ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ನ ರಾಜ್‌ಕೋಟ್ ನಲ್ಲಿ ಮತ್ತೆ ಭೂಕಂಪ

|
Google Oneindia Kannada News

ಅಹಮದಾಬಾದ್, ಜೂನ್ 15: ಗುಜರಾತ್‌ನ ರಾಜ್‌ಕೋಟ್ ನಲ್ಲಿ ಮತ್ತೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆ ದಾಖಲಾಗಿದೆ.

Recommended Video

ಮರಣೋತ್ತರ ಪರೀಕ್ಷೆಯಿಂದ ಗೊತ್ತಾಯ್ತು ಸುಶಾಂತ್ ಸಾವಿನ ಹಿಂದಿನ ರಹಸ್ಯ. | Oneindia Kannada

ಕಳೆದ 24 ಗಂಟೆಗಳಲ್ಲಿ ಎರಡನೇ ಬಾರಿಗೆ ಭೂಕಂಪ ಸಂಭವಿಸಿದೆ. ಮಧ್ಯಾಹ್ನ 12.57ಕ್ಕೆ ಸಂಭವಿಸಿದೆ. ಯಾವುದೇ ಸಾವುನೋವುಗಳು ಸಂಭವಿಸಿರುವ ಕುರಿತು ವರದಿಯಾಗಿಲ್ಲ. ಕಚ್‌ನಿಂದ 15 ಕಿ.ಮೀ ದೂರದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ.

ರಾಜ್ ಕೋಟ್ ನ ಈಶಾನ್ಯ ಭಾಗದಲ್ಲಿ ಭೂಕಂಪದ ಅನುಭವರಾಜ್ ಕೋಟ್ ನ ಈಶಾನ್ಯ ಭಾಗದಲ್ಲಿ ಭೂಕಂಪದ ಅನುಭವ

ಕೊರೊನಾ ಸಂಕಷ್ಟ ಗುಜರಾತ್ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದರೆ ಮತ್ತೊಂದು ಕಡೆ, ಭಾನುವಾರ, ಸೋಮವಾರ ಎರಡೂ ದಿನವೂ ಭೂಕಂಪ ಸಂಭವಿಸಿದ್ದು, ಜನತೆಯಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.

Earthquake of 4.4 Magnitude Hits Gujarats Rajakot Second In 24 Hours

ಭಾನುವಾರ ಸಂಭವಿಸಿದ ಭೂಕಂದ ತೀವ್ರತೆ 5.5ರಷ್ಟು ದಾಖಲಾಗಿದೆ. ರಾಷ್ಟ್ರೀಯ ಭೂಕಂಪನ ಕೇಂದ್ರದ ಪ್ರಕಾರ ರಾತ್ರಿ 8.13ಕ್ಕೆ ರಾಜಕೋಟ್‌ನಿಂದ ವಾಯುವ್ಯದ ಉತ್ತರ ದಿಕ್ಕಿನ 122 ಕಿಮೀ ಅಂತರದಲ್ಲಿ ಕಂಪನ ಕೇಂದ್ರ ಬಿಂದು ದಾಖಲಾಗಿದೆ. ಕಚ್‌ ಜಿಲ್ಲೆಯ ಬಚಾವು ಪ್ರದೇಶದ ಬಳಿ ಭೂಕಂಪನ ಸಂಭವಿಸಿದೆ.

ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರು ರಾಜಕೋಟ್‌, ಕಚ್‌ ಹಾಗೂ ಪಠಾಣ್‌ ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಪರಿಸ್ಥಿತಿಯ ವರದಿ ಪಡೆದಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಗುಜರಾತ್‌ ಸಿಎಂ ಕಚೇರಿ, ಮುಖ್ಯಮಂತ್ರಿ ವಿಜಯ್‌ ರೂಪಾನಿ, ತಕ್ಷಣವೇ ರಾಜಕೋಟ್‌, ಕಚ್‌ ಮತ್ತು ಪಠಾಣ್‌ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆದಿದ್ದು, ಪರಿಸ್ಥಿತಿಯ ವರದಿ ಪಡೆದುಕೊಂಡಿದ್ದಾರೆ ಎಂದು ಹೇಳಿದೆ. ಇದುವರೆಗೂ ಯಾವುದೇ ಸಾವು-ನೋವಿನ ವರದಿಯಾಗಿಲ್ಲ ಎಂದು ಮಾಹಿತಿ ನೀಡಿದ್ದರು.

English summary
An earthquake of 4.4 magnitude on the Richter Scale hit Kutch in Gujarat on Monday afternoon. The earthquake hit Kutch at around 12:57 pm. This is the second earthquake to have hit Kutch in the past 24 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X