ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಮಳೆ: ಶಾಲೆ- ಕಾಲೇಜುಗಳಿಗೆ ರಜೆ: ಹಲವು ನಗರಗಳು ಜಲಾವೃತ

|
Google Oneindia Kannada News

ಅಹಮದಾಬಾದ್‌ ಜುಲೈ 11: ಗುಜರಾತ್‌ನ ಕೆಲವು ಭಾಗಗಳಲ್ಲಿ ಭಾನುವಾರ ಭಾರೀ ಮಳೆಯಾಗಿದ್ದು, ಕೆಲವು ನದಿಗಳ ನೀರಿನ ಮಟ್ಟ ಏರಿಕೆಯಿಂದಾಗಿ ಪ್ರವಾಹದಂತಹ ಪರಿಸ್ಥಿತಿಗೆ ನಿರ್ಮಾಣವಾಗಿದೆ. ಛೋಟೌದೇಪುರ ಸೇರಿದಂತೆ ದಕ್ಷಿಣ ಗುಜರಾತ್‌ನಲ್ಲಿ ಭಾರಿ ಮಳೆಯಿಂದಾಗಿ ಉಂಟಾಗಿರುವ ಪರಿಸ್ಥಿತಿಯನ್ನು ಎದುರಿಸಲು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಲು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಭಾನುವಾರ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದಿಂದ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ವಲ್ಸಾದ್, ನವಸಾರಿ, ತಾಪಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಪಾಲ್ಡಿ, ವಸಾನ ಮತ್ತು ಎಲ್ಲಿಸ್ ಸೇತುವೆ ಪ್ರದೇಶಗಳಲ್ಲಿ ಗರಿಷ್ಠ 241.3 ಮಿಮೀ ಮಳೆಯಾಗಿದೆ. ಕಳೆದ ಮೂರು ದಿನಗಳಲ್ಲಿ ಅಹಮದಾಬಾದ್‌ನಲ್ಲಿ ಋತುವಿನ ಶೇಕಡ 30ರಷ್ಟು ಮಳೆಯಾಗಿದೆ. ಗುಜರಾತ್‌ನ ಖೇಡಾ ಜಿಲ್ಲೆಯ ನಾಡಿಯಾಡ್‌ನ ವಿವಿಧ ಪ್ರದೇಶಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿದೆ. ಭಾರಿ ಮಳೆಯ ನಡುವೆ ಗುಜರಾತ್ ವಿಪತ್ತು ನಿರ್ವಹಣಾ ಸಚಿವ ರಾಜೇಂದ್ರ ತ್ರಿವೇದಿ ಅವರು ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ರಾಜ್ಯವು ವ್ಯವಸ್ಥೆ ಮಾಡಿದೆ ಎಂದು ಭಾನುವಾರ ಹೇಳಿದ್ದಾರೆ.

700 ಜನರ ಸ್ಥಳಾಂತರ

ಪ್ರವಾಹದಂತಹ ಪರಿಸ್ಥಿತಿಯ ನಡುವೆ, ಭಾನುವಾರವೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಸುಮಾರು 700 ಜನರನ್ನು ಸ್ಥಳಾಂತರಿಸಲಾಯಿತು. ಅವರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ. NDRF ಮತ್ತು ಸ್ಥಳೀಯ ಆಡಳಿತದ ಹಲವಾರು ತಂಡಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ನಡೆಸಿವೆ.

ಸುದ್ದಿ ವಾಹಿನಿಗಳು ಹಂಚಿಕೊಂಡ ವಿಡಿಯೊ ವಲ್ಸಾದ್‌ನಲ್ಲಿನ ಜಲಪಾತದ ವೈಮಾನಿಕ ನೋಟವನ್ನು ತೋರಿಸಿದೆ.

ಭಾರಿ ಮಳೆಯ ಮುನ್ಸೂಚನೆ

ಭಾರಿ ಮಳೆಯ ಮುನ್ಸೂಚನೆ

ಭಾರತೀಯ ಹವಾಮಾನ ಇಲಾಖೆ (IMD) ಭಾನುವಾರದಂದು ದಕ್ಷಿಣ ಗುಜರಾತ್‌ನ ಜಿಲ್ಲೆಗಳಾದ ಡ್ಯಾಂಗ್, ನವಸಾರಿ ಮತ್ತು ವಲ್ಸಾದ್‌ನಲ್ಲಿ ಮುಂದಿನ ಐದು ದಿನಗಳಲ್ಲಿ ಪ್ರತ್ಯೇಕವಾದ ಅತ್ಯಂತ ಮಳೆಯಾಗಲಿದೆ ಎಂದು ತಿಳಿದಿದೆ. ಜೊತೆಗೆ ಈ ಪ್ರದೇಶದ ತಗ್ಗು ಪ್ರದೇಶದಲ್ಲಿ ವಾಸವಾಗಿರುವ ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ಸೂಚನೆಯನ್ನು ನಿಡಲಾಗಿದೆ.

ಈ ಅವಧಿಯಲ್ಲಿ ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರದ ಹಲವಾರು ಇತರ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಹೇಳಿದೆ.

ತಗ್ಗು ಪ್ರದೇಶಗಳಿಗೆ ನೀರು

ತಗ್ಗು ಪ್ರದೇಶಗಳಿಗೆ ನೀರು

ತೀವ್ರ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ಈ ಹಠಾತ್ ಪ್ರವಾಹ ಮತ್ತು ನಿರಂತರ ಭಾರಿ ಮಳೆಯಿಂದಾಗಿ ತಾಪಿ ಜಿಲ್ಲೆಯ ಪಂಚೋಲ್ ಮತ್ತು ಕುಂಬಿಯಾ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಸೇತುವೆ ಕೊಚ್ಚಿಹೋಗಿದೆ. ದಕ್ಷಿಣ ಗುಜರಾತ್‌ನ ಹಲವು ಭಾಗಗಳಲ್ಲಿ ನದಿಗಳು ಅಪಾಯಕಾರಿ ಮಟ್ಟವನ್ನು ದಾಟಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ.

ನವಸಾರಿ ಮತ್ತು ವಲ್ಸಾದ್ ಜಿಲ್ಲೆಗಳಲ್ಲಿ 700ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇದೇ ವೇಳೆ ಛೋಟಾ ಉದಯಪುರ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸೇತುವೆಯ ಒಂದು ಭಾಗ ಕುಸಿದಿದೆ.

ಎಲ್ಲೆಲ್ಲಿ ಮಳೆ ಮುನ್ಸೂಚನೆ

ಎಲ್ಲೆಲ್ಲಿ ಮಳೆ ಮುನ್ಸೂಚನೆ

ರೆಡ್ ಅಲರ್ಟ್ 24-ಗಂಟೆಗಳ ಅವಧಿಯಲ್ಲಿ 20 ಸೆಂ.ಮೀ ಗಿಂತ ಹೆಚ್ಚಿನ ಭಾರಿ ಮಳೆಯನ್ನು ಸೂಚಿಸುತ್ತದೆ, ಆದರೆ ಕಿತ್ತಳೆ ಎಚ್ಚರಿಕೆ ಎಂದರೆ 6 ಸೆಂ.ಮೀ ನಿಂದ 20 ಸೆಂ.ಮೀ ಮಳೆಯ ನಡುವೆ ಅತಿ ಹೆಚ್ಚು ಮಳೆಯಾಗುವುದನ್ನು ಸೂಚಿಸುತ್ತದೆ. ಹಳದಿ ಎಚ್ಚರಿಕೆ ಎಂದರೆ 6 ರಿಂದ 11 ಸೆಂಟಿಮೀಟರ್‌ಗಳ ನಡುವೆ ಹೆಚ್ಚಿನ ಮಳೆಯಾಗುವುದನ್ನು ಸೂಚಿಸುತ್ತದೆ.

ಮುಂದಿನ ಐದು ದಿನಗಳಲ್ಲಿ ಕೇರಳದ ದಕ್ಷಿಣ ಭಾಗದಲ್ಲಿ ಅಧಿಕ ಮಳೆಯಾಗುವ ಸಾಧ್ಯತೆಯಿದೆ. ಜುಲೈ 10, 13 ಮತ್ತು 14 ರಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು IMD ತಿಳಿಸಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಜುಲೈ 3 ಮತ್ತು 7 ರ ನಡುವೆ ಕೇರಳದಾದ್ಯಂತ ಮಳೆ ಸಂಬಂಧಿತ ಘಟನೆಗಳಲ್ಲಿ ಆರು ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಹಲವಾರು ಮನೆಗಳಿಗೆ ಹಾನಿಯಾಗಿದೆ.

ವರದಿಯ ಪ್ರಕಾರ, ಜೂನ್ 1 ರಿಂದ ಮಹಾರಾಷ್ಟ್ರದಲ್ಲಿ ಒಟ್ಟು 76 ಜನರು ಸಾವನ್ನಪ್ಪಿದ್ದಾರೆ. ಕುಂಡಲಿಕಾ ಸೇರಿದಂತೆ ರಾಜ್ಯದ ಹಲವು ನದಿಗಳು ಅಪಾಯದ ಮಟ್ಟ ದಾಟಿವೆ. ಉಲ್ಲಾಸ್, ಸಾವಿತ್ರಿ, ಪಾತಾಳಗಂಗಾ, ಅಂಬಾ ಮತ್ತು ಗರ್ಹಿ ನದಿಗಳ ನೀರಿನ ಮಟ್ಟವು ಎಚ್ಚರಿಕೆಯ ಮಟ್ಟಕ್ಕಿಂತ ಸ್ವಲ್ಪ ಕಡಿಮೆಯಾಗಿದೆ.

Recommended Video

ಕಡಕ್‌ನಾತ್ ಕೋಳಿ ಮಾರಲು ರೆಡಿಯಾದ MS Dhoni, ಈ ಕೋಳಿಯ ಸ್ಪೆಷಾಲಿಟಿ ಏನು? | *Cricket | OneIndia Kannada

English summary
In the wake of heavy rains in Gujarat, water has entered the low-lying areas and holidays have been declared for schools and colleges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X