ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪಹರಣ: ಸ್ವಾಮಿ ನಿತ್ಯಾನಂದ ವಿರುದ್ಧ ಎಫ್‌ಐಆರ್, ಶಿಷ್ಯೆಯರ ಬಂಧನ

|
Google Oneindia Kannada News

ಅಹ್ಮದಾಬಾದ್, ನವೆಂಬರ್ 21: ಸ್ವಾಮಿ ನಿತ್ಯಾನಂದ ವಿರುದ್ಧ ಅಪಹರಣ ಮತ್ತು ಅಕ್ರಮ ಬಂಧನದ ದೂರಿನ ಅನ್ವಯ ಗುಜರಾತ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಅಪಹರಣದ ಜೊತೆಗೆ ಆಶ್ರಮವನ್ನು ನಡೆಸಲು ಚಂದಾ ವಸೂಲಿಗೆ ಮಕ್ಕಳನ್ನು ಬಳಸಿಕೊಂಡಿರುವ ಬಗ್ಗೆಯೂ ದೂರು ದಾಖಲಿಸಿಕೊಂಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾದ್ವಿ ಪ್ರಾಣಪ್ರಿಯಾನಂದ ಮತ್ತು ಪ್ರಿಯತತ್ವ ರಿಧಿ ಕಿರಣ್ ಎಂಬ ಇಬ್ಬರು ನಿತ್ಯಾನಂದ ಶಿಷ್ಯೆಯರನ್ನು ಪೊಲೀಸರು ಬಂಧಿಸಿದ್ದಾರೆ.

ಸ್ವಾಮಿ ನಿತ್ಯಾನಂದ ವಿರುದ್ಧ ಅಪಹರಣ, ಅಕ್ರಮ ಬಂಧನದ ದೂರುಸ್ವಾಮಿ ನಿತ್ಯಾನಂದ ವಿರುದ್ಧ ಅಪಹರಣ, ಅಕ್ರಮ ಬಂಧನದ ದೂರು

ಇತ್ತೀಚೆಗಷ್ಟು ನಾಲ್ಕು ಜನ ಹೆಣ್ಣು ಮಕ್ಕಳನ್ನು ನಿತ್ಯಾನಂದಗೆ ಸೇರಿದ್ದ ಫ್ಲಾಟ್ ಒಂದರಿಂದ ರಕ್ಷಿಸಲಾಗಿತ್ತು. ಅವರ ಹೇಳಿಕೆಯನ್ನೂ ಪಡೆದಿರುವ ಅಹ್ಮದಾಬಾದ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

FIR Against Self Acclaimed Godman Nityananda

ಬಂಧಿಸಲಾಗಿರುವ ಸಾದ್ವಿ ಪ್ರಾಣಪ್ರಿಯಾನಂದ ಮತ್ತು ಪ್ರಿಯತತ್ವ ರಿಧಿ ಕಿರಣ್ ಅವರುಗಳು ಅಹ್ಮದಾಬಾದ್‌ನಲ್ಲಿ 'ಯೋಗಿಣಿ ಸರ್ವಜ್ಞಪೀಠಂ' ಹೆಸರಿನಲ್ಲಿ ಆಶ್ರಮ ನಡೆಸುತ್ತಿದ್ದಾರೆ. ಇದು ನಿತ್ಯಾನಂದ ಅವರಿಗೆ ಸೇರಿದ್ದಾಗಿದೆ.

ಇತ್ತೀಚೆಗಷ್ಟೆ ಗುಜರಾತ್‌ ಜನಾರ್ದನ ಶರ್ಮಾ ದಂಪತಿ ತಮ್ಮ ನಾಲ್ವರು ಹೆಣ್ಣು ಮಕ್ಕಳನ್ನು ನಿತ್ಯಾನಂದ ಅಕ್ರಮ ಬಂಧನಲದಲ್ಲಿಟ್ಟಿರುವ ಬಗ್ಗೆ ಗುಜರಾತ್ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಇದೇ ದೂರಿನಲ್ಲಿ ಆಶ್ರಮದ ಇತರ ಅಪ್ರಾಪ್ತ ಬಾಲಕರಿಯರ ರಕ್ಷಣೆ ಕುರಿತು ಮನವಿ ಸಲ್ಲಿಸಲಾಗಿತ್ತು.

ರಾಮನಗರದಲ್ಲಿ ನಿತ್ಯಾನಂದನ ಜಾಮೀನು ಅರ್ಜಿ ವಜಾರಾಮನಗರದಲ್ಲಿ ನಿತ್ಯಾನಂದನ ಜಾಮೀನು ಅರ್ಜಿ ವಜಾ

ನಂತರ ಪೊಲೀಸರ ಸಹಾಯದೊಂದಿಗೆ ಜನಾರ್ದನ ಶರ್ಮಾ ದಂಪತಿಯ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ರಕ್ಷಿಸಲಾಗಿತ್ತು. ಆದರೆ ಇದೇ ದಂಪತಿಯ ಇಬ್ಬರು ಹಿರಿಯ ಪುತ್ರಿಯರು ಪೋಷಕರೊಂದಿಗೆ ತೆರಳಲು ನಿರಾಕರಿಸಿ ಆಶ್ರಮದಲ್ಲಿಯೇ ಇರುವುದಾಗಿ ಹೇಳಿದ್ದರು.

English summary
Gujrat police lodged FIR against self acclaimed godman Swamy Nityananda. Kidnap and wrongful confinement of children to make them collect donations complaints booked against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X