ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಭೇಟಿ: ಮೂರು ಗಂಟೆ ಭದ್ರತೆಗೆ 80 ಕೋಟಿ ಖರ್ಚು

|
Google Oneindia Kannada News

ಅಹ್ಮದಾಬಾದ್, ಫೆಬ್ರವರಿ 20: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಭೇಟಿ ಆನೆ ಸಾಕಿದ ಅನುಭವವನ್ನು ಸರ್ಕಾರಕ್ಕೆ ನೀಡುತ್ತಿದೆ.

Recommended Video

TrumpInIndia:Donald Trump's Monday program timeline | IndiaWelcomesTrump | NamasteyTrump

ಡೊನಾಲ್ಡ್ ಟ್ರಂಪ್ ಅವರ ಭಾರತದ ಭೇಟಿ ಭಾರಿ ದೊಡ್ಡ ನಷ್ಟವನ್ನೇ ಬೊಕ್ಕಸಕ್ಕೆ ತರುತ್ತಿದೆ. ಗುಜರಾತ್ ಅಂತೂ ಟ್ರಂಪ್ ತನ್ನ ರಾಜ್ಯದಲ್ಲಿ ಕಳೆಯುವ ಮೂರು ಗಂಟೆಗೆ 80 ಕೋಟಿ ಹಣವನ್ನು ಭದ್ರತೆಗೇ ವ್ಯಯಿಸುತ್ತಿದೆ.

ಭಾರತಕ್ಕೆ ಟ್ರಂಪ್ ಭೇಟಿ ವೇಳೆ ದಾಳಿಗೆ ಜೈಷ್ ಉಗ್ರರ ಸಂಚುಭಾರತಕ್ಕೆ ಟ್ರಂಪ್ ಭೇಟಿ ವೇಳೆ ದಾಳಿಗೆ ಜೈಷ್ ಉಗ್ರರ ಸಂಚು

ಡೊನಾಲ್ಡ್ ಟ್ರಂಪ್ ಫೆಬ್ರವರಿ 24 ರಂದು ಭಾರತಕ್ಕೆ ಬರಲಿದ್ದಾರೆ. ಅವರು ಗುಜರಾತ್‌ನ ಅಹ್ಮದಾಬಾದ್ ಗೆ ಆಗಮಿಸಿ ಅಲ್ಲಿ ಮೋದಿ ಅವರೊಂದಿಗೆ ರೋಡ್‌ ಶೋ ನಡೆಸಲಿದ್ದಾರೆ. ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ, ನಂತರ ಅಲ್ಲಿಂದ ಸರ್ದಾರ್ ವಲ್ಲಭಬಾಯಿ ಪಟೇಲ್ ಕ್ರೀಡಾಂಗಣದಲ್ಲಿ ಭಾಷಣ ಮಾಡಲಿದ್ದಾರೆ. ನಂತರ ಅಹ್ಮದಾಬಾದ್‌ನಿಂದ ಆಗ್ರಾಕ್ಕೆ ತೆರಳಲಿದ್ದಾರೆ.

Gujarat Government Spending 80 Crore For Donald Trump Security

ಡೊನಾಲ್ಡ್ ಟ್ರಂಪ್ ಅವರು ಕೆಲವೇ ಗಂಟೆಗಳು ಮಾತ್ರವೇ ಗುಜರಾತ್‌ನಲ್ಲಿರುತ್ತಾರೆ ಆದರೆ ಗುಜರಾತ್‌ ಸರ್ಕಾರ ಕೋಟ್ಯಂತರ ಹಣವನ್ನು ಖರ್ಚು ಮಾಡಬೇಕಾಗಿ ಬಂದಿದೆ. ಕೇವಲ ಭದ್ರತೆ ಒಂದಕ್ಕೆ ಸುಮಾರು 80 ಕೋಟಿಗೂ ಹೆಚ್ಚು ಹಣವನ್ನು ಸರ್ಕಾರ ಖರ್ಚು ಮಾಡುತ್ತಿದೆ.

ಗೋಡೆ ಕಟ್ಟಿದ್ದಾಯ್ತು, ಈಗ ಸ್ಲಂನಲ್ಲಿದ್ದ 45 ಕುಟುಂಬಕ್ಕೆ ಗೇಟ್ ಪಾಸ್!ಗೋಡೆ ಕಟ್ಟಿದ್ದಾಯ್ತು, ಈಗ ಸ್ಲಂನಲ್ಲಿದ್ದ 45 ಕುಟುಂಬಕ್ಕೆ ಗೇಟ್ ಪಾಸ್!

ಕೆಲವು ದಿನಗಳ ಹಿಂದಷ್ಟೆ ಅಹ್ಮದಾಬಾದ್‌ನಲ್ಲಿ ಮೋದಿ, ಟ್ರಂಪ್ ಸಂಚರಿಸುವ ರಸ್ತೆಯಲ್ಲಿರುವ ಸ್ಲಂ ಗೆ ಅಡ್ಡಲಾಗಿ ಗೋಡೆಗಳನ್ನು ಕಟ್ಟಿ ಗುಜರಾತ್ ಸರ್ಕಾರ ಸುದ್ದಿಯಾಗಿತ್ತು, ನಂತರ ಅಲ್ಲಿನ 40 ನಿವಾಸಿಗಳನ್ನು ಸಹ ಹೊರಗೆ ಹಾಕಲಾಗಿತ್ತು. ಈಗ ಟ್ರಂಪ್‌ ಗಾಗಿ ಖರ್ಚು ಮಾಡಲಾಗುತ್ತಿರುವ ಹಣವೂ ವಿವಾದ ಎಬ್ಬಿಸಿದೆ.

English summary
Gujarath government spending 80 crore rupees for Donald Trump security for only three hours. Trump arriving to India on February 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X