ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ 'ಜೈ' ಎಂದ ಗುಜರಾತ್ ಜನ: ಪಾಲಿಕೆ ಚುನಾವಣೆಯಲ್ಲಿ ಕಮಲಕ್ಕೆ ಪ್ರಚಂಡ ಗೆಲುವು

|
Google Oneindia Kannada News

ಅಹಮದಾಬಾದ್‌, ಫೆಬ್ರವರಿ 23: ಗುಜರಾತ್ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಮೋಘ ಜಯಭೇರಿ ಸಾಧಿಸಿದೆ. ಆರು ಪಾಲಿಕೆ ಚುನಾವಣೆಗಳಲ್ಲಿ ಆರರಲ್ಲಿಯೂ ಗೆಲುವು ಸಾಧಿಸುವ ಮೂಲಕ ಅಧಿಕಾರವನ್ನ ಮರಳಿ ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಏರುತ್ತಿರುವ ತೈಲ ಬೆಲೆ ಮತ್ತು ಕೃಷಿ ಕಾಯ್ದೆಗಳ ವಿರುದ್ಧದ ರೈತರ ಬೃಹತ್ ಪ್ರತಿಭಟನೆಯ ಬಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ತಟ್ಟಿರುವುದರ ನಡುವೆಯೂ ಬಿಜೆಪಿ ದಿಗ್ವಿಜಯ ಕಂಡಿದೆ.

ಆರು ಪಾಲಿಕೆಗಳ 144 ವಾರ್ಡ್‌ಗಳಲ್ಲಿನ ಒಟ್ಟು 576 ಕ್ಷೇತ್ರಗಳಿಗೆ ಭಾನುವಾರ ಚುನಾವಣೆ ನಡೆದಿದ್ದು, ಅದರ ಮತ ಎಣಿಕೆ ಮಂಗಳವಾರ ನಡೆಯಿತು. 2015ರಲ್ಲಿ ಬಿಜೆಪಿ 391 ಸೀಟುಗಳೊಂದಿಗೆ ಎಲ್ಲ ಆರೂ ಪಾಲಿಕೆಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಕಾಂಗ್ರೆಸ್ ಆಗ 176 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಬಿಜೆಪಿ ಚುನಾವಣೆ ನಡೆದ ಕ್ಷೇತ್ರಗಳಲ್ಲಿ ಶೇ 85ರಷ್ಟು ಗೆಲುವು ಸಾಧಿಸಿದೆ.

ಗುಜರಾತ್ ಪಾಲಿಕೆ ಚುನಾವಣೆ: ಅಚ್ಚರಿ ಫಲಿತಾಂಶ ನೀಡಿದ ಎಎಪಿಗುಜರಾತ್ ಪಾಲಿಕೆ ಚುನಾವಣೆ: ಅಚ್ಚರಿ ಫಲಿತಾಂಶ ನೀಡಿದ ಎಎಪಿ

ಆದರೆ ಈ ಬಾರಿ ಬಿಜೆಪಿ ತನ್ನ ಗೆಲುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. 451 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಬೀಗಿದ್ದರೆ, ಕಾಂಗ್ರೆಸ್ 44 ಸೀಟುಗಳಲ್ಲಿ ಜಯಗಳಿಸಿದೆ. ಈ ಬಾರಿ ಚುನಾವಣೆಯಲ್ಲಿ ಮೊದಲ ಬಾರಿಗೆ ಅಖಾಡಕ್ಕೆ ಇಳಿದಿದ್ದ ಎಎಪಿ, ಸೂರತ್ ಪಾಲಿಕೆಯಲ್ಲಿ 27 ಸೀಟುಗಳಲ್ಲಿ ಗೆದ್ದು ಗಮನ ಸೆಳೆದಿದೆ. ಎಐಎಂಐಎಂ ಕೂಡ ಅಹಮದಾಬಾದ್‌ನಲ್ಲಿ ಏಳು ಅಭ್ಯರ್ಥಿಗಳ ಗೆಲುವು ಕಂಡಿದೆ (ಮತಗಳ ಎಣಿಕೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ).

ಅಹಮದಾಬಾದ್ ಪಾಲಿಕೆ

ಅಹಮದಾಬಾದ್ ಪಾಲಿಕೆ

ಬಿಜೆಪಿ 161

ಕಾಂಗ್ರೆಸ್ 15

ಎಐಎಂಐಎಂ 7

ಒಟ್ಟು ಸೀಟುಗಳು 192

ವಡೋದರ ಪಾಲಿಕೆ

ವಡೋದರ ಪಾಲಿಕೆ

ಬಿಜೆಪಿ 69

ಕಾಂಗ್ರೆಸ್ 7

ಒಟ್ಟು ಸೀಟುಗಳು 76

ಗುಜರಾತ್‌ ಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಗೆಲುವು: ಮೋದಿ ಸಂತಸಗುಜರಾತ್‌ ಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಗೆಲುವು: ಮೋದಿ ಸಂತಸ

ರಾಜ್‌ಕೋಟ್ ಪಾಲಿಕೆ

ರಾಜ್‌ಕೋಟ್ ಪಾಲಿಕೆ

ಬಿಜೆಪಿ 68

ಕಾಂಗ್ರೆಸ್ 4

ಒಟ್ಟು ಸೀಟುಗಳು 72

ಸೂರತ್ ಪಾಲಿಕೆ

ಸೂರತ್ ಪಾಲಿಕೆ

ಬಿಜೆಪಿ 93

ಎಎಪಿ 27

ಒಟ್ಟು ಸೀಟುಗಳು 120

ಜಾಮ್ನಗರ್ ಪಾಲಿಕೆ

ಜಾಮ್ನಗರ್ ಪಾಲಿಕೆ

ಬಿಜೆಪಿ 50

ಕಾಂಗ್ರೆಸ್ 11

ಬಿಎಸ್‌ಪಿ 3

ಒಟ್ಟು ಸೀಟುಗಳು 64

ಭಾವ್ನಗರ್ ಪಾಲಿಕೆ

ಭಾವ್ನಗರ್ ಪಾಲಿಕೆ

ಬಿಜೆಪಿ 44

ಕಾಂಗ್ರೆಸ್ 8

ಒಟ್ಟು ಸೀಟುಗಳು 52

ಎಷ್ಟು ವಾರ್ಡ್, ಎಷ್ಟು ಸೀಟುಗಳು?

ಎಷ್ಟು ವಾರ್ಡ್, ಎಷ್ಟು ಸೀಟುಗಳು?

ಅಹಮದಾಬಾದ್‌ನಲ್ಲಿ 48 ವಾರ್ಡ್‌ಗಳ 192 ಸೀಟುಗಳು, ಸೂರತ್ ಪಾಲಿಕೆಯಲ್ಲಿನ 30 ವಾರ್ಡ್‌ಗಳಲ್ಲಿನ 120 ಸೀಟುಗಳು, ವಡೋದರದ 19 ವಾರ್ಡ್‌ಗಳ 76 ಸೀಟುಗಳು, ರಾಜ್‌ಕೋಟ್‌ನ 18 ವಾರ್ಡ್‌ಗಳ 72 ಸೀಟುಗಳು, ಭಾವ್ನಗರ ಪಾಲಿಕೆಯ 13 ವಾರ್ಡ್‌ಗಳ 52 ಸೀಟುಗಳು ಮತ್ತು ಜಾಮ್ನಗರ ಪಾಲಿಕೆಯ 16 ವಾರ್ಡ್‌ಗಳ 64 ಸೀಟುಗಳಿಗೆ ಚುನಾವಣೆ ನಡೆದಿದೆ.

English summary
Gujarat Civic Polls: BJP retains power in all 6 municipal corporation with massive win. The election was held on Feb 21 and results declared on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X