ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಹರಪ್ಪ ಯುಗದ "ಧೋಲಾವಿರಾ ನಗರ"

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ಅಹಮದಾಬಾದ್, ಜುಲೈ 27: ಹರಪ್ಪ ನಾಗರೀಕತೆ ಯುಗದ ಧೋಲಾವಿರಾ ನಗರವು ಇದೀಗ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಯಾಗಿದೆ.

ಗುಜರಾತ್‌ನ ರಾಣ್ ಜಿಲ್ಲೆಯ ಕಚ್ ಎಂಬಲ್ಲಿ ಧೋಲಾವಿರಾ ನಗರವಿದ್ದು, ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘಟನೆ (ಯುನೆಸ್ಕೊ) ಈ ತಾಣವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿರುವುದಾಗಿ ಮಂಗಳವಾರ ಘೋಷಿಸಿದೆ.

ಯುನೆಸ್ಕೋ ಪಟ್ಟಿ ಸೇರಿದ ಕಾಕತೀಯ ರಾಮಪ್ಪ ದೇಗುಲ ನೋಡಿ ಯುನೆಸ್ಕೋ ಪಟ್ಟಿ ಸೇರಿದ ಕಾಕತೀಯ ರಾಮಪ್ಪ ದೇಗುಲ ನೋಡಿ

"ಹರಪ್ಪ ಯುಗದ ನಗರ ಧೋಲಾವಿರಾವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿದೆ. ಅಭಿನಂದನೆಗಳು" ಎಂದು ಯುನೆಸ್ಕೋ ಟ್ವೀಟ್ ಮಾಡಿದೆ.

Dholavira: Harappan City Just Inscribed On UNESCO World Heritage List

"ಧೋಲಾವಿರಾ ಇದೀಗ ಭಾರತಕ್ಕೆ ದೊರೆತ ನಲವತ್ತನೇ ನಿಧಿಯಂತಾಗಿದೆ" ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ ಟ್ವೀಟ್ ಮಾಡಿದ್ದಾರೆ. "ಭಾರತಕ್ಕೆ ಇಂದು ಹೆಮ್ಮೆಯ ದಿನ. ಅದರಲ್ಲೂ ಗುಜರಾತ್ ಜನರಿಗೆ ಅತಿ ಸಂತಸದ ದಿನ. ಧೋಲಾವಿರಾ ನಗರವನ್ನು ವಿಶ್ವಪಾರಂಪರಿಕ ತಾಣದಲ್ಲಿ ಸೇರಿಸಿರುವುದು ಭಾರತಕ್ಕೆ ಹೆಮ್ಮೆಯ ಸಂಗತಿ. 2014ರಿಂದ ಭಾರತದ ಹತ್ತು ಹೊಸ ತಾಣಗಳು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಕೊಂಡಿವೆ. ಇದು ಪ್ರಧಾನಿ ಮೋದಿಯವರು ಭಾರತದ ಸಂಸ್ಕೃತಿ, ಪರಂಪರೆ, ಭಾರತೀಯ ಜನರ ಜೀವನವನ್ನು ಪ್ರಚುರಪಡಿಸುವ ಶ್ರಮ, ಬದ್ಧತೆಗೆ ಸಾಕ್ಷಿಯಾಗಿವೆ" ಎಂದು ಹೇಳಿದ್ದಾರೆ.

ಈ ಕುರಿತು ಪ್ರಧಾನಿ ಮೋದಿ ಕೂಡ ಟ್ವೀಟ್ ಮಾಡಿದ್ದು, "ಧೋಲಾವಿರಾ ಪ್ರಮುಖ ನಗರ ಕೇಂದ್ರವಾಗಿದ್ದು, ನಮ್ಮ ಇತಿಹಾಸದೊಂದಿಗಿನ ಅತಿಮುಖ್ಯ ಕೊಂಡಿಯಾಗಿದೆ. ಇದು ನೋಡಲೇಬೇಕಾದ ತಾಣವಾಗಿದೆ. ಅದರಲ್ಲೂ ಇತಿಹಾಸ, ಸಂಸ್ಕೃತಿ, ಪುರಾತತ್ವದಲ್ಲಿ ಆಸಕ್ತಿ ಇರುವವರು ಭೇಟಿ ಕೊಡಲೇಬೇಕಾದ ತಾಣವಿದು" ಎಂದು ಹೊಗಳಿದ್ದಾರೆ.

ಈಚೆಗಷ್ಟೆ ತೆಲಂಗಾಣದ ವಾರಂಗಲ್ ಜಿಲ್ಲೆಯ ಪಾಲಂಪೇಟ್ ಗ್ರಾಮದಲ್ಲಿನ ರಾಮಪ್ಪ ದೇವಸ್ಥಾನಕ್ಕೆ ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಗೌರವ ನೀಡಲಾಗಿತ್ತು.

ದಕ್ಷಿಣ ಏಷ್ಯಾದಲ್ಲಿ ಸಂರಕ್ಷಿಸಿಕೊಂಡು ಬರಲಾದ ಅತಿ ಪುರಾತನ ನಗರ ವಸಾಹತು ಪ್ರದೇಶಗಳಲ್ಲಿ ಧೋಲಾವಿರಾ ಕೂಡ ಒಂದಾಗಿದೆ. ಸುಮಾರು 1500 ವರ್ಷಗಳ ಇತಿಹಾಸದೊಂದಿಗೆ ನಗರ ಯೋಜನೆ, ತಾಂತ್ರಿಕತೆ, ವ್ಯಾಪಾರ ವಹಿವಾಟು, ಉತ್ಪಾದನೆ, ಕಲೆ, ಸಾಮಾಜಿಕ ಆಡಳಿತದಲ್ಲಿ ನಾಗರೀಕತೆಯನ್ನು ಪ್ರತಿನಿಧಿಸುವ ನಗರವಾಗಿಯೂ ಧೋಲಾವಿರಾ ಗುರುತಿಸಿಕೊಂಡಿದೆ. ಹರಪ್ಪ ನಾಗರೀಕತೆ, ಸಂಸ್ಕೃತಿಯನ್ನು ಪ್ರತಿನಿಧಿಸುವಂತಿರುವ ಧೋಲಾವಿರಾಗೆ ಇದೀಗ ವಿಶ್ವಪಾರಂಪರಿಕ ತಾಣ ಮನ್ನಣೆ ಗಳಿಸಿಕೊಂಡಿದೆ.

English summary
The Harappan era city of Dholavira in Gujarat has been added on Unesco's World Heritage List on tuesday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X