ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪ್ಲಾಸ್ಟಿಕ್ ಕೊಡಿ ಊಟ ಪಡೆಯಿರಿ' ಇಲ್ಲಿದೆ ನೂತನ ಹೋಟೆಲ್

|
Google Oneindia Kannada News

ಗುಜರಾತ್ ರಾಜ್ಯದಲ್ಲಿ ಹಲವಾರು ಹೋಟೆಲ್‌ಗಳು ಇವೆ. ಇವುಗಳಲ್ಲೊಂದಾದ ಹೋಟೆಲ್ ಭಾರೀ ಸುದ್ದಿಯಲ್ಲಿದೆ. ಇದರ ಬಗ್ಗೆ ತಿಳಿದರೆ ನೀವು ಇಂತಹ ಹೋಟೆಲ್ ನಮ್ಮಲ್ಲಿ ಯಾಕೆ ಇಲ್ಲ ಎಂಬ ಕೊರಗು ಮೂಡುವಷ್ಟು ಈ ಹೋಟೆಲ್ ಕಾರ್ಯ ನಿರ್ವಹಿಸುತ್ತಿದೆ. ಹೌದು... ಈ ಹೋಟೆಲ್‌ನಲ್ಲಿ ನೀವು ತಿನ್ನುವ ಆಹಾರಕ್ಕೆ ಪಾವತಿಸಬೇಕಾಗಿಲ್ಲ. ಹಾಗಂತ ಫ್ರೀಯಾಗಿ ತಿನ್ಬಹುದಾ ಅನ್ಕೋಬೇಡಿ. ಈ ಹೋಟೆಲ್‌ನಲ್ಲಿ ನೀವು ಸೇವಿಸುವ ಆಹಾರಕ್ಕೆ ಹಣ ಕೊಡಬೇಕಿಲ್ಲ ಬದಲಿಗೆ ಪ್ಲಾಸ್ಟಿಕ್ ಕೊಟ್ಟರೆ ಸಾಕು. ಆಶ್ಚರ್ಯ ಎನಿಸಿದರೂ ಇದು ನಿಜ. ಪ್ಲಾಸ್ಟಿಕ್ ತ್ಯಾಜ್ಯವನ್ನು ಖರೀದಿಸಿ ಈ ಹೋಟೆಲ್‌ನಲ್ಲಿ ಆಹಾರವನ್ನು ನೀಡಲಾಗುತ್ತದೆ. ಪರಿಸರ ಸಂರಕ್ಷಣೆಗಾಗಿ ಕಾರ್ಯಾಚರಿಸುತ್ತಿರುವ ಈ ಹೋಟೆಲ್ ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ನೀವು ರೆಸ್ಟೋರೆಂಟ್‌ಗೆ ಹೋಗಿ ನಗದು ಬದಲು ಪ್ಲಾಸ್ಟಿಕ್ ತ್ಯಾಜ್ಯವನ್ನು ಹಾಕಿದರೆ ನಿಮಗೆ ಎಷ್ಟು ಸಂತೋಷವಾಗುತ್ತದೆ. ಹೌದು! ಗುಜರಾತ್ ರಾಜ್ಯದ ಜುನಾಗಢದಲ್ಲಿ ಇಂತಹ ಒಂದು ಹೋಟೆಲ್ ಹೊಸದಾಗಿ ತೆರೆಯಲಾಗಿದೆ.

ಪ್ಲಾಸ್ಟಿಕ್ ಕೊಟ್ಟು ಊಟ ಪಡೆಯಿರಿ

ಪ್ಲಾಸ್ಟಿಕ್ ಕೊಟ್ಟು ಊಟ ಪಡೆಯಿರಿ

ಜುಲೈ 1 ರಿಂದ ದೇಶಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿರುವುದು ಗೊತ್ತೇ ಇದೆ. ಪರಿಸರ ಮಾಲಿನ್ಯ ತಡೆಗಟ್ಟಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಈ ಉಪಕ್ರಮವನ್ನು ಬೆಂಬಲಿಸುವ ಸಲುವಾಗಿ, ಗುಜರಾತ್ ಹೋಟೆಲ್ ನೀವು ಪ್ಲಾಸ್ಟಿಕ್ ತ್ಯಾಜ್ಯವನ್ನು ತಂದು ರುಚಿಕರವಾದ ಆಹಾರವನ್ನು ಖರೀದಿಸುವ ವ್ಯವಸ್ಥೆಯನ್ನು ಪರಿಚಯಿಸಿದೆ.

ಸಾವಯವ ಆಹಾರ

ಸಾವಯವ ಆಹಾರ

ಗ್ರಾಹಕರು ತಮ್ಮ ಮನೆಯ ಪ್ಲಾಸ್ಟಿಕ್ ತ್ಯಾಜ್ಯವನ್ನು ತಂದು ಆ ಪ್ಲಾಸ್ಟಿಕ್ ತ್ಯಾಜ್ಯದ ತೂಕಕ್ಕೆ ಅನುಗುಣವಾಗಿ ಆಹಾರ ಪಡೆಯಬಹುದು. ರೈತರು ಮತ್ತು ಮಹಿಳೆಯರ ಗುಂಪಿನ ಸಹಾಯದಿಂದ ಸರ್ವೋದಯ ಸಖಿ ಮಂಡಲ್ ಎಂಬ ಸಂಸ್ಥೆಯು ಹೋಟೆಲ್ ಅನ್ನು ನಡೆಸುತ್ತಿದೆ.

ಈ ಹೋಟೆಲ್‌ನಲ್ಲಿ ತಯಾರಿಸಲಾದ ಎಲ್ಲಾ ಆಹಾರವನ್ನು ಸಾವಯವ ಮತ್ತು ಸ್ಥಳೀಯವಾಗಿ ಬೆಳೆದ ಉತ್ಪನ್ನಗಳಿಂದ ತಯಾರಿಸಲಾಗುತ್ತದೆ. ಜುನಾಗಢ ಜಿಲ್ಲಾಧಿಕಾರಿ ರಶೀದ್ ರಾಜ್ ಮಾತನಾಡಿ, ನಮ್ಮ ಪ್ರದೇಶವನ್ನು ಸ್ವಚ್ಛ ಮತ್ತು ಹಸಿರಿನಿಂದ ಕೂಡಿರಲು ನಾವು ಪ್ರೋತ್ಸಾಹಿಸುತ್ತೇವೆ. ಈ ಹೋಟೆಲ್‌ಗೆ ನೀವು 500 ಗ್ರಾಂ ಪ್ಲಾಸ್ಟಿಕ್ ತಂದರೆ ನಾವು ನಿಮಗೆ ಒಂದು ಲೋಟ ನಿಂಬೆ ರಸವನ್ನು ನೀಡುತ್ತೇವೆ. ಅದೇ ರೀತಿ ಒಂದು ಕಿಲೋ ಪ್ಲಾಸ್ಟಿಕ್ ತ್ಯಾಜ್ಯ ಕೊಟ್ಟರೆ ಒಂದು ಪ್ಲೇಟ್ ಟೋಕ್ಲಾ ಅಥವಾ ಊಟ ಕೊಡುತ್ತೇವೆ.

ರುಚಿಯಾದ ಆಹಾರ

ರುಚಿಯಾದ ಆಹಾರ

ಈ ಹೋಟೆಲ್‌ನಲ್ಲಿರುವ ಮೆನು ಕೂಡ ಅದ್ಭುತವಾಗಿದೆ. ವೀಳ್ಯದೆಲೆ, ಗುಲಾಬಿ, ಅಂಜೂರ ಮತ್ತು ಖರ್ಜೂರದಿಂದ ತಯಾರಿಸಿದ ಆಹಾರವನ್ನು ಮಣ್ಣಿನ ಪಾತ್ರೆಯಲ್ಲಿ ಬಡಿಸಲಾಗುತ್ತದೆ. ಗಮನಿಸಬೇಕಾದ ಸಂಗತಿಯೆಂದರೆ, ಒಂದು ಬಾರಿ ಬಳಸುವ ಪ್ಲಾಸ್ಟಿಕ್ ಅನ್ನು ನಿಷೇಧಿಸಲಾಗಿದೆ. ಆದರೆ ನೀವು ಆ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಸಕ್ಕೆ ಎಸೆಯುವ ಬದಲು, ನೀವು ಅದನ್ನು ಈ ಹೋಟೆಲ್‌ಗೆ ನೀಡಿ ರುಚಿಯಾದ ಊಟವಾಗಿ ತಿನ್ನಬಹುದು.

ಪರ್ಯಾಯ ಮಾರ್ಗ

ಪರ್ಯಾಯ ಮಾರ್ಗ

ಪ್ಲಾಸ್ಟಿಕ್ ಬಳಕೆಯಿಂದ ಮನುಷ್ಯರು ಮಾತ್ರವಲ್ಲದೆ ಪ್ರಾಣಿಗಳು ಮತ್ತು ಸಮುದ್ರ ಜೀವಿಗಳು ಸಹ ಹಾನಿಗೊಳಗಾಗುತ್ತವೆ. ಈ ಜೀವಿಗಳನ್ನು ದೀರ್ಘಕಾಲ ಜೀವಂತವಾಗಿರಿಸಲು, ಪ್ಲಾಸ್ಟಿಕ್ ನಿಷೇಧವನ್ನು ಮಾಡಬೇಕು. ಇಲ್ಲವಾದಲ್ಲಿ ನಮ್ಮ ಮುಂದಿನ ಪೀಳಿಗೆಗೆ ತುಂಬಾ ತೊಂದರೆಯಾಗುತ್ತದೆ.

ಬಳಸಿ ಬಿಸಾಡುವ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ, ನಮ್ಮ ಭೂಮಿಯನ್ನು ನಮ್ಮ ಮನೆಯಂತೆ ಸ್ವಚ್ಛವಾಗಿ ಮತ್ತು ಸುರಕ್ಷಿತವಾಗಿರಿಸಲು ನಾವು ಸಾಧ್ಯವಾದಷ್ಟು ಪರ್ಯಾಯಗಳನ್ನು ಕಂಡುಕೊಳ್ಳುವುದು ಪ್ರತಿಯೊಬ್ಬರ ಗುರಿಯಾಗಿದೆ.

English summary
'Give plastic get food' gujarath's new hotel has gone viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X