ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್: ಕೊರೊನಾ ಲಸಿಕೆಯ 2ನೇ ಡೋಸ್ ಪಡೆದ ಮೇಲೆ ಕೊರೊನಾ ಸೋಂಕು

|
Google Oneindia Kannada News

ಅಹಮದಾಬಾದ್, ಮಾರ್ಚ್ 07: ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆದ ಬಳಿಕ ವ್ಯಕ್ತಿಯೊಬ್ಬರು ಕೊರೊನಾ ಸೋಂಕಿಗೆ ತುತ್ತಾಗಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ.

ಅವರು ಗಾಂಧಿನಗರದ ದೆಹ್‌ಗಾಮ್‌ನ ಆರೋಗ್ಯಾಧಿಕಾರಿಯಾಗಿದ್ದಾರೆ. ಅವರು ಜನವರಿ 16 ರಂದು ಲಸಿಕೆಯ ಮೊದಲ ಡೋಸ್ ಪಡೆದಿದ್ದರು. ಫೆಬ್ರವರಿ 15 ರಂದು ಲಸಿಕೆಯ ಎರಡನೇ ಡೋಸ್ ಪಡೆದಿದ್ದಾರೆ. ಫೆಬ್ರವರಿ 20 ರಂದು ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಹೆಚ್ಚುತ್ತಿರುವ ಕೊರೊನಾ: ಮಹಾರಾಷ್ಟ್ರ, ಪಂಜಾಬ್‌ಗೆ ಕೇಂದ್ರ ತಂಡ ಭೇಟಿಹೆಚ್ಚುತ್ತಿರುವ ಕೊರೊನಾ: ಮಹಾರಾಷ್ಟ್ರ, ಪಂಜಾಬ್‌ಗೆ ಕೇಂದ್ರ ತಂಡ ಭೇಟಿ

ಲಕ್ಷಣಗಳು ಕಡಿಮೆ ಇದೆ, ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ. ಅವರು ಸೋಮವಾರದಿಂದ ಮತ್ತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

Gujarat Man Infected With Covid After Taking Second Dose Of Vaccine

ಕೊರೊನಾ ಸೋಂಕಿನ ವಿರುದ್ಧ ಪ್ರತಿಕಾಯಗಳು ಅಭಿವೃದ್ಧಿಗೊಳ್ಳಲು ಕನಿಷ್ಠ 45 ದಿನಗಳು ಬೇಕಾಗುತ್ತದೆ. ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು. ಕೊರೊನಾ ಲಸಿಕೆಯು ಕೊರೊನಾವೈರಸ್ ವಿರುದ್ಧ ಹೋರಾಡುವಲ್ಲಿ ಯಶಸ್ವಿಯಾಗುತ್ತಿದೆ.

ಗುಜರಾತ್‌ನಲ್ಲಿ 2,72,240 ಕೊರೊನಾ ಸೋಂಕಿತರಿದ್ದಾರೆ. 4,413 ಮಂದಿ ಮೃತಪಟ್ಟಿದ್ದಾರೆ. ಮಾರ್ಚ್ 5 ರಂದು ದೇಶದಲ್ಲಿ ಬರೋಬ್ಬರಿ 15 ಲಕ್ಷ ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದ್ದು, ಇದುವರೆಗೆ ಒಂದು ದಿನದಲ್ಲಿ ಲಸಿಕೆ ಪಡೆದವರ ಅತಿ ಹೆಚ್ಚು ಸಂಖ್ಯೆಯಾಗಿದೆ.

ದೇಶಾದ್ಯಂತ ಈವರೆಗೆ 1 ಕೋಟಿ 94 ಲಕ್ಷಕ್ಕೂ ಅಧಿಕ ಮಂದಿಗೆ ಕೋವಿಡ್ 19 ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಯಲ್ಲಿ ಬರೋಬ್ಬರಿ 15 ಲಕ್ಷ ಮಂದಿಗೆ ಕೋವಿಡ್ ಲಸಿಕೆ ಹಾಕಲಾಗಿದ್ದು, 14,92,201 ಡೋಸ್ ಲಸಿಕೆಯನ್ನು ನೀಡಲಾಗಿದೆ.

ಈ ಮಧ್ಯೆ, ದೇಶದಲ್ಲಿ ಕೋವಿಡ್‍ನ 18,327 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1,11,92,88ಕ್ಕೆ ಮುಟ್ಟಿದೆ. ಕಳೆದ 24 ತಾಸಿನಲ್ಲಿ 14,234 ಮಂದಿ ಸೋಂಕಿನಿಂದ ಗುಣಮುಖರಾಗುವುದರೊಂದಿಗೆ ಈವರೆಗೆ ಚೇತರಿಸಿಕೊಂಡವರ ಸಂಖ್ಯೆ 1,08, 54,128ಕ್ಕೆ ಏರಿದೆ.

English summary
A health official in Gujarat has tested positive for coronavirus days after taking the second dose of the vaccine against the infection, officials said Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X