ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಬಂತು ಫ್ಲೈಯಿಂಗ್ ಕಾರು, ವಾಹ್...ಎನ್ನುವಂತಿದೆ ವಿಶೇಷತೆಗಳು

|
Google Oneindia Kannada News

ಗುಜರಾತ್, ಮಾರ್ಚ್ 6: ನೆದರ್ಲ್ಯಾಂಡ್ ಮೂಲದ ಕಾರ್ ಕಂಪನಿ ಭಾರತದಲ್ಲಿ ಫ್ಲೈಯಿಂಗ್ ಕಾರು ತಯಾರಿಸಲು ಸಜ್ಜಾಗಿದೆ. PAL-V (Personal Air Land Vehicle) ಕಂಪನಿ ಗುಜರಾತ್‌ನಲ್ಲಿ ಹಾರುವ ಕಾರು ತಯಾರಿಕ ಕೇಂದ್ರ ಸ್ಥಾಪನೆ ಮಾಡಲು ಭಾರತದೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂಬ ಸುದ್ದಿ ಹೊರಬಿದ್ದಿದೆ.

ಪಿಟಿಐ ವರದಿ ಮಾಡಿರುವಂತೆ ಗುಜರಾತ್ ರಾಜ್ಯದ ಕಾರ್ಯದರ್ಶಿ ಎಂಕೆ ದಾಸ್ ಮತ್ತು PAL-V ಅಂತರರಾಷ್ಟ್ರೀಯ ವ್ಯಾಪಾರ ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷ ಕಾರ್ಲೊ ಮಾಸ್ಬೊಮೆಲ್ ನಡುವೆ ಲಿಖಿತ ಒಪ್ಪಂದ ಆಗಿದ್ದು, 2021ರ ವೇಳೆಗೆ ಮಾರುಕಟ್ಟೆಗೆ ಕಾರು ಪರಿಚಯಿಸುವ ಉದ್ದೇಶ ಹೊಂದಿದ್ದಾರಂತೆ.

ಜ್ಯೋತಿಷ್ಯ: ವಾಹನ ಖರೀದಿ ಮಾಡುವಾಗ ಏನೆಲ್ಲ ಗಮನಿಸಬೇಕು?ಜ್ಯೋತಿಷ್ಯ: ವಾಹನ ಖರೀದಿ ಮಾಡುವಾಗ ಏನೆಲ್ಲ ಗಮನಿಸಬೇಕು?

ಗುಜರಾತ್‌ನಲ್ಲಿ ಫ್ಲೈಯಿಂಗ್ ಕಾರು ತಯಾರಿಕೆ ಕೇಂದ್ರ ಸ್ಥಾಪಿಸಲು ಅಗತ್ಯವಾದ ಅನುಮತಿಯನ್ನು ಪಡೆಯಲು ರಾಜ್ಯ ಸರ್ಕಾರ ಸಹಕಾರ ನೀಡಲಿದೆ ಎಂದು PAL-V ಕಂಪನಿ ತಿಳಿಸಿದೆ.

Gujarat Government To Manufacture Flying Car In India

ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಸುಲಭ ವ್ಯಾಪಾರಕ್ಕಾಗಿ ಗುಜರಾತ್ ಆಯ್ಕೆ ಮಾಡಿದೆ ಎಂದು ಮಾಸ್ಬೊಮೆಲ್ ಹೇಳಿದ್ದಾರೆ. ರಾಜ್ಯದಲ್ಲಿ ಉತ್ತಮ ವಾಣಿಜ್ಯ ಬಂದರುಗಳು ಮತ್ತು ಲಾಜಿಸ್ಟಿಕ್ ಸೌಲಭ್ಯ ನೀಡಲಿದೆ. ಭಾರತದಲ್ಲಿ ತಯಾರಿಸಿದ ಕಾರುಗಳನ್ನು ಯುನೇಟೆಡ್ ರಾಷ್ಟ್ರಗಳು ಮತ್ತು ಯುರೋಪಿಯನ್ ರಾಷ್ಟ್ರಗಳಿಗೆ ರಫ್ತು ಮಾಡಲು ಕಂಪನಿಗೆ ಸಹಾಯ ಮಾಡುತ್ತದೆ. ಈಗಾಗಲೇ 110 ಫ್ಲೈಯಿಂಗ್ ಕಾರುಗಳ ತಯಾರಿಕೆ ಬೇಡಿಕೆ ಬಂದಿದ್ದು ಅದನ್ನು ಕಂಪನಿ ಸ್ವೀಕರಿಸದೆ, ಅದನ್ನು ಭಾರತದಿಂದ ರಫ್ತು ಮಾಡಲಾಗುವುದು ಎಂದು ಹೇಳಿದ್ದಾರೆ.

ವಿಡಿಯೋ; ಚಿಕ್ಕಮಗಳೂರಿನಲ್ಲಿ ಏಕಾಏಕಿ ಐಷಾರಾಮಿ ಕಾರುಗಳು ಕಾಣಿಸಿಕೊಂಡಿದ್ದೇಕೆ?ವಿಡಿಯೋ; ಚಿಕ್ಕಮಗಳೂರಿನಲ್ಲಿ ಏಕಾಏಕಿ ಐಷಾರಾಮಿ ಕಾರುಗಳು ಕಾಣಿಸಿಕೊಂಡಿದ್ದೇಕೆ?

ಭಾರತದಲ್ಲಿ ತಯಾರಾಗಲಿರುವ ಈ ಫ್ಲೈಯಿಂಗ್ ಕಾರ್ ಎರಡು ಎಂಜಿನ್ ಹೊಂದಿರುತ್ತದೆ. ರಸ್ತೆಯಲ್ಲಿ 160 ಕಿ.ಮೀ ವೇಗದಲ್ಲಿ ಚಲಿಸಬಹುದು ಮತ್ತು 180 ಕಿ.ಮೀ ವೇಗದಲ್ಲಿ ಹಾರಬಲ್ಲದು. ಇದಲ್ಲದೆ, ಕಾರು ಮೂರು ನಿಮಿಷಗಳಲ್ಲಿ ಹಾರುವ ಕಾರಾಗಿ ಬದಲಾಗುತ್ತೆ. ಇನ್ನು ಪೂರ್ಣ ಟ್ಯಾಂಕ್‌ನಲ್ಲಿ 500 ಕಿ.ಮೀ ದೂರ ಪ್ರಯಾಣ ಮಾಡಬಹುದು.

English summary
Netherlands based company PAL-V signs MoU with Gujarat government to manufacture flying car in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X