ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.8ರ ಭಾರತ್ ಬಂದ್‌ಗೆ ಗುಜರಾತ್ ಬೆಂಬಲವಿಲ್ಲ: ಮುಖ್ಯಮಂತ್ರಿ ವಿಜಯ್ ರೂಪಾನಿ

|
Google Oneindia Kannada News

ಅಹಮದಾಬಾದ್, ಡಿಸೆಂಬರ್ 07: ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸುತ್ತಿರುವ ರೈತ ಸಂಘಟನೆಗಳು ಡಿಸೆಂಬರ್ 8ರಂದು 'ಭಾರತ್ ಬಂದ್‌'ಗೆ ಕರೆ ನೀಡಿದ್ದು, ಮಂಗಳವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ದೇಶವು ಬಂದ್ ಆಗಲಿದೆ ಎಂದು ರೈತ ಸಂಘಟನೆಗಳು ಹೇಳಿವೆ.

ಆದರೆ ಈ ಕುರಿತು ಬಿಜೆಪಿ ಆಡಳಿತದಲ್ಲಿರುವ ಗುಜರಾತ್ ಸರ್ಕಾರ ಅಂತಹ ಬಂದ್ ಅನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಡಿ.8ರ ಭಾರತ್ ಬಂದ್‌ಗೆ ಮಮತಾ ಸರ್ಕಾರದ ಬೆಂಬಲವಿಲ್ಲ!ಡಿ.8ರ ಭಾರತ್ ಬಂದ್‌ಗೆ ಮಮತಾ ಸರ್ಕಾರದ ಬೆಂಬಲವಿಲ್ಲ!

"ರೈತ ಸಂಘಟನೆಗಳು ಮಾಡಿದ ಭಾರತ್ ಬಂದ್ ಕರೆಗೆ ಗುಜರಾತ್ ಬೆಂಬಲ ನೀಡುತ್ತಿಲ್ಲ. ಯಾರಾದರೂ ಅಂಗಡಿ ಮತ್ತು ಇತರ ಸಂಸ್ಥೆಗಳನ್ನು ಬಲವಂತವಾಗಿ ಮುಚ್ಚಲು ಪ್ರಯತ್ನಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಗುಜರಾತ್ ಸಿಎಂ ವಿಜಯ್ ರೂಪಾನಿ ಹೇಳಿದ್ದಾರೆ.

 Gujarat Is Not Supporting Bharat Bandh: CM Rupani

ತಮ್ಮ ರಾಜ್ಯದ ರೈತ ಚಳವಳಿಯನ್ನು ಒಪ್ಪುವುದಿಲ್ಲ. ಸರ್ಕಾರ ರೈತರೊಂದಿಗೆ ಸ್ನೇಹಪರವಾಗಿದೆ ಎಂದು ಅವರು ಹೇಳುತ್ತಾರೆ. ಕೃಷಿ ಕಾನೂನುಗಳನ್ನು ತೆಗೆದುಹಾಕಬಾರದು ಎಂದು ಹೇಳಿರುವ ಅವರು, ಇದು ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದ್ದಾರೆ.

ಡಿಸೆಂಬರ್ 8 ರಂದು ಭಾರತ್ ಬಂದ್ಗೆ ಕಾಂಗ್ರೆಸ್ ಸೇರಿದಂತೆ 20 ರಾಜಕೀಯ ಪಕ್ಷಗಳು ಮತ್ತು 10 ಕಾರ್ಮಿಕ ಸಂಘಗಳು ಬೆಂಬಲಿಸಿವೆ. ಜೊತೆಗೆ ಡಿಸೆಂಬರ್ 9 ರಂದು ರಾಷ್ಟ್ರಪತಿಯನ್ನು ಭೇಟಿ ಮಾಡಲು ಸಮಯ ಕೋರಿದ್ದಾರೆ.

ರೈತರು ಮತ್ತು ಸರ್ಕಾರದ ನಡುವೆ ಐದು ಸುತ್ತಿನ ಸಭೆಗಳು ನಡೆದಿವೆ ಆದರೆ ಸಂಧಾನ ವಿಫಲವಾಗಿಯೇ ಉಳಿದಿವೆ. ರೈತರು ಮತ್ತು ಸರ್ಕಾರದ ನಡುವೆ ಮುಂದಿನ ಸುತ್ತಿನ ಸಭೆ ಡಿಸೆಂಬರ್ 09 ರಂದು ನಡೆಯಲಿದೆ.

English summary
Ahead of ‘Bharat Bandh’, Gujarat Chief Minister Vijay Rupani said that the state is not supporting ‘Bharat Bandh’ call by the agitating farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X