ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌: ಮತಾಂತರ ನಿಷೇಧ ಕಾನೂನಿನಡಿ ಮೊದಲ ಪ್ರಕರಣ- 6 ಜನರ ಬಂಧನ

|
Google Oneindia Kannada News

ಅಹಮದಾಬಾದ್‌, ಜೂ.19: ವಡೋದರಾ ನಗರ ಪೊಲೀಸರು 2021 ರ ತಿದ್ದುಪಡಿ ಮಾಡಿದ ಗುಜರಾತ್‌ನ ಮತಾಂತರ ನಿಷೇಧ ಕಾನೂನಿನಡಿ ಮೊದಲ ಪ್ರಕರಣವನ್ನು ದಾಖಲಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಕುಟುಂಬದ ಐವರು ಸೇರಿದಂತೆ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿದ್ದಾರೆ.

ವಡೋದರಾದ ಪೊಲೀಸ್ ಠಾಣೆಯಲ್ಲಿ ಶುಕ್ರವಾರ 24 ವರ್ಷದ ಯುವತಿಯೊಬ್ಬಳು ತಾನು 2018 ರಲ್ಲಿ ಒಬ್ಬ ವ್ಯಕ್ತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಭೇಟಿಯಾಗಿದ್ದೆ. ಆದರೆ ಆರೋಪಿಗಳು ನಕಲಿ ಗುರುತನ್ನು ಬಳಸಿ ನನ್ನ ಪರಿಚಯ ಮಾಡಿಕೊಂಡಿದ್ದಾರೆ. ಮದುವೆಯ ನಂತರ ಆಧುನಿಕ ಜೀವನದ ಭರವಸೆ ನೀಡುವ ಮೂಲಕ ಆಮಿಷಕ್ಕೆ ಒಳಪಡಿಸಿದ್ದಾರೆ. ಬಳಿಕ ಈ ಆರೋಪಿ ಹೊಟೇಲ್‌ನಲ್ಲಿ ಹಾಗೂ ಸಹ ಆರೋಪಿಗಳ ಫ್ಲ್ಯಾಟ್‌ಗಳಲ್ಲಿ ನಾಲ್ಕು ಬಾರಿ ಅತ್ಯಾಚಾರ ಮಾಡಿದ್ದಾರೆ ಎಂದು ಈ ಯುವತಿ ಆರೋಪಿಸಿರುದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡು, ವಿವಾಹವಾದ ಮಹಿಳೆಯ ರಕ್ಷಣೆಗೆ ಕೋರ್ಟ್ ಆದೇಶ ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡು, ವಿವಾಹವಾದ ಮಹಿಳೆಯ ರಕ್ಷಣೆಗೆ ಕೋರ್ಟ್ ಆದೇಶ

ಮಹಿಳೆಯ ಜೊತೆಗೆ ತಾನು ಆತ್ಮೀಯವಾಗಿದ್ದ ಖಾಸಗಿ ಫೋಟೋಗಳನ್ನು ಬಳಸಿ 26 ವರ್ಷದ ಆರೋಪಿಯು ಮಹಿಳೆಯನ್ನು "ನಿಕಾಹ್ ಸಮಾರಂಭ" ದಲ್ಲಿ ಮದುವೆಯಾಗಲು ಮತ್ತು ಇಸ್ಲಾಂಗೆ ಮತಾಂತರಗೊಳ್ಳಲು ಬ್ಲ್ಯಾಕ್ ಮೇಲ್ ಮಾಡಿದ್ದಾನೆ ಎಂದು ಕೂಡಾ ಆರೋಪಿಸಲಾಗಿದೆ.

First case under amended Freedom of Religion Act lodged in Gujarat, six detained

ಈ ಆರೋಪಿಯ ವಿರುದ್ದ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಸಹಕರಿಸಿದ ಆತನ ಪೋಷಕರು, ಸಹೋದರಿ, ಚಿಕ್ಕಪ್ಪ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ದೂರಿನ ಆಧಾರದಲ್ಲಿ ವಡೋದರಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಕೋವಿಡ್ -19 ಪರೀಕ್ಷೆಗಳನ್ನು ಮಾಡಿದ ನಂತರ ಆರೋಪಿಗಳ ವಿಚಾರಣೆ ನಡೆಯಲಿದೆ.

"ಮಹಿಳೆಯ ಮೇಲೆ ಆರೋಪಿ ಲೈಂಗಿಕ ದೌರ್ಜನ್ಯ ನಡೆಸಿದ ಸಂದರ್ಭ ಚಿತ್ರೀಕರಿಸಿದ ತನ್ನ ನಗ್ನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಮಹಿಳೆಗೆ ಬ್ಲ್ಯಾಕ್ಮೇಲ್ ಮಾಡಿದ್ದಾರೆ. ಅನೇಕ ಬಾರಿ ಅತ್ಯಾಚಾರಕ್ಕೆ ಒಳಪಡಿಸಿದ್ದಾರೆ. ಬಳಿಕ ಮಹಿಳೆಗೆ ತಾನು ಸುಮಾರು ಎಂಟು ವಾರಗಳ ಗರ್ಭಿಣಿ ಎಂದು ತಿಳಿದು ಬಂದಿದೆ. ಇದನ್ನು ತಿಳಿದ ಆರೋಪಿಗಳು ಗರ್ಭಪಾತ ಮಾತ್ರೆಗಳನ್ನು ಸೇವಿಸುವಂತೆ ಒತ್ತಾಯಿಸಿದ್ದಾರೆ. ಸಂತ್ರಸ್ಥೆ ಮತ್ತೊಮ್ಮೆ ಗರ್ಭಿಣಿಯಾದ ಸಂದರ್ಭ ಸಂತ್ರಸ್ಥೆಯ ಇಚ್ಛೆಗೆ ವಿರುದ್ದವಾಗಿ 21 ವಾರಗಳ ಬಳಿಕ ಬಳಿಕ ವೈದ್ಯರ ಚಿಕಿತ್ಸಾಲಯದಲ್ಲಿ ಮಗುವನ್ನು ತೆಗಿಸಲಾಗಿದೆ," ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

First case under amended Freedom of Religion Act lodged in Gujarat, six detained

"ಮಟನ್ ಅಂಗಡಿ ಮಾಲೀಕರಾಗಿರುವ ವ್ಯಕ್ತಿ, ಮಹಿಳೆಯನ್ನು ಧಾರ್ಮಿಕ ಸ್ಥಳಕ್ಕೆ ಎಳೆದೊಯ್ದು, ನಿಕಾ ಸಮಾರಂಭದ ಮೂಲಕ ಆತನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾರೆ. ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಮಹಿಳೆಯ ಹೆಸರನ್ನು ಬದಲಾಯಿಸುವಂತೆಯೂ ಒತ್ತಾಯಿಸಿದ್ದಾರೆ," ಎಂದು ಪೊಲೀಸ್ ವಲಯ ಆಯುಕ್ತ, ಜಯರಾಜ್‌ಸಿನ್ಹ್ ವಾಲಾ ಶುಕ್ರವಾರ ಹೇಳಿದರು.

ಪರಿಶಿಷ್ಟ ಜಾತಿಗೆ ಸೇರಿದ ಸಂತ್ರಸ್ತೆ, ಇಸ್ಲಾಂ ಧರ್ಮವನ್ನು ಅನುಸರಿಸಲು ನಿರಾಕರಿಸಿದಾಗ ಆರೋಪಿ ಮತ್ತು ಆತನ ಕುಟುಂಬ ತನ್ನ ಮೇಲೆ ಜಾತಿನಿಂದನೆ ಮಾಡಿದೆ ಎಂದು ಕೂಡಾ ಆರೋಪಿಸಿದ್ದಾರೆ.

18 ವರ್ಷ ದಾಟಿದವರಿಗೆ ಧರ್ಮ ಆಯ್ಕೆಯ ಸ್ವಾತಂತ್ರ್ಯವಿದೆ: ಸುಪ್ರೀಂಕೋರ್ಟ್18 ವರ್ಷ ದಾಟಿದವರಿಗೆ ಧರ್ಮ ಆಯ್ಕೆಯ ಸ್ವಾತಂತ್ರ್ಯವಿದೆ: ಸುಪ್ರೀಂಕೋರ್ಟ್

"ಇತ್ತೀಚೆಗೆ, ಆ ಆರೋಪಿಯು ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಲು ನಿರ್ಧರಿಸಿದ್ದಾನೆ. ಬಳಿಕ ಈ ಮಹಿಳೆ ತನ್ನಿಂದ ದೂರವಾಗುವಂತೆ ಹಿಂಸಿಸಲು ಪ್ರಾರಂಭಿಸಿದ್ದಾನೆ," ಎಂದು ಮಹಿಳೆ ದೂರಿದ್ದಾರೆ. ಹಾಗೆಯೇ "ಮಹಿಳೆಗೆ ಮತಾಂತರವಾಗುವಂತೆ, ಇಲ್ಲದಿದ್ದರೆ ಕೊಲ್ಲುವುದಾಗಿ ಆರೋಪಿ ಪದೇ ಪದೇ ಬೆದರಿಕೆ ಹಾಕುತ್ತಿದ್ದಾನೆ," ಎಂದು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹೇಳಿದ್ದಾರೆ.

ಹೊಸ ಕಾನೂನು ಏನು ಹೇಳುತ್ತದೆ?

ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ) ಮಸೂದೆಯನ್ನು ಏಪ್ರಿಲ್ 1 ರಂದು ಗುಜರಾತ್ ಸಂಪುಟ ಬಹುಮತದ ಮತದಿಂದ ಅಂಗೀಕರಿಸಿದೆ. ಇದನ್ನು ಗುಜರಾತ್ ರಾಜ್ಯಪಾಲ ಆಚಾರ್ಯ ದೇವ್ರತ್‌ ಮೇ ತಿಂಗಳಲ್ಲಿ ಅಂಗೀಕರಿಸಿದ್ದಾರೆ. ಸರ್ಕಾರದ ಪ್ರಕಾರ, "ಧಾರ್ಮಿಕ ಮತಾಂತರದ ಉದ್ದೇಶಕ್ಕಾಗಿ ಮಹಿಳೆಯರನ್ನು ಮದುವೆಯ ಆಮಿಷಕ್ಕೆ ಒಳಪಡಿಸುವ ಪ್ರವೃತ್ತಿಯನ್ನು" ತಡೆಯಲು ಈ ಕಾನೂನು ಪ್ರಯತ್ನಿಸುತ್ತದೆ. ಹೊಸ ಕಾನೂನಿನ ಪ್ರಕಾರ, ಮದುವೆ ಉದ್ದೇಶದಿಂದ ಬಲವಂತವಾಗಿ ಮತಾಂತರಗೊಳಿಸುವುದು, ಅಥವಾ ಬಲವಂತವಾಗಿ ಮದುವೆಯಾಗುವುದು ಅಥವಾ ಒಬ್ಬ ವ್ಯಕ್ತಿಯನ್ನು ಲವಂತವಾಗಿ ಮದುವೆಯಾಗಲು ಸಹಾಯ ಮಾಡುವ ವ್ಯಕ್ತಿಗಳಿಗೆ ಮೂರರಿಂದ ಐದು ವರ್ಷ ಜೈಲು ಶಿಕ್ಷೆ ಮತ್ತು 2 ಲಕ್ಷ ರೂ.ಗಳವರೆಗೆ ದಂಡ ವಿಧಿಸಬೇಕು. ಒಂದು ವೇಳೆ ಸಂತ್ರಸ್ತೆ ಅಪ್ರಾಪ್ತೆಯಾಗಿದ್ದರೆ, ಮಹಿಳೆಯಾಗಿದ್ದರೆ, ದಲಿತ ಅಥವಾ ಬುಡಕಟ್ಟು ಜನಾಂಗದವರಾಗಿದ್ದರೆ, ಅಪರಾಧಿಗಳಿಗೆ ನಾಲ್ಕರಿಂದ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು 3 ಲಕ್ಷ ರೂ. ಯಷ್ಟು ದಂಡ ವಿಧಿಸಬಹುದಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
First case under amended Freedom of Religion Act lodged in Gujarat, six detained.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X