ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗಾಗಿ ಸ್ಪೆಷಲ್ ವೆಂಟಿಲೇಟರ್ ಸಿದ್ಧ

|
Google Oneindia Kannada News

ನವದೆಹಲಿ, ಏಪ್ರಿಲ್.05: ಕೊರೊನಾ ವೈರಸ್ ನಿಯಂತ್ರಣ ಮತ್ತು ಸೋಂಕಿತರಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸರ್ಕಾರವು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ವಿಜ್ಞಾನಿಗಳು, ಸಾಂಕ್ರಾಮಿಕ ರೋಗಶಾಸ್ತ್ರಜ್ಞರು, ರೋಗಾಣುಗಳ ಪತ್ತೆಗೆ ಶ್ರಮಿಸುತ್ತಿದ್ದಾರೆ.

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಅಗತ್ಯ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಗುಜರಾತ್ ನ ರಾಜಕೋಟ್ ಮೂಲದ ಜ್ಯೋತಿ ಸಿಎನ್ ಸಿ ಆಟೋಮೇಷನ್ ಲಿಮಿಟೆಡ್ ಕಂಪನಿ ಈ ಸಮಸ್ಯೆಯನ್ನು ನೀಗಿಸುವಂತಾ ಕೆಲಸ ಮಾಡಿದೆ.

Exclusive ಕೋವಿಡ್-19: ದಿಗ್ಭ್ರಮೆ ಮೂಡಿಸುತ್ತಿದೆ ಕೇಂದ್ರಕ್ಕೆ ರಾಜ್ಯ ಕೊಟ್ಟ ಮಾಹಿತಿ!Exclusive ಕೋವಿಡ್-19: ದಿಗ್ಭ್ರಮೆ ಮೂಡಿಸುತ್ತಿದೆ ಕೇಂದ್ರಕ್ಕೆ ರಾಜ್ಯ ಕೊಟ್ಟ ಮಾಹಿತಿ!

ಡೆಡ್ಲಿ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ ವಿಶೇಷವಾದ ವೆಂಟಿಲೇಟರ್ ನ್ನು ಸಿದ್ಧಪಡಿಸುವಲ್ಲಿ ಖಾಸಗಿ ಕಂಪನಿಯು ಯಶಸ್ವಿಯಾಗಿದೆ. ಪ್ರಾಯೋಗಿಕ ಪರೀಕ್ಷೆಯಲ್ಲಿ ವೆಂಟಿಲೇಟರ್ ಪಾಸ್ ಆಗಿದ್ದು, ಸರ್ಕಾರಕ್ಕೆ ಉಚಿತವಾಗಿ 1,000 ವೆಂಟಿಲೇಟರ್ ಗಳನ್ನು ನೀಡುವುದಕ್ಕೆ ಕಂಪನಿಯು ಮುಂದಾಗಿದೆ.

ದೇಶಿ ವೆಂಟಿಲೇಟರ್ ತಯಾರಿಕೆಗೆ 10 ದಿನ ಸಾಕು

ದೇಶಿ ವೆಂಟಿಲೇಟರ್ ತಯಾರಿಕೆಗೆ 10 ದಿನ ಸಾಕು

ಜ್ಯೋತಿ ಸಿಎನ್ ಸಿ ಆಟೋಮೇಷನ್ ಕಂಪನಿಯು ಸಿದ್ಧಪಡಿಸಿರುವ ದೇಶಿ ವೆಂಟಿಲೇಟರ್ ಗೆ ಧಮನ್ -1 ಎಂದು ಹೆಸರು ಇರಿಸಲಾಗಿದೆ. ಈ ವೆಂಟಿಲೇಟರ್ ನ್ನು ಸಿದ್ಧಪಡಿಸಲು ಕಂಪನಿಯು ಕನಿಷ್ಠ 10 ದಿನಗಳನ್ನು ತೆಗೆದುಕೊಂಡಿದೆ. ಕಂಪನಿಯು ಧಮನ್-1 ತಯಾರಿಸಲು 1 ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದು, ಈ ವೆಂಟಿಲೇಟರ್ ಗಳಿಗೆ ಮಾರುಕಟ್ಟೆಯಲ್ಲಿ 6 ಲಕ್ಷ ರೂಪಾಯಿ ಬೆಲೆ ಇದೆ ಎಂದು ಕಂಪನಿಯ ನಿರ್ದೇಶಕ ಪರಾಕ್ರಮ ಸಿನ್ಹಾ ಜಡೇಜಾ ತಿಳಿಸಿದ್ದಾರೆ.

ಕೊರಾನಾ ಚಿಕಿತ್ಸೆಗೆ 1,000 ವೆಂಟಿಲೇಟರ್ ಉಚಿತ

ಕೊರಾನಾ ಚಿಕಿತ್ಸೆಗೆ 1,000 ವೆಂಟಿಲೇಟರ್ ಉಚಿತ

ಮಾರಕ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ವೆಂಟಿಲೇಟರ್ ಗಳು ಅತ್ಯವಶ್ಯಕವಾಗಿ ಬೇಕಾಗಿವೆ. ಈ ಹಿನ್ನೆಲೆ ಸೋಂಕಿತರಿಗಾಗಿ ಸಿದ್ಧಪಡಿಸಿರುವ ಧಮನ್-1 ನ್ನು ಸರ್ಕಾರಿ ಆಸ್ಪತ್ರೆಗಳು ಐಸೋಲೇಷನ್ ಕೇಂದ್ರಗಳಲ್ಲಿ ಬಳಸುವುದಕ್ಕೆ 1,000 ವೆಂಟಿಲೇಟರ್ ಗಳನ್ನು ಕಂಪನಿಯು ಗುಜರಾತ್ ಸರ್ಕಾರಕ್ಕೆ ಉಚಿತವಾಗಿ ನೀಡುತ್ತದೆ ಎಂದು ಕಂಪನಿ ನಿರ್ದೇಶಕ ಪರಾಕ್ರಮ ಸಿನ್ಹಾ ಜಡೇಜಾ ಮಾಹಿತಿ ನೀಡಿದ್ದಾರೆ.

ಸೋಂಕು ಕಳೆಯುವ ಸುರಂಗ; ಕರ್ನಾಟಕದಲ್ಲಿಯೇ ಮೊದಲ ಪ್ರಯತ್ನಸೋಂಕು ಕಳೆಯುವ ಸುರಂಗ; ಕರ್ನಾಟಕದಲ್ಲಿಯೇ ಮೊದಲ ಪ್ರಯತ್ನ

ವೆಂಟಿಲೇಟರ್ ತಯಾರಿಕೆಗೆ 26 ಕಂಪನಿಗಳ ಬಿಡಿಭಾಗ ಬಳಕೆ

ವೆಂಟಿಲೇಟರ್ ತಯಾರಿಕೆಗೆ 26 ಕಂಪನಿಗಳ ಬಿಡಿಭಾಗ ಬಳಕೆ

ಧಮನ್-1 ವೆಂಟಿಲೇಟರ್ ತಯಾರಿಕೆಯನ್ನು ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಬಳಸಬೇಕಾಗಿರುವುದನ್ನು ತಲೆಯಲ್ಲಿ ಇಟ್ಟುಕೊಂಡು ಸಿದ್ಧಪಡಿಸಲಾಗಿದೆ. ಈ ವೆಂಟಿಲೇಟರ್ ವಿಶೇಷವಾಗಿದ್ದು, ದೇಶದ 26 ಕಂಪನಿಗಳಿಂದ ತರಿಸಿದ ಬಿಡಿಭಾಗಗಳಲ್ಲಿ ಇದರಲ್ಲಿ ಬಳಸಲಾಗಿದೆ.

ವೆಂಟಿಲೇಟರ್ ಅಭಿವೃದ್ಧಿಪಡಿಸುವಲ್ಲಿ 150 ಇಂಜಿನಿಯರ್ಸ್ ಶ್ರಮ

ವೆಂಟಿಲೇಟರ್ ಅಭಿವೃದ್ಧಿಪಡಿಸುವಲ್ಲಿ 150 ಇಂಜಿನಿಯರ್ಸ್ ಶ್ರಮ

ಒತ್ತಡ ನಿವಾರಿಸುವ ಧಮನ್-1 ವೆಂಟಿಲೇಟರ್ ಅಭಿವೃದ್ಧಿ ಪಡಿಸುವಲ್ಲಿ 150 ಇಂಜಿನಿಯರ್ಸ್ ತಂಡದ ಪರಿಶ್ರಮವಿದೆ. ಮುಖ್ಯ ಇಂಜಿನಿಯರ್ ರಾಜೇಂದ್ರ ಪರಮಾರ್ ನೇತೃತ್ವದ 150 ಇಂಜಿನಿಯರ್ಸ್ ತಂಡವು ಈ ವೆಂಟಿಲೇಟರ್ ನ್ನು ಸಿದ್ಧಪಡಿಸಿದೆ.

3 ವೆಂಟಿಲೇಟರ್ ನ್ನು ಸರ್ಕಾರಕ್ಕೆ ನೀಡಿದ ಸರ್ಕಾರ

3 ವೆಂಟಿಲೇಟರ್ ನ್ನು ಸರ್ಕಾರಕ್ಕೆ ನೀಡಿದ ಸರ್ಕಾರ

ಪ್ರತಿನಿತ್ಯ ಕಂಪನಿಯು 10 ವೆಂಟಿಲೇಟರ್ ಗಳನ್ನು ಸಿದ್ಧಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ಈಗಾಗಲೇ ಕಂಪನಿಯಲ್ಲಿ ತಯಾರಾದ 3 ವೆಂಟಿಲೇಟರ್ ಗಳನ್ನು ಗುಜರಾತ್ ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ ಎಂದು ಕಂಪನಿಯು ಸ್ಪಷ್ಟಪಡಿಸಿದೆ.

ವೆಂಟಿಲೇಟರ್ ಪ್ರಾಯೋಗಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ

ವೆಂಟಿಲೇಟರ್ ಪ್ರಾಯೋಗಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ

ಅಹ್ಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ಧಮನ್-1 ವೆಂಟಿಲೇಟರ್ ನ್ನು ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಲಾಯಿತು. ಈ ವೇಳೆ ಉತ್ತಮ ಫಲಿತಾಂಶ ಬಂದಿದೆ. ಇನ್ನು, ಕಂಪನಿ ಕಾರ್ಯವನ್ನು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಶ್ಲಾಘಿಸಿದ್ದಾರೆ. ವಿಶ್ವವೇ ಸಾಂಕ್ರಾಮಿಕ ಪಿಡುಗಿನಿಂದ ತತ್ತರಿಸಿ ಹೋಗಿರುವಂತಾ ಸಂದರ್ಭದಲ್ಲಿ ಗುಜರಾತ್ ನಲ್ಲಿನ ಈ ಅನ್ವೇಷಣೆಯು ಮೇಕ್ ಇನ್ ಇಂಡಿಯಾಗೆ ಉತ್ತಮ ಉದಾಹರಣೆ ಎಂದು ಹೇಳಲಾಗುತ್ತಿದೆ.

English summary
Gujarat Based Company Solved Ventilators Problem From Dhaman-1 Manufacture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X