ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿಗೆ ಕೊರೊನಾ ಸೋಂಕು

|
Google Oneindia Kannada News

ಅಹಮದಾಬಾದ್,ಫೆಬ್ರವರಿ 15: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿಗೆ ಕೊರೊನಾ ಸೋಂಕು ತಗುಲಿದೆ.

ವಡೋದರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ಅವರು ಕುಸಿದು ಬಿದ್ದಿದ್ದರು. ಬಳಿಕ ಅವರನ್ನು ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಭಾಷಣ ಮಾಡುವಾಗಲೇ ಕುಸಿದುಬಿದ್ದ ಗುಜರಾತ್ ಮುಖ್ಯಮಂತ್ರಿಭಾಷಣ ಮಾಡುವಾಗಲೇ ಕುಸಿದುಬಿದ್ದ ಗುಜರಾತ್ ಮುಖ್ಯಮಂತ್ರಿ

ರೂಪಾಣಿ ಅವರಿಗೆ ಆಯಾಸ ಹಾಗೂ ಡೀಹೈಡ್ರೇಷನ್ ಆಗಿತ್ತು ಹಾಗಾಗಿ ಮೂರ್ಛೆ ಹೋಗಿದ್ದರು, ಸಂಪೂರ್ಣ ತಪಾಸಣೆ ಮಾಡಲಾಗಿದೆ. ಎಲ್ಲಾ ಪರೀಕ್ಷೆಗಳ ವರದಿ ಸಾಮಾನ್ಯವಾಗಿದೆ ಎಂದು ಯುಎನ್ ಮೆಹ್ತಾ ಆಸ್ಪತ್ರೆಯ ವೈದ್ಯರಾದ ಡಾ.ಆರ್‌ಕೆ.ಪಟೇಲ್ ಮಾಹಿತಿ ನೀಡಿದ್ದಾರೆ.

Gujarat Chief Minister Vijay Rupani Tests Positive For Covid-19

ಪ್ರಧಾನಿ ನರೇಂದ್ರ ಮೋದಿಯವರು ರೂಪಾನಿ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ರೂಪಾಣಿ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಮುಖ್ಯಮಂತ್ರಿಗಳ ಆರೋಗ್ಯ ಸ್ಥಿರವಾಗಿದೆ,ಅವರ ಆರೋಗ್ಯದ ಮೇಲೆ 24 ತಾಸು ನಿಗಾ ಇರಿಸಲಾಗುವುದು ಗುಜರಾತ್ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಹೇಳಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಭಾನುವಾರ ಸಂಜೆ ವಡೋದರಾದ ನಿಜಾಂಪುರ ಪ್ರದೇಶದ ಮೆಹ್ಸಾನನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ವೇದಿಕೆಯ ಮೇಲೆಯೇ ಕುಸಿದು ಬಿದ್ದಿದ್ದರು

ಫೆಬ್ರವರಿ 21 ರಂದು ನಡೆಯಲಿರುವ ನಾಗರಿಕ ಸಮಿತಿಗಳ ಚುನಾವಣೆಗೆ ಮುನ್ನ ಮೂರು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲು ರೂಪಾನಿ ವಡೋದರಾಗೆ ಆಗಮಿಸಿದ್ದರು.

English summary
Gujarat chief minister Vijay Rupani on Monday tested positive for coronavirus. The CM, who had fainted during a rally in Vadodara a day ago, was kept under observation in a Ahmedabad hospital for 24 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X