ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಡುಗಿಯರ ಋತುಪರೀಕ್ಷೆ; ಕಾಲೇಜಿನ ಸಿಬ್ಬಂದಿ ಬಂಧನ

|
Google Oneindia Kannada News

ಅಹಮದಾಬಾದ್, ಫೆಬ್ರವರಿ 18: ದೇಶಾದ್ಯಂತ ತೀವ್ರ ವಿರೋಧಕ್ಕೆ ಕಾರಣವಾಗಿದ್ದ ಗುಜರಾತ್‌ನ ಭುಜ್ ನಗರದ ಶ್ರೀಶಹಜಾನಂದ ಬಾಲಕಿಯರ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿನಿಯರ ಉಡುಪು ತೆಗೆಯಿಸಿ ಋತುಸ್ರಾವ ಪರೀಕ್ಷಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಕಾಲೇಜಿನ ಪ್ರಾಚಾರ್ಯರನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಒಂದು ವಾರದ ಹಿಂದೆ ಕಾಲೇಜಿನಲ್ಲಿ 60 ವಿದ್ಯಾರ್ಥಿನಿಯರಿಗೆ, ಅವರು ಋತುಸ್ರಾವಕ್ಕೆ ಒಳಗಾಗಿದ್ದಾರೆಯೇ ಎಂಬುದನ್ನು ತಿಳಿಯಲು ಬಲವಂತವಾಗಿ ಅವರ ಉಡುಪು ತೆಗೆಸಿ ಪರಿಶೀಲಿಸಿದ್ದರು ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಪೊಲೀಸರು ಸೋಮವಾರ ಸಂಜೆ ಪ್ರಾಚಾರ್ಯೆ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.

ಟ್ರಂಪ್ ಗುಜರಾತ್‌ ಭೇಟಿ; ಸ್ಲಂ ಕಾಣದಂತೆ ಗೋಡೆ ನಿರ್ಮಾಣ
ಪ್ರಾಚಾರ್ಯೆ ರಿತಾ ರಾಣಿಂಗಾ, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ರಾಮಿಲಿಬೆನ್‌ ಹಿರಾಣಿ, ಗುಮಾಸ್ತರಾದ ನೈನಾ ಗೊರಸಿಯ ಮತ್ತು ಅನಿತಾ ಚೌಹಾಣ್‌ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಐಪಿಸಿ ಕಾಯ್ದೆಯನ್ವಯ ಸುಲಿಗೆ, ಅಗೌರವ, ಕ್ರಿಮಿನಲ್‌ ಬೆದರಿಕೆಗೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ.

Gujarat Police Arrest Shahjananda College Staff For Menstruation Check Case
ಗುಜರಾತ್‌ನ ಕ್ರಾಂತಿಗುರು ಶ್ಯಾಮ್‌ಜೀ ಕೃಷ್ಣವರ್ಮಾ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಪಡೆದಿರುವ ಈ ಕಾಲೇಜು ನ್ನದೇ ಆದ ವಿದ್ಯಾರ್ಥಿನಿ ನಿಲಯ ಹೊಂದಿದೆ. ಘಟನೆಗೆ ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದ ಹಿಂದೆಯೇ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
English summary
Gujarat Police Arrest Shajananda College Staff For Menstruation Case. 4 Staff of arrest of Bhuj college held over menstrual check on students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X