• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗುಜರಾತ್ ಪಾಲಿಕೆ ಚುನಾವಣೆ: ಅಚ್ಚರಿ ಫಲಿತಾಂಶ ನೀಡಿದ ಎಎಪಿ

|

ಅಹಮದಾಬಾದ್, ಫೆಬ್ರವರಿ 23: ಗುಜರಾತ್ ಪಾಲಿಕೆ ಚುನಾವಣೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಾಯಕತ್ವದ ಆಮ್ ಆದ್ಮಿ ಪಕ್ಷ ಅಚ್ಚರಿಯ ಸಾಧನೆ ಪ್ರದರ್ಶಿಸಿದೆ. ಇದೇ ಮೊದಲ ಬಾರಿಗೆ ಗುಜರಾತ್‌ನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆಲುವು ಕಂಡಿದೆ. ಮುಖ್ಯವಾಗಿ ಸೂರತ್ ಪಾಲಿಕೆಯಲ್ಲಿ 27 ಸೀಟುಗಳಲ್ಲಿ ಜಯಭೇರಿ ಬಾರಿಸಿದೆ.

ಭಾನುವಾರ ನಡೆದಿದ್ದ ಗುಜರಾತ್‌ನ ಆರು ಪಾಲಿಕೆಗಳ ಚುನಾವಣೆಯ ಮತ ಎಣಿಕೆ ಮಂಗಳವಾರ ನಡೆಯಿತು. ಎಲ್ಲ ಆರೂ ಪಾಲಿಕೆಗಳಲ್ಲಿ ಬಿಜೆಪಿ ಭಾರಿ ಅಂತರದಿಂದ ಗೆಲುವು ಕಂಡು ಮತ್ತೆ ಅಧಿಕಾರಕ್ಕೆ ಬಂದಿದೆ. ಇದೇ ಮೊದಲ ಬಾರಿ ಖಾತೆ ತೆರೆದಿರುವ ಎಎಪಿ 27 ಸೀಟುಗಳನ್ನು ಗೆದ್ದಿದೆ. ಈ ಎಲ್ಲ ಗೆಲುವೂ ಸೂರತ್ ಪಾಲಿಕೆಯಲ್ಲಿಯೇ ದೊರೆತಿದೆ. ಈ ಮೂಲಕ ಸೂರತ್‌ನಲ್ಲಿ ಮುಖ್ಯ ವಿರೋಧಪಕ್ಷದ ಸ್ಥಾನವನ್ನೂ ಪಡೆದುಕೊಂಡಿದೆ. ಇಲ್ಲಿ ಬಿಜೆಪಿ 93 ಸೀಟುಗಳಲ್ಲಿ ಗೆದ್ದಿದ್ದರೆ, ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ತವರು ನಾಡಿನಲ್ಲಿ ಎಎಪಿಯ ಈ ಸಾಧನೆ ಅಚ್ಚರಿ ಮೂಡಿಸಿದೆ.

ಗುಜರಾತ್‌ ಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಗೆಲುವು: ಮೋದಿ ಸಂತಸ

ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಆರು ಪಾಲಿಕೆಗಳಲ್ಲಿ 470 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಬಿಜೆಪಿಯ ಅಮೋಘ ಗೆಲುವಿನ ಜತೆಗೆ ಎಎಪಿ ಮತ್ತು ಎಐಎಂಐಎಂ ಸ್ಪರ್ಧೆ ಕಾಂಗ್ರೆಸ್‌ಗೆ ಮತ್ತಷ್ಟು ಹಿನ್ನಡೆಯುಂಟುಮಾಡಿದೆ. ಸೂರತ್‌ನ ಜನತೆಗೆ ಎಎಪಿ ಧನ್ಯವಾದ ಸಲ್ಲಿಸಿದೆ. ಈ ಗಮನಾರ್ಹ ಪ್ರದರ್ಶನದ ಕಾರಣ ಅರವಿಂದ್ ಕೇಜ್ರಿವಾಲ್ ಅವರು ಸೂರತ್‌ನಲ್ಲಿ ರೋಡ್ ಶೋ ನಡೆಸಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ಹಾಗೆಯೇ ಇದೇ ಮೊದಲ ಬಾರಿಗೆ ಗುಜರಾತ್ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ 21 ಸೀಟುಗಳ ಪೈಕಿ ಏಳು ಸೀಟುಗಳಲ್ಲಿ ಗೆದ್ದಿದೆ.

English summary
Gujarat Civic Polls: AAP has won 27 seats in Surat municipal corporation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X