• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕದ್ದ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಕಳ್ಳನ ವಿಡಿಯೋ ವೈರಲ್

|

ಅಹಮದಾಬಾದ್ (ಗುಜರಾತ್), ಅಕ್ಟೋಬರ್ 8: ಕಳ್ಳತನವನ್ನು ಸಾಂಗೋಪಾಂಗವಾಗಿ ಮಾಡಿದ ಖುಷಿಯಿದ್ದರೆ ಯಾರಾದರೂ ಏನು ಮಾಡಬಹುದು? ಮೊದಲಿಗೆ ಅಲ್ಲಿಂದ ತಪ್ಪಿಸಿಕೊಳ್ಳುವುದಕ್ಕೆ ನೋಡ್ತಾರೆ ಅಷ್ಟೆ ಎಂಬ ಉತ್ತರ ನಿಮ್ಮದಾದರೆ ಈ ವರದಿಯನ್ನು ನೀವು ಓದಲೇಬೇಕು. ಯಾಕೆಂದರೆ, ಜಮಾನ ಬದಲಾಗಿದೆ. ಕಳ್ಳರು ಸೆಲಬ್ರೇಟ್ ಮಾಡಲು ಆರಂಭಿಸಿದ್ದಾರೆ.

ಐವರು ಕಳ್ಳರ ಗುಂಪೊಂದು ದರೋಡೆ ಮಾಡಿದ ಮೇಲೆ, ಆ ಗುಂಪಿನ ಸದಸ್ಯನೊಬ್ಬನೊಬ್ಬ ಮನಸಾರೆ ಕುಣಿತ ಹಾಕಿದ್ದಾನೆ. ಅದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಕೂಡ. ಇಲ್ಲಿನ ಗಾಂಧಿನಗದರ ಸರ್ಗಸನ್ ಹಳ್ಳಿಯ ಫ್ಲ್ಯಾಟ್ ವೊಂದನ್ನು ಗುರಿ ಮಾಡಿಕೊಂಡ ಕಳ್ಳರು, ಅಲ್ಲಿ ಕಳವಿಗೆ ತೆರಳಿದ್ದಾರೆ.

ಮಂಗಳೂರಿನಲ್ಲಿ ವ್ಯಕ್ತಿಯೊಬ್ಬ ಕಳ್ಳತನ ಮಾಡಿದ, ಅದೇನು ಗೊತ್ತಾ..?!

ಅದೇನು ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಆ ಕಳ್ಳನ ಗಮನಕ್ಕೆ ಬಂತೋ ಏನೋ, ಪೊಲೀಸರಿಗೆ ಕಿಚಾಯಿಸಲು ಅದರ ಮುಂದೆಯೇ ಕುಣಿದಿದ್ದಾನೆ. ಆ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇಂಥ ಕೃತ್ಯ ಎಸಗಿದ ಜಾಗದಲ್ಲಿ ನೋಡುವುದಕ್ಕೆ ಸಿಗುವ ಅಪರೂಪದ ದೃಶ್ಯಾವಳಿಗಳು ಇವು ಎಂದು ಪೊಲೀಸರು ಅಭಿಪ್ರಾಯಪಡುತ್ತಾರೆ.

ಕದ್ದ ಖುಷಿಯಲ್ಲಿ ವಿಜಯೋತ್ಸವ ಆಚರಣೆ

ಕದ್ದ ಖುಷಿಯಲ್ಲಿ ವಿಜಯೋತ್ಸವ ಆಚರಣೆ

ವಿಜಯೋತ್ಸವ ಆಚರಣೆ ಮಾಡುವ ರೀತಿಯಲ್ಲಿ ಈ ಕಳ್ಳರ ಗುಂಪಿನ ಸದಸ್ಯನ ವರ್ತನೆ ಇತ್ತು. ಅದೇನು ಅಂತಹ ದೊಡ್ಡ ಗೆಲುವಾ ಎಂದು ನೋಡಿದರೆ, ಎರಡು ಫ್ಲ್ಯಾಟ್ ಗಳ ಒಳಗೆ ಹೋಗಲು ಯಶಸ್ವಿಯಾದ ಈ ಕಳ್ಳರು ಲಕ್ಷಗಟ್ಟಲೆ ಬೆಲೆ ಬಾಳುವ ಒಡವೆಗಳನ್ನು ಎಗರಿಸಿದ್ದಾರೆ. ಅದೇ ಸಂತಸದಲ್ಲಿ ಗುಂಪಿನ ಸದಸ್ಯನೊಬ್ಬ ಕುಣಿದಿದ್ದಾನೆ.

ಹೊದಿಕೆಯಿಂದ ಮೈ ಮುಚ್ಚಿಕೊಂಡು ನೃತ್ಯ

ಹೊದಿಕೆಯಿಂದ ಮೈ ಮುಚ್ಚಿಕೊಂಡು ನೃತ್ಯ

ಕ್ಯಾಮೆರಾ ಎದುರಿಗೆ ಕುಣಿದಿರುವ ಕಳ್ಳ ಹೊದಿಕೆಯಿಂದ ಇಡಿಯಾಗಿ ತನ್ನನ್ನು ಮುಚ್ಚಿಕೊಂಡಿದ್ದಾನೆ. ಆ ನಂತರ ಬಹಳ ಆಸಕ್ತಿಕರ ಎನಿಸುವಂಥ ನೃತ್ಯದ ಹೆಜ್ಜೆಗಳನ್ನು ಹಾಕಿದ್ದಾನೆ. ತಂಡದ ಇತರ ಸದಸ್ಯರು ಆ ಕಟ್ಟಡದಿಂದ ತಪ್ಪಿಸಿಕೊಳ್ಳುವ ಬಗೆ ಹೇಗೆಂದು ದಾರಿ ಹುಡುಕಿಕೊಂಡು ಸರ್ಗಾಸನ್ ನ ರತ್ನರಾಜ್ ರೆಸಿಡೆನ್ಸಿಯಿಂದ, ಕೈಯಲ್ಲಿ ಒಂದಿಷ್ಟು ಚಿನ್ನಾಭರಣ ಹಿಡಿದುಕೊಂಡು ತಪ್ಪಿಸಿಕೊಂಡು ಹೋಗಿದ್ದಾರೆ.

ಅಬ್ಬಾ! ಗುಜರಾತಿಗಳು ಘೋಷಿಸಿದ್ದ ತೆರಿಗೆ ಕಟ್ಟದ ಮೊತ್ತ 18,000 ಕೋಟಿ

ಪ್ರತ್ಯೇಕವಾಗಿ ಎರಡು ದೂರು ದಾಖಲು

ಪ್ರತ್ಯೇಕವಾಗಿ ಎರಡು ದೂರು ದಾಖಲು

ಈ ಅಪರಿಚಿತ ಕಳ್ಳರ ವಿರುದ್ಧ ಎರಡು ಪ್ರತ್ಯೇಕ ದೂರುಗಳನ್ನು ಗಾಂಧೀನಗರ ಸೆಕ್ಟರ್ ಏಳರ ಪೊಲೀಸರು ದಾಖಲಿಸಿದ್ದು, ಈ ಗುಂಪಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ. ಕಳ್ಳತನ ಮಾಡಿದ ಗುಂಪು ಸಿಕ್ಕಿ, ಅದರಲ್ಲಿ ಹೊದಿಕೆ ಹೊದ್ದು ಕುಣಿದ 'ಕಲಾವಿದ'ನು ಪೊಲೀಸರಿಗೆ ತಗಲ್ಹಾಕಿಕೊಂಡರೆ ಅದಿನ್ಯಾವ ಪರಿಯ ಕುಣಿತ ಇದೆಯೋ!

ರಾಮನಗರದಲ್ಲಿ ಮದುವೆ ಸಲುವಾಗಿ ಕೊಲೆ ಮಾಡಿದ್ದ ಹಂತಕ

ರಾಮನಗರದಲ್ಲಿ ಮದುವೆ ಸಲುವಾಗಿ ಕೊಲೆ ಮಾಡಿದ್ದ ಹಂತಕ

ರಾಮನಗರದಲ್ಲಿ ಕೆಲ ತಿಂಗಳ ಹಿಂದೆ ಒಂಟಿ ಮಹಿಳೆಯೊಬ್ಬರ ಕೊಲೆಯಾಗಿತ್ತು. ಆ ನಂತರ ಆಕೆಯ ಆಭರಣ, ನಗದು ಕಳವು ಮಾಡಲಾಗಿತ್ತು. ಆ ಪ್ರಕರಣದಲ್ಲಿ ಹಂತಕ ಹತ್ಯೆಯಾದ ಜಾಗದಲ್ಲಿ ಕುಡಿದು, ಊಟ ಮಾಡಿ ತೆರಳಿದ್ದ. ವೃತ್ತಿಯಿಂದ ಚಾಲಕನಾಗಿದ್ದ ಆತ, ತನ್ನ ಮದುವೆ ಖರ್ಚನ್ನು ನಿಭಾಯಿಸುವ ಸಲುವಾಗಿ ಕೊಲೆ ಮಾಡಿದ್ದ.

ಕದಿಯದ ಪರ್ಸ್ ಆರೋಪಕ್ಕೆ ಸುಖಾಸುಮ್ಮನೆ 17ವರ್ಷ ಸೆರೆವಾಸ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
One of the burglars of a gang of five thieves was caught dancing after committing robbery in the CCTV camera footage. They had targeted a flat in Sargasan village of Gandhinagar , Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more