ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂರತ್‌ನಲ್ಲಿ ಅನಿಲ ಸೋರಿಕೆ: ನಿದ್ದೆಯಲ್ಲಿ ನಿಂತು ಹೋಯ್ತು ಕಾರ್ಮಿಕರ ಉಸಿರಾಟ

|
Google Oneindia Kannada News

ಸೂರತ್‌, ಜನವರಿ 6: ಸೂರತ್‌ನ ಕೈಗಾರಿಕಾ ಪ್ರದೇಶದಲ್ಲಿ ರಾಸಾಯನಿಕ ಅನಿಲ ಸೋರಿಕೆಯಾಗಿ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದಾರೆ ಜೊತೆಗೆ 20 ಮಂದಿ ಅಸ್ವಸ್ಥರಾಗಿದ್ದಾರೆ. ಗುರುವಾರ ಬೆಳಗ್ಗೆ ಸಚಿನ್ ಕೈಗಾರಿಕಾ ಪ್ರದೇಶದ ಹೊರಗೆ ಈ ಘಟನೆ ನಡೆದಿದೆ. ಕೈಗಾರಿಕಾ ಪ್ರದೇಶದ ಹೊರಗೆ ನಿಲ್ಲಿಸಿದ್ದ ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗಿದ್ದು, ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಪೊಲೀಸರ ಪ್ರಕಾರ, ಸಚಿನ್ ಗುಜರಾತ್ ಕೈಗಾರಿಕಾ ಅಭಿವೃದ್ಧಿ ನಿಗಮದ ಕಾರ್ಮಿಕರು ಮಲಗಿದ್ದಾಗ ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗಿದೆ. ಅಸ್ವಸ್ಥರಾದವರನ್ನು ಸೂರತ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೂರತ್‌ನ ರಾಸಾಯನಿಕ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಿಂದ ಆರು ಜನರು ಸಾವನ್ನಪ್ಪಿದ್ದಾರೆ. 20 ಮಂದಿ ಅಸ್ವಸ್ಥರಾಗಿದ್ದಾರೆ ಎಂದು ಸ್ಥಳೀಯ ಪೊಲೀಸರು ದೃಢಪಡಿಸಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಟ್ವಿಟ್ಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. "ದುರದೃಷ್ಟವಶಾತ್ ಸೂರತ್‌ನಲ್ಲಿ ಅನಿಲ ಸೋರಿಕೆಯಿಂದ ಅನೇಕ ಜನರು ಸಾವನ್ನಪ್ಪಿದ್ದಾರೆ. ಅಗಲಿದ ಆತ್ಮಗಳಿಗೆ ಶಾಂತಿ ಸಿಗಲಿ ಮತ್ತು ಅವರ ಬಂಧುಗಳಿಗೆ ಇದನ್ನು ಸಹಿಸುವ ಶಕ್ತಿ ಸಿಗಲಿ. ಈ ಘಟನೆಯಲ್ಲಿ ಅನಾರೋಗ್ಯಕ್ಕೆ ಒಳಗಾದವರ ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ "ಎಂದು ಅವರು ಬರೆದಿದ್ದಾರೆ.

"ಇಂದು ಮುಂಜಾನೆ ಸೂರತ್‌ನ ಸಚಿನ್ ಜಿಐಡಿಸಿ ಪ್ರದೇಶದಲ್ಲಿನ ಕಂಪನಿಯೊಂದರಲ್ಲಿ ಅನಿಲ ಸೋರಿಕೆಯ ಬಗ್ಗೆ ತಿಳಿದು ತೀವ್ರ ನೋವಾಗಿದೆ" ಎಂದು ಗುಜರಾತ್ ರಾಜ್ಯ ಸಚಿವ (ಗೃಹ) ಹರ್ಷ ಸಂಘವಿ ಮೈಕ್ರೋ-ಬ್ಲಾಗಿಂಗ್ ಸೈಟ್‌ನಲ್ಲಿ ಹೇಳಿದ್ದಾರೆ. "ಈ ದುರದೃಷ್ಟಕರ ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಜನರೊಂದಿಗೆ ನನ್ನ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ. ಪೊಲೀಸ್ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಪೊಲೀಸ್ ಆಯುಕ್ತರೊಂದಿಗೆ ಮಾತುಕತೆ ನಡೆಸಿ, ಆದ್ಯತೆ ಮೇರೆಗೆ ಈ ಬಗ್ಗೆ ಪರಿಶೀಲಿಸುವಂತೆ ಸೂಚಿಸಲಾಗಿದೆ. ದರುಂತದಲ್ಲಿ ಅಗಲಿದ ಕುಟುಂಬಗಳೊಂದಿಗೆ ನಾವು ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ" ಎಂದು ಅವರು ಬರೆದಿದ್ದಾರೆ.

Gujarat: At least 6 labour dead, 20 sick after gas leak at industrial area in Surat

2020ರಲ್ಲಿ ಆಂಧ್ರ ಪ್ರದೇಶದ ವಿಶಾಖಪಟ್ಟಣದ ಆರ್‌ಆರ್ ವೆಂಕಟಾಪುರಂ ಗ್ರಾಮದಲ್ಲಿ ಸ್ಥಗಿತಗೊಂಡಿರುವ ಎಲ್‌ಜಿ ಪಾಲಿಮರ್ಸ್ ರಾಸಾಯನಿಕ ಕಾರ್ಖಾನೆಯಿಂದ ವಿಷಕಾರಿ ಅನಿಲ ಸೋರಿಕೆಯಾದ ಪರಿಣಾಮ 10ಕ್ಕೂ ಹೆಚ್ಚು ಮಂದಿಯ ಸಾವಿಗೆ ಶರಣಾಗಿದ್ದರು. ಘಟನೆಯಲ್ಲಿ 300ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲದೆ 5000ದಷ್ಟು ಮಂದಿಗೆ ಆರೋಗ್ಯ ತೊಂದರೆ ಎದುರಾಗಿತ್ತು. ಮೇ 5ರಂದು ಗುರುವಾರ ಬೆಳಗ್ಗೆ ಕೆಮಿಕಲ್ ಪ್ಲ್ಯಾಂಟ್‌ನಲ್ಲಿ ಲಾಕ್‌ಡೌನ್ ಬಳಿಕ ಘಟಕ ಪುನರಾರಂಭಕ್ಕೆ ಸಿದ್ಧತೆ ನಡೆಸಲಾಗುತ್ತಿತ್ತು. ಮೇ 8ರಂದು ನಸುಕಿನ ವೇಳೆ 3ರ ಹೊತ್ತಿಗೆ ಸ್ಟೈರೀನ್ ಎಂಬ ವಿಷಾನಿಲ ಸೋರಿಕೆಯಿಂದ ದುರಂತ ಸಂಭವಿಸಿದೆ.

Recommended Video

ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಸಲ್ಲಾ - ಸಿದ್ದು | Oneindia Kannada

English summary
At least six people died and 20 others fell sick after a gas leak at a chemical factory in Surat early on Thursday. The gas leaked from a tanker parked outside Sachin industrial area, leading to the workers getting suffocated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X