• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಕಲಿ ಕೊವಿಡ್-19 ನೆಗಟಿವ್ ವರದಿ ನೀಡುತ್ತಿದ್ದ ಲ್ಯಾಬ್‌ಗೆ ಬೀಗ!

|

ಸೂರತ್, ಏಪ್ರಿಲ್ 1: ಕೊರೊನಾವೈರಸ್ ಎರಡನೇ ಅಲೆಗೆ ಭಾರತವೇ ಬೆಚ್ಚಿ ಬೀಳುವಂತಾ ಸ್ಥಿತಿ ನಿರ್ಮಾಣವಾಗಿದೆ. ಕೊರೊನಾವೈರಸ್ ಹಾಟ್ ಸ್ಪಾಟ್ ಆಗುತ್ತಿರುವ ರಾಜ್ಯಗಳಿಂದ ಬೇರೆ ರಾಜ್ಯಗಳಿಗೆ ಪ್ರಯಾಣಿಸುವುದಕ್ಕೆ ಕೊವಿಡ್-19 ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗುತ್ತಿದೆ. ಇದರ ಮಧ್ಯೆ ಗುಜರಾತ್‌ನಲ್ಲಿ ನಕಲಿ ಕೊವಿಡ್-19 ನೆಗೆಟಿವ್ ವರದಿ ನೀಡುತ್ತಿದ್ದ ಎರಡು ಪ್ರಯೋಗಾಲಯಗಳನ್ನು ಮುಚ್ಚಿಸಲಾಗಿದೆ.

ಗುಜರಾತ್‌ನ ಸೂರತ್ ನಗರದ ಎರಡು ಪ್ರಯೋಗಾಲಯಗಳಲ್ಲಿ ನಕಲಿ ಕೊವಿಡ್-19 ನೆಗೆಟಿವ್ ಪ್ರಮಾಣಪತ್ರ ನೀಡುತ್ತಿರುವ ಬಗ್ಗೆ ದೂರು ಬಂದಿತ್ತು. ಈ ಹಿನ್ನೆಲೆ ದಾಳಿ ನಡೆಸಿ ಲ್ಯಾಬ್ ಅನ್ನು ಬಂದ್ ಮಾಡಿಸಲಾಗಿದೆ ಎಂದು ಆರೋಗ್ಯ ಸಚಿವ ನಿತಿನ್ ಪಟೇಲ್ ತಿಳಿಸಿದ್ದಾರೆ.

ಕೋವಿಡ್ 19: ಯಾವ ರಾಜ್ಯಗಳಲ್ಲಿ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಕೋವಿಡ್ 19: ಯಾವ ರಾಜ್ಯಗಳಲ್ಲಿ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ

ಸೂರತ್‌ನಲ್ಲಿರುವ ಎರಡು ಪ್ರಯೋಗಾಲಯಗಳಲ್ಲಿ ನಕಲಿ ಕೊರೊನಾವೈರಸ್ ನೆಗಟಿವ್ ವರದಿಗಳನ್ನು ನೀಡಲಾಗುತ್ತದೆ ಎಂದು ಸರ್ಕಾರಕ್ಕೆ ಹಲವು ಬಾರಿ ದೂರುಗಳು ಬಂದಿದ್ದವು. ತೇಜಸ್ ಲ್ಯಾಬೋರೇಟರಿ ಮತ್ತು ಹೇಮಜ್ಯೋತಿ ಲ್ಯಾಬೋರೇಟರಿ ವಿರುದ್ಧ ದೂರನ್ನು ಸ್ವೀಕರಿಸಿದ್ದೆವು. ತದನಂತರದಲ್ಲಿ ಆರೋಪದ ಪರಿಶೀಲನೆಗೆ ಮುಂದಾದೆವು ಎಂದು ಮಾಹಿತಿ ನೀಡಿದ್ದಾರೆ.


ಗುಜರಾತ್‌ನಲ್ಲಿ ಕೊರೊನಾವೈರಸ್ ಕಂಡೀಷನ್:

ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 3,07,698ಕ್ಕೆ ಏರಿಕೆಯಾಗಿದ್ದು, ಈವರೆಗು 4519 ಮಂದಿ ಮಹಾಮಾರಿಯಿಂದಲೇ ಪ್ರಾಣ ಬಿಟ್ಟಿದ್ದಾರೆ. 2,90,569 ಸೋಂಕಿತರು ಗುಣಮುಖರಾಗಿದ್ದರೆ, ಉಳಿದಂತೆ 12610 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

English summary
Gujarat Govt Is Closes Two Labs For Fake Coronavirus Test Reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X