• search
 • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಕಳ್ಳಭಟ್ಟಿ ದುರಂತ; 42 ಮಂದಿ ಬಲಿ, ಆರು ಪೊಲೀಸರ ಅಮಾನತು

|
Google Oneindia Kannada News

ಅಹಮದಾಬಾದ್, ಜುಲೈ 28: ಗುಜರಾತ್ ಕಳ್ಳಭಟ್ಟಿ ದುರಂತದಲ್ಲಿ ಇದುವರೆಗೆ 42 ಮಂದಿ ಸಾವನ್ನಪ್ಪಿದ್ದಾರೆ. ಗುಜರಾತ್ ಗೃಹ ಇಲಾಖೆ ಗುರುವಾರ ಬೊಟಾಡ್ ಮತ್ತು ಅಹಮದಾಬಾದ್ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ಆರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ರಾಜ್ಯದಲ್ಲಿ ನಕಲಿ ಮದ್ಯ ಸೇವನೆಯಿಂದ ಸಾವು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ದುರಂತದಲ್ಲಿ ಇದುವರೆಗೆ ಬೊಟಾಡ್ ಮತ್ತು ನೆರೆಯ ಅಹಮದಾಬಾದ್ ಜಿಲ್ಲೆಯ 42 ಮಂದಿ ಸಾವನ್ನಪ್ಪಿದ್ದಾರೆ.

ಈ ಕ್ರಮದ ಕುರಿತು ಪ್ರತಿಕ್ರಿಯಿಸಿರುವ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜ್ ಕುಮಾರ್, 'ಬೋಟಾಡ್ ಎಸ್ಪಿ ಕರಂರಾಜ್ ವಘೇಲಾ ಮತ್ತು ಅಹಮದಾಬಾದ್ ಎಸ್ಪಿ ವೀರೇಂದ್ರಸಿಂಗ್ ಯಾದವ್ ಅವರನ್ನು ವರ್ಗಾವಣೆ ಮಾಡಿದ್ದೇವೆ. ಇಬ್ಬರು ಉಪ ಎಸ್ಪಿಗಳು, ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್, ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಸಬ್‌ ಇನ್‌ಸ್ಪೆಕ್ಟರ್‌ಗಳನ್ನು ಸೇರಿದಂತೆ ಆರು ಪೊಲೀಸ್ ಅಧಿಕಾರಿಳನ್ನು ಅಮಾನತುಗೊಳಿಸಲಾಗಿದೆ' ಎಂದರು.

ದುರಂತದಲ್ಲಿ ಇನ್ನು 97 ಜನರು ಭಾವನಗರ, ಬೊಟಾಡ್ ಮತ್ತು ಅಹಮದಾಬಾದ್‌ನ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇನ್ನು ಗುಜರಾತ್ ಚುನಾವಣೆ ಮೇಲೆ ಕಣ್ಣೀಟ್ಟಿರುವ ಆಮ್ ಆದ್ಮಿ ಪಕ್ಷವು, ರಾಜ್ಯದಲ್ಲಿನ ನಕಲಿ ಮದ್ಯ ಮಾರಾಟ ಸೇರಿದಂತೆ ಜನಸಾಮಾನ್ಯರ "ಮೂಲಭೂತ ಸಮಸ್ಯೆಗಳನ್ನು" ಸಂಸತ್ತಿನಲ್ಲಿ ಮತ್ತು ಬೀದಿಗಳಲ್ಲಿ ಪ್ರಸ್ತಾಪಿಸುವುದನ್ನು ಮುಂದುವರಿಸುತ್ತದೆ ಎಂದು ಪಕ್ಷದ ಸಂಸದ ಸಂಜಯ್ ಸಿಂಗ್ ಬುಧವಾರ ಹೇಳಿದ್ದರು.

Recommended Video

   ಭಾರತ ತಂಡಕ್ಕೆ ಮತ್ತೊಬ್ಬ ಹೊಸ ಕೋಚ್!! | OneIndia Kannada

   ಘಟನೆ ಕುರಿತು ಮಾತನಾಡಿರುವ ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಾಂಘವಿ, 'ಪ್ರಕರಣ ಕುರಿತು ಪೊಲೀಸರು 10 ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ. ಈ ಬಗ್ಗೆ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುವುದು' ಎಂದು ಹೇಳಿದರು.

   English summary
   Gujarat Hooch Tragedy: death count reached 42, Six cops were suspended, Superintendent of Police of Botad and Ahmedabad districts were transferred.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X