ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಗುಜರಾತ್‌ ಭೇಟಿ; ಸ್ಲಂ ಕಾಣದಂತೆ ಗೋಡೆ ನಿರ್ಮಾಣ

|
Google Oneindia Kannada News

Recommended Video

ಅಹಮದಾಬಾದ್ ನಲ್ಲಿ ಸ್ಲಂ ಗಳನ್ನೂ ಅಡಗಿಸಿದ ಮೋದಿ | Ahmedabad | Modi | Trump | Oneindia Kannada

ಅಹಮದಾಬಾದ್, ಫೆಬ್ರವರಿ 13: ಅಹಮದಾಬಾದ್ ನಗರಸಭೆ ಸ್ಲಂಗಳು ಕಾಣದಂತೆ ದೊಡ್ಡ ಗೋಡೆಯನ್ನು ನಿರ್ಮಾಣ ಮಾಡುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಬ್ರವರಿ 24 ಮತ್ತು 25ರಂದು ಭಾರತ ಪ್ರವಾಸ ಕೈಗೊಳ್ಳಲಿದ್ದು ಅಹಮದಾಬಾದ್‌ಗೂ ಭೇಟಿ ನೀಡಲಿದ್ದಾರೆ.

ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ-ಇಂದಿರಾ ಬ್ರಿಡ್ಜ್ ತನಕ ಸಾಗುವ ಮಾರ್ಗದಲ್ಲಿ ಗೋಡೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಮಾರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ರಂಪ್ ಬಂದಾಗ ರೋಡ್ ಶೋ ಮಾಡಲಿದ್ದಾರೆ.

ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸದ ದಿನಾಂಕ ನಿಗದಿಡೊನಾಲ್ಡ್ ಟ್ರಂಪ್ ಭಾರತ ಪ್ರವಾಸದ ದಿನಾಂಕ ನಿಗದಿ

ಸುಮಾರು ಅರ್ಧ ಕಿಲೋಮೀಟರ್ ಉದ್ದದ ಗೋಡೆ 6 ರಿಂದ 7 ಅಡಿ ಎತ್ತರವಿದೆ. ಗಾಂಧಿನಗರ ಮತ್ತು ಅಹಮದಾಬಾದ್ ನಡುವಿನ ಮಾರ್ಗವನ್ನು ಸುಂದರಗೊಳಿಸಲು ನಗರಸಭೆ ಹಲವಾರು ಕ್ರಮಗಳನ್ನು ಕೈಗೊಂಡಿದೆ.

ಸಂಚಾರಿ ನಿಯಮ ಉಲ್ಲಂಘನೆ ದಂಡ ಕಡಿತಗೊಳಿಸಿದ ಗುಜರಾತ್ಸಂಚಾರಿ ನಿಯಮ ಉಲ್ಲಂಘನೆ ದಂಡ ಕಡಿತಗೊಳಿಸಿದ ಗುಜರಾತ್

ಸುಮಾರು 500 ಮನೆಗಳಿರುವ ಈ ಸ್ಲಮ್‌ನಲ್ಲಿ 2,500 ಜನರು ದಶಕಗಳಿಂದ ವಾಸವಾಗಿದ್ದಾರೆ. ದೇವ ಸರನ್ ಸ್ಲಂ ಎಂದು ಇದಕ್ಕೆ ಕರೆಯಲಾಗುತ್ತದೆ. ಗೋಡೆ ಕಟ್ಟಿದ ಬಳಿಕ ಸ್ಲಂ ಇರುವ ಭಾಗದಲ್ಲಿ ಕರ್ಜೂರದ ಗಿಡಗಳನ್ನು ಬೆಳೆಸಲು ನಗರಸಭೆ ಮುಂದಾಗಿದೆ.

ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆ: ಪಾಕಿಸ್ತಾನಕ್ಕೆ ಟ್ರಂಪ್ ಭರವಸೆಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆ: ಪಾಕಿಸ್ತಾನಕ್ಕೆ ಟ್ರಂಪ್ ಭರವಸೆ

ಇದೇ ಮೊದಲಲ್ಲ

ಇದೇ ಮೊದಲಲ್ಲ

ಅಹಮದಾಬಾದ್ ನಗರಸಭೆ ಸ್ಲಂ ಕಾಣದಂತೆ ಗೋಡೆ ನಿರ್ಮಾಣ ಮಾಡುತ್ತಿರುವುದು ಇದೇ ಮೊದಲಲ್ಲ. 2017ರಲ್ಲಿ ಜಪಾನ್ ಪ್ರಧಾನಿ ಎರಡು ದಿನಗಳ ಕಾಲ ಗುಜರಾತ್‌ಗೆ ಭೇಟಿ ಕೊಟ್ಟಾಗ ಮತ್ತು ವೈಬ್ರೆಂಟ್ ಗುಜರಾತ್ ಸಮ್ಮೇಳನ ನಡೆದಾಗಲೂ ನಗರಸಭೆ ಸ್ಲಂ ಕಾಣದಂತೆ ತಾತ್ಕಾಲಿಕ ಗೋಡೆಗಳನ್ನು ನಿರ್ಮಾಣ ಮಾಡಿತ್ತು.

ಮೋದಿ, ಟ್ರಂಪ್ ರೋಡ್ ಶೋ

ಮೋದಿ, ಟ್ರಂಪ್ ರೋಡ್ ಶೋ

ಡೊನಾಲ್ಡ್ ಟ್ರಂಪ್ ಆಗಮಿಸಿದಾಗ ವಿಮಾನ ನಿಲ್ದಾಣದಿಂದ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮೈದಾನದ ತನಕ ರೋಡ್ ಶೋ ನಡೆಯಲಿದೆ. ಆದ್ದರಿಂದ, ರಸ್ತೆಗಳನ್ನು ಸುಂದರವಾಗಿ ಮಾಡಲಾಗುತ್ತಿದೆ. ಸುಮಾರು 25 ಸಾವಿರ ವಿದ್ಯಾರ್ಥಿಗಳು, 1 ಸಾವಿರ ಶಿಕ್ಷಕರು ರೋಡ್ ಶೋನದಲ್ಲಿ ಪಾಲ್ಗೊಳ್ಳಲಿದ್ದಾರೆ.

16 ಸಮಿತಿಗಳ ರಚನೆ

16 ಸಮಿತಿಗಳ ರಚನೆ

ಅಹಮದಾಬಾದ್ ನಗರಸಭೆ ಡೊನಾಲ್ಡ್ ಟ್ರಂಪ್ ಭೇಟಿಯ ಸಿದ್ಧತೆಗಳನ್ನು ಮಾಡಲು 16 ಸಮಿತಿಗಳನ್ನು ರಚನೆ ಮಾಡಿದೆ. ಕೌನ್ಸಿಲರ್‌ಗಳು ಸಮಿತಿಯ ಅಧ್ಯಕ್ಷರಾಗಿದ್ದಾರೆ. ಗುಜರಾತ್‌ಗೆ ಆಗಮಿಸುವ ಡೋನಾಲ್ಡ್ ಟ್ರಂಪ್ ಅಹಮದಾಬಾದ್‌ನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

ಟ್ರಂಪ್ ಮೊದಲ ಭೇಟಿ

ಟ್ರಂಪ್ ಮೊದಲ ಭೇಟಿ

ಡೊನಾಲ್ಡ್ ಟ್ರಂಪ್ ಫೆಬ್ರವರಿ 24 ಮತ್ತು 25ರಂದು ಪತ್ನಿ ಮಲೆನಿಯಾ ಜೊತೆ ಭಾರತ ಪ್ರವಾಸ ಕೈಗೊಂಡಿದ್ದಾರೆ. ಅಮೆರಿಕ ಅಧ್ಯಕ್ಷರಾದ ಬಳಿಕ ಇದು ಅವರ ಮೊದಲ ಭಾರತ ಭೇಟಿಯಾಗಿದೆ. ನವದೆಹಲಿ ಮತ್ತು ಗುಜರಾತ್‌ನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.

English summary
Ahmedabad Municipal Corporation building a wall in Sardar Vallabhbhai Patel International Airport to Indira Bridge road to mask the slum area ahead of Donald Trump visit to Ahmedabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X