ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fake News: ಒಂದೊಂದು ಧರ್ಮದವರಿಗೆ ಒಂದೊಂದು ಐಸೋಲೇಟೆಡ್ ವಾರ್ಡ್!

|
Google Oneindia Kannada News

ಗಾಂಧಿನಗರ, ಏಪ್ರಿಲ್.15: ವಿಶ್ವವನ್ನು ವ್ಯಾಪಿಸಿರುವ ಕೊರೊನಾ ವೈರಸ್ ಕೂಪದಿಂದ ಭಾರತೀಯರನ್ನು ರಕ್ಷಿಸಲು ಕೇಂದ್ರ ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದೆ. ದೇಶದ ಪ್ರಮುಖ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ ಗಳ ವ್ಯವಸ್ಥೆ ಕಲ್ಪಿಸುವಂತೆ ಆದೇಶವನ್ನು ಹೊರಡಿಸಿದೆ ಆಗಿದೆ.

ಗುಜರಾತ್ ನ ಅಹ್ಮದಾಬಾದ್ ನಲ್ಲಿರುವ ಸಿವಿಲ್ ಆಸ್ಪತ್ರೆಯಲ್ಲಿ ಒಂದೊಂದು ಧರ್ಮದ ಜನರಿಗೆ ಒಂದೊಂದು ಐಸೋಲೇಟೆಡ್ ವಾರ್ಡ್ ಗಳನ್ನು ಮೀಸಲು ಇರಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಈ ಆರೋಪವನ್ನು ಗುಜರಾತ್ ಸರ್ಕಾರವು ತಳ್ಳಿ ಹಾಕಿದೆ.

ಲಾಕ್‌ಡೌನ್: ಖಾಸಗಿ ವಾಹನ ಸವಾರರಿಗೆ ಕೇಂದ್ರದ ಮಾರ್ಗಸೂಚಿಲಾಕ್‌ಡೌನ್: ಖಾಸಗಿ ವಾಹನ ಸವಾರರಿಗೆ ಕೇಂದ್ರದ ಮಾರ್ಗಸೂಚಿ

ಕೆಲವು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿಗಳನ್ನು ಹರಿ ಬಿಡಲಾಗುತ್ತಿದೆ. ಪ್ರಜೆಗಳು ಅದರ ಬಗ್ಗೆ ಕಿವಿಗೊಡದಂತೆ ಗುಜರಾತ್ ಸರ್ಕಾರವು ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಸ್ಪಷ್ಟನೆಯನ್ನು ನೀಡಿದೆ.

ಒಂದು ಧರ್ಮಕ್ಕೊಂದು ಪ್ರತ್ಯೇಕ ವಾರ್ಡ್ ಎಂಬುದು ನಿರಾಧಾರ

ಒಂದು ಧರ್ಮಕ್ಕೊಂದು ಪ್ರತ್ಯೇಕ ವಾರ್ಡ್ ಎಂಬುದು ನಿರಾಧಾರ

ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದು ವೈದ್ಯರ ಮುಖ್ಯ ಧ್ಯೇಯವಾಗಿದೆ. ಇದರ ನಡುವೆ ಧರ್ಮದ ಆಧಾರದಲ್ಲಿ ಐಸೋಲೇಟೆಡ್ ವಾರ್ಡ್ ಗಳನ್ನು ನಿರ್ಮಿಸಲಾಗಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಈ ಆರೋಪವು ನಿರಾಧಾರವಾಗಿದೆ ಎಂದು ಗುಜರಾತ್ ಸರ್ಕಾರವು ಟ್ವೀಟ್ ಮಾಡಿದೆ.

ಮೆಡಿಕಲ್ ಕಂಡೀಷನ್ ಮೇಲೆ ಪ್ರತೇಕ

ಮೆಡಿಕಲ್ ಕಂಡೀಷನ್ ಮೇಲೆ ಪ್ರತೇಕ

ವೈದ್ಯರ ಸಲಹೆ ಸೂಚನೆ ಮೇರೆಗೆ ಕೊರೊನಾ ವೈರಸ್ ಸೋಂಕಿತ ಲಕ್ಷಣ ಹಾಗೂ ವೈದ್ಯಕೀಯ ಸ್ಥಿತಿಗತಿಗಳನ್ನು ಗಮನದಲ್ಲಿ ಇಟ್ಟುಕೊಂಡು ರೋಗಿಗಳಿಗೆ ಪ್ರತ್ಯೇಕ ಐಸೋಲೇಟೆಡ್ ವಾರ್ಡ್ ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಯೇ ವಿನಃ ಯಾವುದೇ ಧರ್ಮದ ಆಧಾರದಲ್ಲಿ ಪ್ರತ್ಯೇಕ ವಾರ್ಡ್ ಗಳನ್ನು ನಿರ್ಮಿಸಿಲ್ಲ ಎಂದು ಸರ್ಕಾರವು ಸ್ಪಷ್ಟನೆ ನೀಡಿದೆ.

ಗುಜರಾತ್ ನಲ್ಲಿ 56 ಮಂದಿಗೆ ಕೊರೊನಾ ಸೋಂಕು

ಗುಜರಾತ್ ನಲ್ಲಿ 56 ಮಂದಿಗೆ ಕೊರೊನಾ ಸೋಂಕು

ಇನ್ನು, ಗುಜರಾತ್ ನಲ್ಲಿ 56 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿದ್ದು, ಸೋಂಕಿತರ ಸಂಖ್ಯೆಯು 695ಕ್ಕೆ ಏರಿಕೆಯಾಗಿದೆ. ಈ ಪೈಕಿ ಅಹ್ಮದಾಬಾದ್ ನಲ್ಲೇ 42 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಸೂರತ್ ನಲ್ಲಿ ಆರು, ವಡೋದರಾ ಮತ್ತು ಪಂಚಮಹಲ್ ನಲ್ಲಿ ತಲಾ ಮೂವರಿಗೆ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ಪತ್ತೆಯಾಗಿದೆ. ರಾಜ್ಯದಲ್ಲಿ ಬುಧವಾರ ಮೃತಪಟ್ಟ ಇಬ್ಬರು ಸೇರಿದಂತೆ ಇದುವರೆಗೂ 30 ಮಂದಿ ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದಾರೆ.

ಗುಜರಾತ್ ಮತ್ತೆರೆಡು ಜಿಲ್ಲೆಗಳಿಗೆ ಕೊರೊನಾ ಸೋಂಕು

ಗುಜರಾತ್ ಮತ್ತೆರೆಡು ಜಿಲ್ಲೆಗಳಿಗೆ ಕೊರೊನಾ ಸೋಂಕು

ಗುಜರಾತ್ ನಲ್ಲಿ 695 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದರೂ ಬೋತಡ್ ಮತ್ತು ಖೇಡಾ ಜಿಲ್ಲೆಗಳಲ್ಲಿ ಒಂದೇ ಒಂದು ಸೋಂಕಿತ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಆದರೆ ಬುಧವಾರ ಎರಡೂ ಜಿಲ್ಲೆಗಳಲ್ಲಿ ಒಂದೊಂದು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಅಹ್ಮದಾಬಾದ್ ನಲ್ಲಿ 404 ಹಾಗೂ ವಡೋದರಾದಲ್ಲಿ 116 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

English summary
Fake News: Separate Wards For Patients Of Different Religions In Ahmedabad Hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X