• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗುಜರಾತ್: ನವಜಾತ ಅವಳಿ ಶಿಶುಗಳಿಗೆ ಕೊರೊನಾ ಸೋಂಕು

|

ಅಹಮದಾಬಾದ್, ಏಪ್ರಿಲ್ 2: ಗುಜರಾತ್‌ನ ವಡೋದರಾದಲ್ಲಿ ನವಜಾತ ಅವಳಿ ಶಿಶುಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶಿಶುಗಳು ಜನಿಸಿದ ಬಳಿಕ ಕೆಲವೇ ದಿನಗಳಲ್ಲಿ ಅತಿಸಾರ ಹಾಗೂ ಡೀಹೈಡ್ರೇಷನ್‌ನಿಂದ ಬಳಲುತ್ತಿದ್ದವು ಹಾಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಪರೀಕ್ಷೆ ಬಳಿಕ ಶಿಶುಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಓರ್ವ ಕೊರೊನಾ ಸೋಂಕಿತನಿಂದ 400 ಮಂದಿಗೆ ಸೋಂಕು ತಗುಲಬಹುದುಓರ್ವ ಕೊರೊನಾ ಸೋಂಕಿತನಿಂದ 400 ಮಂದಿಗೆ ಸೋಂಕು ತಗುಲಬಹುದು

ಈಗ ಆರೋಗ್ಯ ಸ್ಥಿರವಾಗಿದೆ. ಇನ್ನೂ ಡಿಶ್ಚಾರ್ಜ್ ಆಗಿಲ್ಲ ಎಂದು ಎಸ್‌ಎಸ್‌ಜಿ ಆಸ್ಪತ್ರೆಯ ಪೀಡಿಯಾಟ್ರಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಐಯ್ಯರ್ ಮಾಹಿತಿ ನೀಡಿದ್ದಾರೆ.

ಗುಜರಾತ್‌ನಲ್ಲಿ ಇದುವರೆಗೆ 3,07,698 ಮಂದಿಗೆ ಸೋಂಕು ತಗುಲಿದೆ, 12,610 ಸಕ್ರಿಯ ಪ್ರಕರಣಗಳಿವೆ, ಈವರೆಗೆ 2,90,569 ಮಂದಿ ಗುಣಮುಖರಾಗಿದ್ದಾರೆ, 4519 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 72,330 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಹತ್ತು ದಿನಗಳಲ್ಲಿ 4 ಲಕ್ಷಕ್ಕೂ ಅಧಿಕ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ.

ಬುಧವಾರದ ಕೊರೊನಾ ಸೋಂಕಿತರಲ್ಲಿ 40,382 ಜನರು ಚೇತರಿಸಿಕೊಂಡಿದ್ದರೆ, 459 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ಹೇಳಿದೆ. ದೈನಂದಿನ ಕೊರೊನಾ ಸೋಂಕಿತರ ಸಾವಿನ ಸಂಖ್ಯೆಯೂ ದುಪ್ಪಟ್ಟಾಗಿದೆ.

English summary
Twins were brought in 15 days after being born with severe diarrhoea & dehydration. They tested positive but are better now. Haven't been discharged yet,said Dr Iyer, Head Dept of Pediatrics, SSG Hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X