ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಗುಜರಾತ್ ನಕಲಿ ಮದ್ಯ ಸೇವನೆ: 21ಕ್ಕೆ ಏರಿದೆ ಸಾವಿನ ಸಂಖ್ಯೆ

|
Google Oneindia Kannada News

ಅಹಮದಾಬಾದ್, ಜುಲೈ 26: ಗುಜರಾತ್‌ನ ಅಹಮದಾಬಾದ್ ಮತ್ತು ಬೊಟಾಡ್ ಜಿಲ್ಲೆಯಲ್ಲಿ ನಕಲಿ ಮದ್ಯ (ಕಳ್ಳಭಟ್ಟಿ) ಸೇವನೆಯಿಂದ ಸಾವನ್ನಪ್ಪಿದವರ ಸಂಖ್ಯೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಬೊಟಾಡ್ ಜಿಲ್ಲೆಯ ಪೊಲೀಸ್ ಕಂಟ್ರೋಲ್ ರೂಂ ಈವರೆಗೆ ಜಿಲ್ಲೆಯಲ್ಲಿ 16 ಜನರು ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದೆ. ನೆರೆಯ ಅಹಮದಾಬಾದ್ ಜಿಲ್ಲೆಯ ಧಂಧೂಕಾ ತಾಲೂಕಿನ ಐವರು ಸೋಮವಾರದಿಂದ ನಡೆದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇನ್ನೂ ಆರು ಜನರನ್ನು ಚಿಕಿತ್ಸೆಗಾಗಿ ಅಹಮದಾಬಾದ್‌ಗೆ ಸ್ಥಳಾಂತರಿಸಲಾಗಿದೆ.

ಮೊದಲ ಬಾರಿಗೆ ಮದ್ಯೆ ಸೇವಿಸಿ ಸಿಕ್ಕಿಬಿದ್ದವರಿಗೆ ದಂಡದ ಮೊತ್ತ ಕಡಿಮೆ: ಬಿಹಾರ ಸರ್ಕಾರಮೊದಲ ಬಾರಿಗೆ ಮದ್ಯೆ ಸೇವಿಸಿ ಸಿಕ್ಕಿಬಿದ್ದವರಿಗೆ ದಂಡದ ಮೊತ್ತ ಕಡಿಮೆ: ಬಿಹಾರ ಸರ್ಕಾರ

ಭಾವನಗರ, ಬೊಟಾಡ್, ಬರ್ವಾಲಾ ಮತ್ತು ಧಂಧೂಕಾದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 30 ಜನರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದೆ.

Gujarat Hooch Tragedy: 21 Dead, 30 admitted to Hospital After Drinking Illicit Liquor

ಸೋಮವಾರ ಮುಂಜಾನೆ ಬರ್ವಾಲಾ ತಾಲೂಕಿನ ರೋಜಿದ್ ಗ್ರಾಮ ಮತ್ತು ಇತರ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳಲ್ಲಿ ಕೆಲವರ ಆರೋಗ್ಯ ಸ್ಥಿತಿ ಹದಗೆಟ್ಟ ನಂತರ ಬರ್ವಾಲಾ ಮತ್ತು ಬೊಟಾಡ್ ಪಟ್ಟಣಗಳ ಸರ್ಕಾರಿ ಆಸ್ಪತ್ರೆಗಳಿಗೆ ಸೇರಿಸಲಾಗಿತ್ತು. ಆಗ ಕಳ್ಳಭಟ್ಟಿ ವಿಷಯ ಬೆಳಕಿಗೆ ಬಂದಿದೆ.

ಕಳ್ಳಭಟ್ಟಿ ತಯಾರಿಕೆ ಮಾಡಿ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಬೊಟಾಡ್ ಜಿಲ್ಲೆಯ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಗುಜರಾತ್‌ನ ಪೊಲೀಸ್ ಮಹಾನಿರ್ದೇಶಕ ಆಶಿಶ್ ಭಾಟಿಯಾ ತಿಳಿಸಿದ್ದಾರೆ.

Gujarat Hooch Tragedy: 21 Dead, 30 admitted to Hospital After Drinking Illicit Liquor

ಘಟನೆಯ ತನಿಖೆಗಾಗಿ ಮತ್ತು ನಕಲಿ ಮದ್ಯ ಮಾರಾಟ ಮಾಡುವ ಆರೋಪಿಗಳನ್ನು ಬಂಧಿಸಲು ಉಪ ಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಯ ಅಧಿಕಾರಿಯ ಅಡಿಯಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗುವುದು ಎಂದು ಪೊಲೀಸ್ ಮಹಾನಿರೀಕ್ಷಕ (ಭಾವನಗರ ವ್ಯಾಪ್ತಿಯ) ಅಶೋಕ್ ಕುಮಾರ್ ಯಾದವ್ ಹೇಳಿದ್ದಾರೆ.

ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಅಹಮದಾಬಾದ್ ಕ್ರೈಂ ಬ್ರಾಂಚ್ ಕೂಡ ತನಿಖೆಗೆ ಸೇರಿಕೊಂಡಿವೆ.

English summary
Gujarat Hooch Tragedy : 21 Dead, Around 30 people are still undergoing treatment at various government hospitals in Bhavnagar, Botad, Barvala and Dhandhuka due to the consumption of illicit or toxic liquor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X