• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೆಲಸಗಾರರಿಗೆ ಬೋನಸ್ ಆಗಿ ಕೊಟ್ಟಿದ್ದು ಮರ್ಸಿಡಿಸ್ ಕಾರು, ಕೊಟ್ಟವರು ಯಾರು?

|

ಅಹಮದಾಬಾದ್ (ಗುಜರಾತ್), ಅಕ್ಟೋಬರ್ 3: ಪ್ರಖ್ಯಾತ ವಜ್ರ ವ್ಯಾಪಾರಿ ಸಾವ್ ಜೀ ಢೋಲಾಕಿಯಾ ಮತ್ತೆ ಸುದ್ದಿಯಾಗಿದ್ದಾರೆ. ವಾರ್ಷಿಕ ಆರು ಸಾವಿರ ಕೋಟಿ ರುಪಾಯಿ ವಹಿವಾಟು ನಡೆಸುವ ಹರಿಕೃಷ್ಣ ಎಕ್ಸ್ ಪೋರ್ಟ್ಸ್ ನ ಪ್ರಮೊಟರ್ ಆದ ಅವರು, ತಮ್ಮ ಸಿಬ್ಬಂದಿಗೆ ದುಬಾರಿ ಕೊಡುಗೆಗಳನ್ನು ಕೊಡುವ ಮೂಲಕ ಸುದ್ದಿಯಲ್ಲಿದ್ದಾರೆ.

ಈ ಸಲ ಮರ್ಸಿಡಿಸ್ ಜಿಎಲ್ ಎಸ್ 350ಡಿ ಎಸ್ ಯುವಿಯನ್ನು ನೀಡಿದ್ದಾರೆ. ತಲಾ 1 ಕೋಟಿ ಬೆಲೆ ಬಾಳುವ ಈ ಮೂರು ಕಾರುಗಳನ್ನು ಕಂಪನಿಯಲ್ಲಿ 25 ವರ್ಷ ಸೇವೆ ಸಲ್ಲಿಸಿದ ಮೂವರಿಗೆ ನೀಡಲಾಗಿದೆ. ಮುಕೇಶ್, ನಿಲೇಶ್ ಹಾಗೂ ಮಹೇಶ್ ಮರ್ಸಿಡಿಸ್ ಕಾರು ಪಡೆದ ಸಿಬ್ಬಂದಿ.

ನೌಕರರಿಗೆ ದೀಪಾವಳಿ ಬೋನಸ್ 400 ಫ್ಲ್ಯಾಟ್, 1,260 ಕಾರು

"ಈ ಮೂವರು ತಮ್ಮ ಹದಿಮೂರು ಅಥವಾ ಹದಿನೈದನೇ ವಯಸ್ಸಿನಲ್ಲಿ ಕಂಪನಿಗೆ ಸೇರಿದರು. ಡೈಮಂಡ್ ಕಟ್ ಹಾಗೂ ಪಾಲಿಶ್ ಮಾಡುವುದನ್ನು ಅವರು ಇಲ್ಲೇ ಕಲಿತಿದ್ದು. ಅವರು ಇದರಲ್ಲಿ ತಜ್ಞರು ಮಾತ್ರವಲ್ಲ. ನಮ್ಮ ಕಂಪನಿಯಲ್ಲೇ ಅತ್ಯಂತ ಹಿರಿಯ ಹಾಗೂ ನಂಬಿಕಸ್ಥ ಉದ್ಯೋಗಿಗಳು" ಎಂದು ಢೋಲಾಕಿಯಾ ಹೇಳಿದ್ದಾರೆ.

ಢೋಲಾಕಿಯಾ ಈ ಹಿಂದೆ ಕೂಡ ತಮ್ಮ ಸಿಬ್ಬಂದಿಗೆ ದುಬಾರಿ ಕೊಡುಗೆ ನೀಡಿದ್ದಾರೆ. 2014ರ ದೀಪಾವಳಿ ಬೋನಸ್ ಆಗಿ 500 ಫ್ಲ್ಯಾಟ್ಸ್, 525 ವಜ್ರದ ಆಭರಣ ಮತ್ತು 200 ಫ್ಲ್ಯಾಟ್ಸ್ ಗಳನ್ನು ನೀಡಿದ್ದರು. 2015ರಲ್ಲಿ 1268 ಸಿಬ್ಬಂದಿಗೆ 1260 ಕಾರುಗಳನ್ನು ನೀಡಿದ್ದರು. ಮರು ವರ್ಷ 400 ಫ್ಲ್ಯಾಟ್ಸ್ ನೀಡಿದ್ದರು.

English summary
Gujarat diamond merchant, Savji Dholakia, has done it again. The promoter of Rs 6,000-crore Hari Krishna Exports, who often rewards his employees with expensive gifts, has this time gifted Mercedes to three employees. Dholakia has gifted Mercedes-Benz GLS 350d SUVs worth Rs 1 crore each, to three employees for completing 25 years of service in the company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X