ಪಿಸಿಕೊಳ್ಳಲು, ನನ್ನ ಕುಟುಂಬ ಹಾಗೂ ಸಮಾಜವನ್ನು ಒಪ್ಪಿಸಲು ಸಾಕಷ್ಟು ಧೈರ್ಯ ತೆಗೆದುಕೊಂಡಿದ್ದೆ. ಈಗ ಮಗು ಪಡೆಯಲು ಇನ್ನಷ್ಟು ಧೈರ್ಯದ ಅಗತ್ಯವಿದೆ. ಈ ವರ್ಷ ಅಥವಾ ಮುಂದಿನ ವರ್ಷ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದೇನೆ. ನಂತರ ನಾನು ಸಂಪೂರ್ಣ ಮಹಿಳೆ ಎನಿಸಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.

English summary
A transwoman doctor from gujarath, wants to give birth to a child with her own frozen semen. She is planning to undergo an enabling surgery
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X