• search
 • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡ್ರ್ಯಾಗನ್ ಫ್ರೂಟ್‌ಗೆ ಮರುನಾಮಕಾರಣ ಮಾಡಿದ ಗುಜರಾತ್ ಸರ್ಕಾರ; ಹೊಸ ಹೆಸರೇನು?

|

ಅಹಮದಾಬಾದ್, ಜನವರಿ 20: ದೇಶದಲ್ಲಿ ಕೆಲವು ವರ್ಷಗಳಿಂದೀಚೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ "ಡ್ರ್ಯಾಗನ್ ಫ್ರೂಟ್‌"ಗೆ ಗುಜರಾತ್ ಸರ್ಕಾರ ಮರು ನಾಮಕರಣ ಮಾಡಿದೆ. ಸರ್ಕಾರ ಇಟ್ಟಿರುವ ಆ ಹೊಸ ಹೆಸರು ಹಲವು ಕಾರಣದಿಂದ ಗಮನ ಸೆಳೆಯುತ್ತಿದೆ.

ಮಂಗಳವಾರ ಗುಜರಾತ್ ನಲ್ಲಿ ಸಿಎಂ ತೋಟಗಾರಿಕಾ ಅಭಿವೃದ್ಧಿ ಕಾರ್ಯಸೂಚಿ ಬಿಡುಗಡೆ ಮಾಡಿದ ಗುಜರಾತ್ ಸಿಎಂ ವಿಜಯನ್ ರೂಪಾಣಿ ಡ್ರ್ಯಾಗನ್ ಫ್ರೂಟ್‌ಗೆ ಹೊಸ ಹೆಸರಿಟ್ಟಿರುವುದಾಗಿ ತಿಳಿಸಿದರು. ಡ್ರ್ಯಾಗನ್ ಫ್ರೂಟ್ ಮೇಲ್ಭಾಗ ಕಮಲವನ್ನು ಹೋಲುತ್ತದೆ. ಹೀಗಾಗಿ ಈ ಹಣ್ಣಿಗೆ "ಕಮಲಂ" ಎಂದು ಹೆಸರಿಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

ಡ್ರ್ಯಾಗನ್ ರಾಷ್ಟ್ರ ಚೀನಾ ವಿರುದ್ಧ ಕೇಳಿಬಂದಿದೆ ಮತ್ತೊಂದು ಗಂಭೀರ ಆರೋಪ.!

ಈ ಬಗ್ಗೆ ವಿವರಣೆಯನ್ನೂ ನೀಡಿರುವ ಅವರು, "ಡ್ರ್ಯಾಗನ್ ಫ್ರೂಟ್ ಹೆಸರು ಚೀನಾಗೆ ಸಂಬಂಧಿಸಿದಂತೆ ಇದೆ. ಹೀಗಾಗಿ ಹಣ್ಣಿನ ಹೆಸರನ್ನು ಬದಲಾಯಿಸಿದೆವು. ಹೆಸರು ಬದಲಾವಣೆಗೆ ಪೇಟೆಂಟ್ ಪಡೆಯಲು ಅರ್ಜಿ ಕೂಡ ಸಲ್ಲಿಸಲಾಗಿದೆ. ಆದರೆ ಇನ್ನು ಮುಂದೆ ಗುಜರಾತ್ ನಲ್ಲಿ ಇದಕ್ಕೆ "ಕಮಲಂ" ಎಂದೇ ಕರೆಯುತ್ತೇವೆ ಎಂದಿದ್ದಾರೆ.

"ಡ್ರ್ಯಾಗನ್ ಫ್ರೂಟ್ ಮೇಲ್ಭಾಗ ಕಮಲದ ಹೂವನ್ನು ಹೋಲುತ್ತಿದೆ. ಅದಕ್ಕೆ ಕಮಲಂ ಎಂದು ಹೆಸರಿಡಲಾಗಿದೆ. ಕಮಲಂ ಎಂದರೆ ಸಂಸ್ಕೃತದಲ್ಲಿ ಕಮಲ ಎಂದು. ಈಚಿನ ವರ್ಷಗಳಲ್ಲಿ ಡ್ರ್ಯಾಗನ್ ಫ್ರೂಟ್ ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತಿದೆ. ತನ್ನ ಭಿನ್ನ ನೋಟ ಹಾಗೂ ರುಚಿಯಿಂದ ಈ ಹಣ್ಣು ಗಮನ ಸೆಳೆದಿದೆ. ಹೀಗಾಗಿ ಹಣ್ಣಿನ ಹೆಸರನ್ನು ಬದಲಿಸಲು ತೀರ್ಮಾನಿಸಲಾಗಿದೆ. ಈ ಹೆಸರಿನ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ" ಎಂದು ಸ್ಪಷ್ಟೀಕರಣವನ್ನೂ ನೀಡಿದ್ದಾರೆ.

   ಪೊಲೀಸರು ಎಲ್ಲಿ ತಡೆಯುತ್ತಾರೋ ಅಲ್ಲಿಯೇ ಪ್ರತಿಭಟನೆ ಮಾಡಿ- ಡಿಕೆ ಶಿವಕುಮಾರ್ ಕರೆ | Oneindia Kannada

   ಆದರೆ ಬಿಜೆಪಿ ಪಕ್ಷದ ಸಂಕೇತವೂ ಕಮಲವಾದ್ದರಿಂದ ಹಾಗೂ ಗಾಂಧಿನಗರದ ಬಿಜೆಪಿ ಮುಖ್ಯ ಕಚೇರಿಗೂ ಶ್ರೀಕಮಲಂ ಎಂದು ಹೆಸರಿಟ್ಟಿರುವುದರಿಂದ ಈ ಹಣ್ಣಿಗೆ ಈ ಹೆಸರು ಇಟ್ಟಿರುವುದು ಗಮನ ಸೆಳೆದಿದೆ.

   English summary
   Gujarat CM Vijay Rupani on Tuesday said that the government has applied for a patent to change the name of dragon fruit to 'Kamalam',
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X