ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧಿ ನಾಡು ಗುಜರಾತ್‌ನಲ್ಲೇ ಮಹಾತ್ಮಾ ಗಾಂಧಿ ಶಿರಚ್ಛೇಧನ!

|
Google Oneindia Kannada News

ಅಹ್ಮದಾಬಾದ್, ಜನವರಿ 04: ಮಹಾತ್ಮಾ ಗಾಂಧಿ ಅವರು ಹುಟ್ಟಿದ ಗುಜರಾತ್‌ನಲ್ಲಿಯೇ ಅವರ ಪ್ರತಿಮೆಯನ್ನು ಧ್ವಂಸ ಮಾಡಿ ವಿಕೃತಿ ಮೆರೆಯಲಾಗಿದೆ.

ಗುಜರಾತ್‌ನ ಆಮ್ರೇಲಿ ಜಿಲ್ಲೆಯ ಹರಿಕೃಷ್ಣ ಕೆರೆ-ಉದ್ಯಾನದ ಬಳಿ ನಿರ್ಮಿತವಾಗಿದ್ದ ಸುಂದರ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಧ್ವಂಸ ಮಾಡಿರುವ ಕಿಡಿಗೇಡಿಗಳು, ಗಾಂಧಿ ಅವರ ಪುತ್ಥಳಿಯ ಕತ್ತು ಮುರಿದು ಎಸೆದಿದ್ದಾರೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ.

ವಜ್ರದ ವ್ಯಾಪಾರಿ ಸಾವಜೀಭಾಯ್ ಡೋಲಾಕಿಯಾ ಅವರು ತಮ್ಮ ಡೋಲಾಕಿಯಾ ಎನ್‌ಜಿಓ ವತಿಯಿಂದ ಈ ಪ್ರತಿಮೆಯನ್ನು ನಿರ್ಮಿಸಿದ್ದರು. ಇದನ್ನು ಪ್ರಧಾನಿ ಮೋದಿ ಅವರೇ ಕಳೆದ ವರ್ಷ ಉದ್ಘಾಟಿಸಿದ್ದರು. ಈಗ ಅದನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ.

Gandhi Statue Vandalized In Gujrats Amreli

ಕಿಡಿಗೇಡಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳುತ್ತೇವೆ, ಇಲ್ಲಿ ಕೆರೆ ಕಟ್ಟಿರುವುದನ್ನು ವಿರೋಧಿಸಿ ಈ ಕೃತ್ಯ ಎಸಗಿರುವ ಸಂಭವ ಇದೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ಲಾತಿ ಪೊಲೀಸ್‌ ಠಾಣೆ ಎಸ್‌ಐ ಹೇಳಿದ್ದಾರೆ.

ಗಾಂಧಿ ಮತ್ತು ಅಂಬೇಡ್ಕರ್‌ ಅವರ ಪ್ರತಿಮೆಗಳನ್ನು ಧ್ವಂಸಗೊಳಿಸುವ ಯತ್ನ ಹಿಂದಿನಿಂದಲೂ ನಡೆಯುತ್ತಲೇ ಬಂದಿದೆ.

Gandhi Statue Vandalized In Gujrats Amreli
English summary
Mahathma Gandhi's statue vandalized in Gujrat's Amreli district. Statue was located at Hakrishna lake, statue and the lake inaugurated by Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X