ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ ವಿದ್ಯಾರ್ಥಿಗಳು 'ಎಸ್‌ ಸಾರ್' ಅನ್ನೊಂಗಿಲ್ಲ, 'ಜೈ ಹಿಂದ್‌' ಅನ್ಬೇಕು

|
Google Oneindia Kannada News

ಗಾಂಧಿನಗರ, ಜನವರಿ 01: ಶಾಲೆಯಲ್ಲಿ ಹಾಜರಾತಿ ಸಮಯ ಮಕ್ಕಳು 'ಎಸ್‌ ಸಾರ್' ಅನ್ನುವಂತಿಲ್ಲ ಅದರ ಬದಲಿಗೆ 'ಜೈ ಹಿಂದ್' ಎನ್ನಬೇಕು ಎಂದು ಸುತ್ತೋಲೆಯನ್ನು ಬಿಜೆಪಿ ಆಡಳಿತದ ಗುಜರಾತ್‌ನಲ್ಲಿ ಹೊರಡಿಸಲಾಗಿದೆ.

ಮೈಸೂರಿನ ರಸ್ತೆ ಮಧ್ಯೆ ಇರುವೆ ಕಟ್ಟಿದೆ ಸಣ್ಣ ಸೇತುವೆ!ಮೈಸೂರಿನ ರಸ್ತೆ ಮಧ್ಯೆ ಇರುವೆ ಕಟ್ಟಿದೆ ಸಣ್ಣ ಸೇತುವೆ!

ಗುಜರಾತ್‌ನ ಎಲ್ಲ ಶಾಲೆಗಳಲ್ಲೂ ಇನ್ನು ಮುಂದೆ ವಿದ್ಯಾರ್ಥಿಗಳು ಎಸ್‌ ಸಾರ್, ಎಸ್‌ ಮೇಡಂ ಬದಲಿಗೆ, ಜೈ ಹಿಂದ್ ಅಥವಾ ಜೈ ಭಾರತ್‌ ಎಂದೇ ಹೇಳಬೇಕಂತೆ. ಹೀಗೆಂದು ಗುಜರಾತ್‌ ಸರ್ಕಾರದ ಶಿಕ್ಷಣ ಇಲಾಖೆ ಎಲ್ಲ ಶಾಲೆಗಳಿಗೂ ಸುತ್ತೋಲೆಯೊಂದನ್ನು ಹೊರಡಿಸಿದೆ.

ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್: ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಬಂಧನ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್: ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಬಂಧನ

ದೇಶಭಕ್ತಿ ಹೆಚ್ಚಿಸಲು ಈ ಕ್ರಮ ಕೈಗೊಂಡಿರುವುದಾಗಿ ಗುಜರಾತ್ ಶಿಕ್ಷಣ ಇಲಾಖೆ ಹೇಳಿದೆ. 'ನಾನು ವಿದ್ಯಾರ್ಥಿಯಾಗಿದ್ದಾಗ, 'ಜೈ ಹಿಂದ್, ಅಥವಾ ಜೈ ಭಾರತ್ ಹೇಳುವುದು ಕಡ್ಡಾಯವಾಗಿತ್ತು' ಎಂದು ಗುಜರಾತ್‌ ಶಿಕ್ಷಣ ಸಚಿವ ಭುಪೇಂದ್ರಸಿಂಹ ಚುಡಾಸಮಾ ಹೇಳಿದ್ದಾರೆ. ಹಾಗೂ ಸುತ್ತೋಲೆಯನ್ನು ಸಮರ್ಥಿಸಿಕೊಂಡಿದ್ದಾರೆ.

Gujarat school students should say Jai Hind instead of yes sir

ಒಬ್ಬ ವಿದ್ಯಾರ್ಥಿ 10,000 ಕ್ಕೂ ಹೆಚ್ಚು ಬಾರಿ ಎಸ್‌ ಸರ್ ಅಥವಾ ಎಸ್‌ ಮೇಡಂ ಹೇಳುತ್ತಾನೆ. ಅದರ ಬದಲಿಗೆ ಜೈ ಹಿಂದ್, ಜೈ ಭಾರತ್ ಎಂದು ಹೇಳಿದರೆ ಆತನಲ್ಲಿ ದೇಶಭಕ್ತಿ ಜಾಗೃತವಾಗುತ್ತದೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.

ಪಾಕ್ ಗೆ ನೀವು ಕಲಿಸಿದ ಪಾಠವೇನು ತಿಳಿಸಿ ಮೋದಿ ಎಂದ ಅಹ್ಮದ್ ಪಟೇಲ್ ಪಾಕ್ ಗೆ ನೀವು ಕಲಿಸಿದ ಪಾಠವೇನು ತಿಳಿಸಿ ಮೋದಿ ಎಂದ ಅಹ್ಮದ್ ಪಟೇಲ್

ಈ ಕ್ರಮದ ಪರ ವಿರೋಧ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಆರಂಭವಾಗಿದೆ.

English summary
Gujarat school students should say Jai hind or Jai Bharat instead of yes sir or yes madam. Gujarat education department serves circular about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X