ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಶಾಕ್: ಪಕ್ಷ ತೊರೆಯಲಿದ್ದಾರೆ 15ಕ್ಕೂ ಹೆಚ್ಚು ಶಾಸಕರು

|
Google Oneindia Kannada News

ಅಹಮದಾಬಾದ್, ಮೇ 28: ಗುಜರಾತ್‌ನ ಹಿಂದುಳಿದ ವರ್ಗಗಳ ಮುಖಂಡ ಅಲ್ಪೇಶ್ ಠಾಕೂರ್ ಅವರು ಬಿಜೆಪಿ ಸೇರುವ ಸುಳಿವು ನೀಡಿದ ಬೆನ್ನಲ್ಲೇ, ಕಾಂಗ್ರೆಸ್‌ಗೆ ಮತ್ತೊಂದು ಆಘಾತ ನೀಡಿದ್ದಾರೆ. ತಮ್ಮೊಂದಿಗೆ ಕಾಂಗ್ರೆಸ್‌ನ 15ಕ್ಕೂ ಹೆಚ್ಚು ಶಾಸಕರು ಪಕ್ಷ ತೊರೆಯುವುದು ಖಚಿತ ಎಂದು ಅವರು ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಯ ಸೋಲಿನ ಅಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಕಾಂಗ್ರೆಸ್‌ಗೆ ಇದರಿಂದ ಮತ್ತೊಂದು ಹೊಡೆತ ಬಿದ್ದಂತಾಗಿದೆ.

ಬಿಜೆಪಿಗೆ ಒಬಿಸಿ ನಾಯಕ ಅಲ್ಪೇಶ್‌ ಠಾಕೂರ್‌? ಬಿಜೆಪಿಗೆ ಒಬಿಸಿ ನಾಯಕ ಅಲ್ಪೇಶ್‌ ಠಾಕೂರ್‌?

ಕಾಂಗ್ರೆಸ್ ಮಾಜಿ ಮುಖಂಡರಾದ ಅಲ್ಪೇಶ್ ಠಾಕೂರ್, ಗುಜರಾತ್‌ನಲ್ಲಿ ಹಿಂದುಳಿದ ವರ್ಗಗಳ ಪ್ರಭಾವಿ ನಾಯಕರಾಗಿದ್ದಾರೆ. ಅವರು ಗುಜರಾತ್ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರನ್ನು ಸೋಮವಾರ ಭೇಟಿಯಾಗಿದ್ದರು. ಅವರೊಂದಿಗೆ ಕಾಂಗ್ರೆಸ್ ಶಾಸಕ ಬಿ.ಡಿ. ಜಾಲಾ ಅವರೂ ಇದ್ದರು. ಈ ಭೇಟಿಯ ಬೆನ್ನಲ್ಲೇ ಅಲ್ಪೇಶ್ ಅವರು ಬಿಜೆಪಿ ಸೇರುವ ವದಂತಿ ದಟ್ಟವಾಗಿದೆ.

Gujarat OBC leader Alpesh Thakor said 15 MLAs areleaving Congress

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಲ್ಪೇಶ್, ತಮ್ಮ ಬಿಜೆಪಿ ಸೇರ್ಪಡೆಯನ್ನು ಸ್ಪಷ್ಟಪಡಿಸದೆ ಇದ್ದರೂ, ಪರೋಕ್ಷವಾಗಿ ಗುಜರಾತ್ ರಾಜಕಾರಣದಲ್ಲಿ ಭಾರಿ ಬದಲಾವಣೆಯಾಗುವ ಸುಳಿವು ನೀಡಿದ್ದಾರೆ.

'ನನ್ನ ಜನರು ಬಡವರು ಮತ್ತು ಹಿಂದುಳಿದವರು. ಅವರಿಗೆ ಸರ್ಕಾರದ ಬೆಂಬಲ ಬೇಕು. ನಾನು ಏನನ್ನು ಬಯಸಿದ್ದೆನೋ ಅದನ್ನು ನನ್ನ ಜನರಿಗೆ ಕೊಡಲು ಸಾಧ್ಯವಾಗದೆ ಇರುವುದು ನನ್ನಲ್ಲಿ ಬೇಸರ ಮೂಡಿಸಿದೆ. ನಮಗೆ ಗೌರವ ಇಲ್ಲದೆ ಇರುವಾಗ ಮತ್ತು ಅವರ ಹಕ್ಕುಗಳ ಬಗ್ಗೆ ಯಾವುದೇ ಮಾತುಗಳು ಕೇಳಿ ಬರದೇ ಇದ್ದಾಗ ನಾವು ಅಲ್ಲಿ ಇರುವ ಅಗತ್ಯವಿಲ್ಲ ಎನ್ನುವುದು ಅವರ ಅಭಿಪ್ರಾಯ' ಎಂದು ಅಲ್ಪೇಶ್ ಹೇಳಿದ್ದಾರೆ.

ಮಮತಾ ಬ್ಯಾನರ್ಜಿಗೆ ಮತ್ತೆ ಭಾರೀ ಆಘಾತ, ಬಿಜೆಪಿಯತ್ತ ಮೂವರು ಶಾಸಕರು ಮಮತಾ ಬ್ಯಾನರ್ಜಿಗೆ ಮತ್ತೆ ಭಾರೀ ಆಘಾತ, ಬಿಜೆಪಿಯತ್ತ ಮೂವರು ಶಾಸಕರು

'ಇಲ್ಲಿ ಇರುವುದು ನಮಗೆ ಇಷ್ಟವಿಲ್ಲ ಎನ್ನುವುದು ನಮ್ಮ ನಿರ್ಧಾರ ಮತ್ತು ನನ್ನ ಆತ್ಮಸಾಕ್ಷಿಯ ಧ್ವನಿ. ಸರ್ಕಾರದ ಸಹಾಯದೊಂದಿಗೆ ನಮ್ಮ ಜನರಿಗಾಗಿ ಮತ್ತು ಬಡವರಿಗಾಗಿ ನಾವು ಕೆಲಸ ಮಾಡಲು ಬಯಸಿದ್ದೇವೆ. ಕಾದು ನೋಡಿ. 15ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ ತ್ಯಜಿಸಲಿದ್ದಾರೆ. ಪ್ರತಿಯೊಬ್ಬರೂ ನೋವಿಗೊಳಗಾಗಿದ್ದಾರೆ. ಅರ್ಧಕ್ಕಿಂತಲೂ ಹೆಚ್ಚು ಶಾಸಕರು ಅಸಮಾಧಾನಗೊಂಡಿದ್ದಾರೆ' ಎಂದು ತಿಳಿಸಿದ್ದಾರೆ.

English summary
Reports says Gujarat OBC leader Alpesh Thakor may join BJP. Alpesh said to ANI that, Wait and watch, more than 15 MLAs are leaving Congress, everyone is distressed. More than half of the MLAs are upset.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X