• search
  • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋವಿಡ್‌ ಸೋಂಕಿನಿಂದ ವೈದ್ಯರ ಸಾವು; ಗುಜರಾತ್‌ಗೆ 3ನೇ ಸ್ಥಾನ

|

ಅಹಮದಾಬಾದ್, ಸೆಪ್ಟೆಂಬರ್ 20: ಭಾರತದಲ್ಲಿ ಕೋವಿಡ್‌ನಿಂದ ವೈದ್ಯರು ಮೃತಪಟ್ಟ ಅಂಕಿ ಅಂಶಗಳನ್ನು ಐಎಂಎ ಬಿಡುಗಡೆ ಮಾಡಿದೆ. ಗುಜರಾತ್‌ನಲ್ಲಿ 38 ವೈದ್ಯರು ಮೃತಪಟ್ಟಿದ್ದು, ದೇಶದಲ್ಲಿಯೇ ರಾಜ್ಯ 3ನೇ ಸ್ಥಾನದಲ್ಲಿದೆ.

ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ಮೊದಲ ಎರಡು ಸ್ಥಾನದಲ್ಲಿವೆ. ಕೋವಿಡ್ ಸಾವಿನ ಪ್ರಕರಣಗಳಲ್ಲಿ ಗುಜರಾತ್ 8ನೇ ಸ್ಥಾನದಲ್ಲಿದೆ. ಇದುವರೆಗೂ ರಾಜ್ಯದಲ್ಲಿ 3286 ಜನರು ಮೃತಪಟ್ಟಿದ್ದಾರೆ.

ಆಟೋ ಚಾಲಕರಾಗಿದ್ದ ವೈದ್ಯ ಕೊಪ್ಪಳಕ್ಕೆ ವರ್ಗಾವಣೆ

ಐಎಂಎ ದೇಶದಲ್ಲಿ ಕೋವಿಡ್‌ನಿಂದ ಮೃತಪಟ್ಟ ವೈದ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದುವರೆಗೂ 382 ವೈದ್ಯರು ಮೃತಪಟ್ಟಿದ್ದಾರೆ. ಗುಜರಾತ್ ರಾಜ್ಯದಲ್ಲಿ ಇದುವರೆಗೂ 38 ವೈದ್ಯರು ಮೃತಪಟ್ಟಿದ್ದಾರೆ.

ಕೊರೊನಾಗೆ ಬಲಿಯಾದ 382 ವೈದ್ಯರ ತ್ಯಾಗ ಕಡೆಗಣಿಸಿದ ಸರ್ಕಾರ: ಐಎಂಎ ಆರೋಪ

ಗುಜರಾತ್‌ನಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 1,21,930. ಸಕ್ರಿಯ ಪ್ರಕರಣಗಳು 15,956. ರಾಜಧಾನಿ ಅಹಮದಾಬಾದ್‌ನಲ್ಲಿಯೇ 34,759 ಸೋಂಕಿತರಿದ್ದಾರೆ.

ಕೊವಿಡ್ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲು ಆಂಬ್ಯುಲೆನ್ಸ್ ಚಾಲಕನಾದ ವೈದ್ಯ

ಯಾವ ಜಿಲ್ಲೆಯಲ್ಲಿ ಎಷ್ಟು?

ಯಾವ ಜಿಲ್ಲೆಯಲ್ಲಿ ಎಷ್ಟು?

ಗುಜರಾತ್‌ನ ವಾಲ್ಸದ್ ಜಿಲ್ಲೆಯಲ್ಲಿ 34 ವರ್ಷದ ವೈದ್ಯರು ಸೋಂಕಿಗೆ ಬಲಿಯಾಗಿದ್ದಾರೆ. ರಾಜಧಾನಿ ಅಹಮದಾಬಾದ್‌ನಲ್ಲಿಯೇ 15 ವೈದ್ಯರು ಮೃತಪಟ್ಟಿದ್ದಾರೆ. ಸೂರತ್‌ನಲ್ಲಿ 5 ಜನರು ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ 34 ರಿಂದ 82 ವರ್ಷ ವಯಸ್ಸಿನವರು ಹೆಚ್ಚು.

ಖಾಸಗಿ ವೈದ್ಯರು ಇದ್ದಾರೆ

ಖಾಸಗಿ ವೈದ್ಯರು ಇದ್ದಾರೆ

ಮೃತಪಟ್ಟವರಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ವೈದ್ಯರು ಸೇರಿದ್ದಾರೆ. ಸರ್ಕಾರಿ ವೈದ್ಯಾಧಿಕಾರಿಯಾಗಿದ್ದ 49 ವರ್ಷದ ವೈದ್ಯರು ಜೂನ್ 22ರಂದು ಮೃತಪಟ್ಟರು. ಅವರ ತಾಯಿ ಕೋವಿಡ್‌ ಸೋಂಕಿನಿಂದಾಗಿ ಒಂದು ವಾರದ ಹಿಂದೆ ಮೃತಪಟ್ಟಿದ್ದರು. 20 ವರ್ಷದಿಂದ ಅಮರೇಲಿ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಡಾ. ಪಂಕಜ್ ಜಾಧವ್ ಸಹ ಸೋಂಕಿಗೆ ಬಲಿಯಾಗಿದ್ದಾರೆ.

ಮಕ್ಕಳ ವೈದ್ಯರ ಸಾವು

ಮಕ್ಕಳ ವೈದ್ಯರ ಸಾವು

ಮೊದಲು ಸಾಮಾನ್ಯ ವೈದ್ಯರಿಗೆ ಜನರಿಂದ ಕೋವಿಡ್ ಸೋಂಕು ತಗುಲಿತ್ತು. ಬಳಿಕ ರೋಗ ಲಕ್ಷಣಗಳು ಇಲ್ಲದ ಮಕ್ಕಳಿಂದ ಶಿಶು ವೈದ್ಯರಿಗೂ ಸಹ ಸೋಂಕು ತಗುಲಿತು. ರಾಜ್ಯದಲ್ಲಿ ಶಿಶು ವೈದ್ಯರು ಸಹ ಕೋವಿಡ್ ಸೋಂಕಿನಿಂದಾಗ ಪ್ರಾಣ ಬಿಟ್ಟಿದ್ದಾರೆ.

ವೈದ್ಯರ ಕೆಲಸದ ಅವಧಿ

ವೈದ್ಯರ ಕೆಲಸದ ಅವಧಿ

ವೈದ್ಯರ ಕೆಲಸದ ಅವಧಿ ಸಹ ಅವರಿಗೆ ಕೋವಿಡ್ ಸೋಂಕು ಹರಡಲು ಪ್ರಮುಖ ಕಾರಣ. ಮೊದಲು 4 ಗಂಟೆ ಕೋವಿಡ್ ಸೋಂಕಿತರು ಹೆಚ್ಚಿರುವ ಪ್ರದೇಶ, ಉಳಿದ 4 ಗಂಟೆ ಕಡಿಮೆ ಸೋಂಕಿತರು ಇರುವ ಪ್ರದೇಶದಲ್ಲಿ ವೈದ್ಯರು ಕಾರ್ಯ ನಿರ್ವಹಣೆ ಮಾಡಿದ್ದಾರೆ.

English summary
According to Indian Medical Association's (IMA) list of Covid martyrs Gujarat in Third place. 38 doctors died due to COVID 19 Infection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X