ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಮಾಜಿ ಸಿಎಂ ಕೇಶುಭಾಯ್ ಪಟೇಲ್ ನಿಧನ

|
Google Oneindia Kannada News

ಅಹ್ಮದಾಬಾದ್, ಅಕ್ಟೋಬರ್ 29: ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ಸುದೀರ್ಘ ಕಾಲದ ಅನಾರೋಗ್ಯದ ಬಳಿಕ ಗುರುವಾರ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಎದೆನೋವಿನ ಕಾರಣದಿಂದ ಅವರನ್ನು ಅಹಮದಾಬಾದ್‌ನ ಸ್ಟರ್ಲಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ.

1995 ಮತ್ತು 1998-2001ರ ಅವಧಿಯಲ್ಲಿ ಅವರು ಎರಡು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಗುಜರಾತ್ ವಿಧಾನಸಭೆಗೆ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, 2012ರಲ್ಲಿ ಬಿಜೆಪಿ ತೊರೆದು, ಗುಜರಾತ್ ಪರಿವರ್ತನ್ ಪಾರ್ಟಿ ಸ್ಥಾಪಿಸಿದ್ದರು. ಅವರ ಪಕ್ಷ 2012ರ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿತ್ತು. ಬಳಿಕ ಮಹಾ ಗುಜರಾತ್ ಜನತಾ ಪಾರ್ಟಿ ಜತೆಗೆ ಪಕ್ಷ ವಿಲೀನಗೊಂಡಿತ್ತು. 2014ರಲ್ಲಿ ಬಿಜೆಪಿ ಜತೆಗೆ ವಿಲೀನಗೊಂಡಿತ್ತು.

2012ರ ವಿಧಾನಸಭೆ ಚುನಾವಣೆಯಲ್ಲಿ ವಿಸವಾಡರ್ ವಿಧಾನಸಭೆ ಕ್ಷೇತ್ರದಿಂದ ಅವರು ಚುನಾಯಿತರಾಗಿದ್ದರು. ಆದರೆ ಅನಾರೋಗ್ಯದ ಕಾರಣ 2014ರಲ್ಲಿ ರಾಜೀನಾಮೆ ನೀಡಿದ್ದರು.

 Former Gujarat Chief Minister Keshubhai Patel Passes Away At 92 Due To Cardiac Arrest

ಜುನಾಗಡ ಜಿಲ್ಲೆಯ ವಿಸವಾಡರ್ ಪಟ್ಟಣದಲ್ಲಿ 1928ರಂದು ಜನಿಸಿದ್ದ ಕೇಶುಭಾಯ್ ಪಟೇಲ್, 1945ರಲ್ಲಿ ಪ್ರಚಾರಕರಾಗಿ ಆರೆಸ್ಸೆಸ್ ಸೇರಿಕೊಂಡಿದ್ದರು. 1960ರಲ್ಲಿ ಜನಸಂಘದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿ, ಪಕ್ಷದ ಕಾರ್ಯಕರ್ತರಾಗಿ ರಾಜಕೀಯ ಜೀವನ ಆರಂಭಿಸಿದ್ದರು.

English summary
Former Gujarat Chief Minister Keshubhai Patel passed away on Thursday at 92 after he suffered from cardiac arrest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X