ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರನ್ನು ಕೋರ್ಟ್‌ಗೆ ಹಾಜರುಪಡಿಸಲು ನಿತ್ಯಾನಂದಸ್ವಾಮಿಗೆ ಗಡುವು

|
Google Oneindia Kannada News

Recommended Video

Nityananda case : Gujarat High court slams the cops for being helpless | Oneindia kannada

ಅಹಮದಾಬಾದ್, ನವೆಂಬರ್ 27: ಸ್ವಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ವಿರುದ್ಧದದ ಪ್ರಕರಣಕ್ಕೆ ಸಂಬಂಧಿಸಿ ಕಾಣೆಯಾಗಿರುವ ಇಬ್ಬರು ಮಹಿಳೆಯರನ್ನು ಡಿ.10ರೊಳಗೆ ಕೋರ್ಟ್ ಮುಂದೆ ಹಾಜರುಪಡಿಸುವಂತೆ ಗುಜರಾತ್‌ ಪೊಲೀಸರಿಗೆ ಸೂಚಿಸಲಾಗಿದೆ.

ನಾಪತ್ತೆಯಾಗಿರುವ ಇಬ್ಬರು ಮಹಿಳೆಯರ ಪಾಲಕರ ಹೇಬಿಯಸ್ ಕಾರ್ಪಸ್‌ ಅರ್ಜಿ ವಿಚಾರಣೆ ನಡೆಸಿದ ಗುಜರಾತ್‌ ಹೈಕೋರ್ಟ್, ಇಬ್ಬರು ಮಹಿಳೆಯರು ಎಲ್ಲಿದ್ದಾರೆ ಗೊತ್ತಿಲ್ಲ ಎಂದು ಪೊಲೀಸರು ಅಸಹಾಯಕತೆ ಪ್ರದರ್ಶಿಸುವಂತಿಲ್ಲ. ಲಭ್ಯವಿರುವ ಎಲ್ಲ ಏಜೆನ್ಸಿಗಳ ಲಾಭ ಪಡೆದು ಮಹಿಳೆಯರು ಎಲ್ಲಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಿ.

ಸ್ವಯಂಘೋಷಿತ ದೇವಮಾನವ ನಿತ್ಯಾನಂದ ವಿದೇಶಕ್ಕೆ ಪರಾರಿ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ವಿದೇಶಕ್ಕೆ ಪರಾರಿ

ಇಂಟರ್ಪೋಲ್, ವಿದೇಶಾಂಗ ಇಲಾಖೆ ಅಥವಾ ಲಭ್ಯವಿರುವ ಯಾವುದೇ ಏಜೆನ್ಸಿಯ ಸಹಾಯವನ್ನಾದರೂ ಪಡೆಯಿರಿ. ಒಟ್ಟಾರೆಯಾಗಿ ಡಿ.10ರಂದು ನಾಪತ್ತೆಯಾಗಿರುವರನ್ನು ಕೋರ್ಟ್ ಮುಂದೆ ಹಾಜರುಪಡಿಸಲೇಬೇಕು. ಇದರಿಂದ ಪೊಲೀಸರಿಗೆ ವಿನಾಯಿತಿ ನೀಡಲು ಸಾಧ್ಯವೇ ಇಲ್ಲ ಎಂದು ನ್ಯಾಯಪೀಠ ಎಚ್ಚರಿಸಿದೆ.

Gujarat Cops Have To Produce Missing Girls By December 10

ಪಾಲಕರ ಹೇಬಿಯಸ್ ಕಾರ್ಪಸ್‌ ಅರ್ಜಿ ಸಂಬಂಧ ನಿತ್ಯಾನಂದರಿಗೂ ಈಗಾಗಲೇ ನೋಟಿಸ್ ಜಾರಿಯಾಗಿದೆ. ಆದರೆ ನಿತ್ಯಾನಂದ ಎಲ್ಲಿದ್ದಾರೆ ಎನ್ನುವ ಬಗ್ಗೆ ಇಲ್ಲಿಯವರೆಗೆ ಮಾಹಿತಿ ಇಲ್ಲ.ಪೊಲೀಸರಿಂದ ಕಣ್ತಪ್ಪಿಸಿಕೊಂಡು ವಿದೇಶದಲ್ಲಿ ಅಡಗಿರುವ ಸಾಧ್ಯತೆಯಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಕುತ್ತಿದ್ದು, ತನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಅಹ್ಮದಾಬಾದ್‌ ಪೊಲೀಸರ ಪ್ರಕಾರ ನಿತ್ಯಾನಂದ ಈಗಾಗಲೇ ದೇಶ ಬಿಟ್ಟು ಹೋಗಿದ್ದಾರೆ. ಆದರೆ ನಿತ್ಯಾನಂದ ಪಾಸ್‌ಪೋರ್ಟ್ 2018ರಲ್ಲೇ ರದ್ದಾಗಿತ್ತು. ನವೀಕರಣಕ್ಕೆ ವಿದೇಶಾಂಗ ಇಲಾಖೆ ನಿರಾಕರಿಸಿತ್ತು. ಇಂತಹ ಸ್ಥಿತಿಯಲ್ಲಿ ಹೇಗೆ ದೇಸ ಬಿಟ್ಟು ಪರಾರಿಯಾಗಿದ್ದಾರೆ ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಸಿಬಿಐ ತನಿಖೆಗೆ ಆಗ್ರಹ
ಏತನ್ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ತನಿಖೆ ನಡೆಸಬೇಕು. ನಿತ್ಯಾನಂದ ವಿದೇಶಕ್ಕೆ ಪರಾರಿಯಾಗಿರುವ ಸಾಧ್ಯತೆಯಿದೆ. ಹೀಗಾಗಿ ಪರಿಣಾಮಕಾರಿ ತನಿಖೆಗೆ ಸಿಬಿಐಗೆ ಒಪ್ಪಿಸುವುದು ಒಳಿತು ಎಂದು ಗುಜರಾತ್‌ ಸರ್ಕಾರ ಹಾಗೂ ಹೈಕೋರ್ಟ್‌ಗೆ ಪರಾರಿಯಾದ ಇಬ್ಬರು ಮಹಿಳೆಯರ ಪಾಲಕರು ಮನವಿ ಮಾಡಿದ್ದಾರೆ.

English summary
Gujarath High Court Slams Police that Produce Missing Girls Before the Court By December 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X