• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುಜರಾತ್ ವಿಧಾನಸಭೆ ಚುನಾವಣೆ : ಎಎಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

|
Google Oneindia Kannada News

ಅಹಮದಾಬಾದ್, ಆಗಸ್ಟ್ 02; ಗುಜರಾತ್ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯ ಘೋಷಣೆಯೊಂದಿಗೆ ಆಮ್ ಆದ್ಮಿ ಪಕ್ಷ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ತನ್ನ ಅಭ್ಯರ್ಥಿಯನ್ನು ಘೋಷಿಸಿದ ಪಕ್ಷವಾಗಿದೆ.

ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕ್ಲೀನ್ ಇಮೇಜ್ ಮತ್ತು ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಮೊದಲ ಪಟ್ಟಿಯಲ್ಲಿ ಒಟ್ಟು 10 ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.

ನನ್ ಹೆಂಡ್ತಿ ಓಡಿ ಹೋಗೋಕೆ ನೀನೇ ಕಾರಣ; ಗುಜರಾತ್ ಮಿನಿಸ್ಟರ್ ವಿರುದ್ಧ ಇದೇನು ಪ್ರಕರಣ?ನನ್ ಹೆಂಡ್ತಿ ಓಡಿ ಹೋಗೋಕೆ ನೀನೇ ಕಾರಣ; ಗುಜರಾತ್ ಮಿನಿಸ್ಟರ್ ವಿರುದ್ಧ ಇದೇನು ಪ್ರಕರಣ?

ಗುಜರಾತ್ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ ದಿಯೋದರ್‌ನಿಂದ ಭೀಮಾಭಾಯಿ ಚೌಧರಿ, ಸೋಮನಾಥ್‌ನಿಂದ ಜಗ್ಮಲ್‌ವಾಲಾ, ಛೋಟಾ ಉದಯಪುರದಿಂದ ಅರ್ಜುನ್ ರಥ್ವಾ, ಬೆಚರಾಜಿಯಿಂದ ಸಾಗರ್ ರಾಬರಿ, ರಾಜ್‌ಕೋಟ್ ಗ್ರಾಮಾಂತರದಿಂದ ವಾಶ್ರಮ್ ಸಗಾಥಿಯಾ, ಕಾಮಾಜಿಯಿಂದ ರಾಮ್ ಧದುಕಿ, ದಕ್ಷಿಣದಿಂದ ಶಿವಲಾಲ್‌ಭಾಯ್ ಬಾರ್ಸಿಯಾ, ರಾಜ್‌ಕೋಟ್‌ನಿಂದ ಸಿಲ್ವಾಲ್ ಬಾರ್ಸಿಯಾ ಹಾಗೂ ಸುಧೀರ್ ವಘಾನಿಗೆ ಗರಿಯಾಧರ್, ರಾಜೇಂದ್ರ ಸೋಲಂಕಿಗೆ ಬಾರ್ಡೋಲಿ, ಓಂ ಪ್ರಕಾಶ್ ತಿವಾರಿಗೆ ನರೋಡಾ (ಅಹಮದಾಬಾದ್) ನಿಂದ ಟಿಕೆಟ್ ನೀಡಿದೆ.

'ಗುಜರಾತ್ ಶೀಘ್ರದಲ್ಲೇ ಬದಲಾಗುತ್ತದೆ' ಕೇಜ್ರಿವಾಲ್

2022 ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 182 ಸ್ಥಾನಗಳಲ್ಲಿ ಪಕ್ಷ ಸ್ಪರ್ಧಿಸಲಿದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಪ್ರಕಟಿಸಿದ್ದಾರೆ. 2021 ರಲ್ಲಿ ನಡೆದ ಸೂರತ್ ಮುನ್ಸಿಪಲ್ ಕಾರ್ಪೊರೇಷನ್ (ಎಸ್‌ಎಂಸಿ) ಚುನಾವಣೆಯಲ್ಲಿ 120 ಸ್ಥಾನಗಳ ಪೈಕಿ 27 ಸ್ಥಾನಗಳನ್ನು ಗೆದ್ದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅರವಿಂದ್‌ ಕೇಜ್ರಿವಾಲ್‌, "ಎಎಪಿ 2022 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಯೊಂದು ಸ್ಥಾನದಲ್ಲೂ ಸ್ಪರ್ಧಿಸಲಿದೆ. ಎಎಪಿಯು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ವಿಶ್ವಾಸಾರ್ಹ ಪರ್ಯಾಯವಾಗಿದೆ. ಗುಜರಾತ್ ಶೀಘ್ರದಲ್ಲೇ ಬದಲಾಗುತ್ತದೆ," ಎಂದು ಹೇಳಿದ್ದರು.

ಗುಜರಾತ್ ಬಳಲುವಂತೆ ಮಾಡಿದ ಮೈತ್ರಿ

ಗುಜರಾತ್ ಬಳಲುವಂತೆ ಮಾಡಿದ ಮೈತ್ರಿ

"ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಈ ಸ್ನೇಹ ಮತ್ತು ಮೈತ್ರಿಯಿಂದಾಗಿ ಗುಜರಾತ್ ಬಳಲುತ್ತಿದೆ. ಕಳೆದ 27 ವರ್ಷಗಳಿಂದ ಬಿಜೆಪಿ ಈ ರಾಜ್ಯವನ್ನು ಆಳಿತು. ಕಾಂಗ್ರೆಸ್ ಬಿಜೆಪಿಯ ಜೇಬಿನಲ್ಲಿದೆ ಎಂದು ಜನರು ಹೇಳುವುದನ್ನು ನಾನು ಕೇಳಿದ್ದೇನೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಒಂದೇ. ಸ್ವಾತಂತ್ರ್ಯದ ನಂತರದ ಹೆಚ್ಚಿನ ಅವಧಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಧಿಕಾರದಲ್ಲಿದೆ. ಆದರೆ ಬಿಜೆಪಿ, ಕಾಂಗ್ರೆಸಿಗರು ಯಾವ ಕಾರ್ಯ ಮಾಡಿದ್ದಾರೆ ಎಂಬುದಕ್ಕೆ ಜನರೇ ಸಾಕ್ಷಿಯಾಗಿದ್ದಾರೆ. 75 ವರ್ಷಗಳ ನಂತರವೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ," ಎಂದರು.

ದಾಖಲೆಯ ಗೆಲುವು ಸಾಧಿಸಲು ಭರ್ಜರಿ ಪ್ಲ್ಯಾನ್

ದಾಖಲೆಯ ಗೆಲುವು ಸಾಧಿಸಲು ಭರ್ಜರಿ ಪ್ಲ್ಯಾನ್

ಈ ವರ್ಷದ ಕೊನೆಯಲ್ಲಿ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಬೇಕಿದೆ, ಆದರೆ ಈ ಬಾರಿ 2017 ರಂತೆ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಿಜೆಪಿ ಸಿದ್ಧವಿಲ್ಲ. 2017ರ ವಿಧಾನಸಭೆ ಚುನಾವಣೆಯ ಕೊನೆಯ ಸುತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರದ ಜವಾಬ್ದಾರಿಯನ್ನು ವಹಿಸದೇ ಇದ್ದಿದ್ದರೆ ಬಿಜೆಪಿ ಮತ್ತೆ ಅಲ್ಲಿ ಸರ್ಕಾರ ರಚಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಈ ಬಾರಿ 2017ರ ರೀತಿ ರಿಸ್ಕ್ ತೆಗೆದುಕೊಳ್ಳಲು ಬಿಜೆಪಿ ಹೈಕಮಾಂಡ್ ಸಿದ್ಧವಿಲ್ಲ ಮತ್ತು ಚುನಾವಣೆಗೆ ಹಲವು ತಿಂಗಳು ಬಾಕಿ ಇರುವಾಗಲೇ ಬಿಜೆಪಿ ಹೈಕಮಾಂಡ್ ಈ ಕೆಲಸ ಆರಂಭಿಸಿದೆ. ಮತ್ತೆ ಚುನಾವಣೆಯನ್ನು ಭರ್ಜರಿಯಾಗಿ ಗೆಲ್ಲಲು ಪ್ಲಾನ್ ಮಾಡುತ್ತಿದೆ.

ಚುನಾವಣೆಯ ಕಾರ್ಯತಂತ್ರದ ಬಗ್ಗೆ ಚರ್ಚೆ

ಚುನಾವಣೆಯ ಕಾರ್ಯತಂತ್ರದ ಬಗ್ಗೆ ಚರ್ಚೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯಿಂದ ಗುಜರಾತ್‌ಗೆ ಆಗಮಿಸಿ ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ, ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚಿಸುತ್ತಿದ್ದಾರೆ, ಗುಜರಾತ್‌ಗೆ ಪದೇ ಪದೇ ಭೇಟಿ ನೀಡುತ್ತಿದ್ದಾರೆ ಮತ್ತು ಸಮಾವೇಶ, ಕಾರ್ಯಕ್ರಮಗಳು ಮತ್ತು ರೋಡ್ ಶೋಗಳನ್ನು ನಡೆಸುತ್ತಿದ್ದಾರೆ. ಹಾಗೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ರಾಷ್ಟ್ರೀಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಕೂಡ ಗುಜರಾತ್ ವಿಧಾನಸಭಾ ಚುನಾವಣೆಯ ಕಾರ್ಯತಂತ್ರದ ಬಗ್ಗೆ ಸೂಕ್ಷ್ಮ ಅಂಶಗಳ ಬಗ್ಗೆ ಆಳವಾದ ಚರ್ಚೆಯ ನಂತರವೇ ನಿರ್ಧಾರ ತೆಗೆದುಕೊಳ್ಳುವ ಮೂಲಕ ಕಾರ್ಯತಂತ್ರವನ್ನು ಅಂತಿಮಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

English summary
Gujarat Assembly Elections 2022: AAP releases first list of candidates. Here is the complete information.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X