ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ಯಾಚಾರಿಯನ್ನು ರಕ್ಷಿಸುವುದಕ್ಕೆ 35 ಲಕ್ಷ ಲಂಚ ಕೇಳುವುದೇ ಪಿಎಸ್ಐ?

|
Google Oneindia Kannada News

ಗುಜರಾತ್, ಜುಲೈ.05: ಅತ್ಯಾಚಾರಿಗಳ ವಿರುದ್ಧ ಶಿಸ್ತುಕ್ರಮಗಳನ್ನು ತೆಗೆದುಕೊಳ್ಳುವುದಕ್ಕಾಗಿ ಕೇಂದ್ರ ಸರ್ಕಾರವು ಕಾಯ್ದೆಗಳ ಮೇಲೆ ಕಾಯ್ದೆಗಳನ್ನು ತಿದ್ದುಪಡಿಗೊಳಿಸುತ್ತಿದೆ. ಕೀಚಕರ ವಿರುದ್ಧ ಕಠಿಣ ಶಿಕ್ಷೆ ವಿಧಿಸುವುದೇ ಮುಖ್ಯ ಎಂದು ಇಡೀ ದೇಶವೇ ಕೂಗಿ ಕೂಗಿ ಹೇಳುತ್ತಿದೆ.

ಭಾರತದಲ್ಲಿ ಅತ್ಯಾಚಾರಿಗಳನ್ನು ನೇಣಿಗೇರಿಸಬೇಕು ಎನ್ನುವಂತಾ ಕೂಗು ಮೊಳಗುತ್ತಿರುವುದರ ಮಧ್ಯೆ ಪೊಲೀಸರೆಲ್ಲ ತಲೆ ತಗ್ಗಿಸುವಂತೆ ಕೆಲವನ್ನು ಮಹಿಳಾ ಪೊಲೀಸ್ ಒಬ್ಬರು ಮಾಡಿದ್ದಾರೆ. ಅಹ್ಮದಾಬಾದ್ ನಲ್ಲಿ ಅತ್ಯಾಚಾರ ನಡೆಸಿದ ಆರೋಪಿಯನ್ನು ರಕ್ಷಿಸಲು 35 ಲಕ್ಷಕ್ಕಾಗಿ ಮಹಿಳಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರು ಬೇಡಿಕೆಯಿಟ್ಟಿದ್ದು ಬೆಳಕಿಗೆ ಬಂದಿದೆ.

ಸರಣಿ ಅತ್ಯಾಚಾರಿ, ಹಂತಕ ಸೈನೆಡ್ ಮೋಹನ್ ಕ್ರೈಂ ಕಥಾನಕಸರಣಿ ಅತ್ಯಾಚಾರಿ, ಹಂತಕ ಸೈನೆಡ್ ಮೋಹನ್ ಕ್ರೈಂ ಕಥಾನಕ

ಸಮಾಜ ವಿರೋಧಿ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿ ಕ್ರಮ ತೆಗೆದುಕೊಳ್ಳದಿರಲು 35 ಲಕ್ಷ ರೂಪಾಯಿ ಲಂಚ ನೀಡುವಂತೆ ಬೇಡಿಕೆಯಿಟ್ಟ ಮಹಿಳಾ ಪಿಎಸ್ಐಯನ್ನು ಇದೀಗ ಬಂಧಿಸಲಾಗಿದೆ. ಅಹ್ಮದಾಬಾದ್ ಪಶ್ಚಿಮ ಮಹಿಳಾ ಪೊಲೀಸ್ ಠಾಣೆಯ ಉಸ್ತುವಾರಿ ವಹಿಸಿದ್ದ ಪಿಎಸ್ಐ ಶ್ವೇತಾ ಜಡೇಜಾ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.

ಮ್ಯಾನೇಜರ್ ವಿರುದ್ಧ ದೂರು ನೀಡಿದ್ದ ಇಬ್ಬರು ಮಹಿಳಾ ಸಿಬ್ಬಂದಿ

ಮ್ಯಾನೇಜರ್ ವಿರುದ್ಧ ದೂರು ನೀಡಿದ್ದ ಇಬ್ಬರು ಮಹಿಳಾ ಸಿಬ್ಬಂದಿ

2019ರಲ್ಲೇ ಅಹ್ಮದಾಬಾದ್ ನಲ್ಲಿರುವ ಖಾಸಗಿ ಕಂಪನಿಯ ಮ್ಯಾನೇಜರ್ ಆಗಿದ್ದ ಕೇನಾಲ್ ಶಾ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ನೀಡಲಾಗಿತ್ತು. ಕಂಪನಿಯ ಇಬ್ಬರು ಮಹಿಳಾ ಸಿಬ್ಬಂದಿಯು ಮ್ಯಾನೇಜರ್ ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದರು.

35 ಲಕ್ಷ ರೂಪಾಯಿ ಲಂಚಕ್ಕಾಗಿ ಪಿಎಸ್ಐ ಬೇಡಿಕೆ

35 ಲಕ್ಷ ರೂಪಾಯಿ ಲಂಚಕ್ಕಾಗಿ ಪಿಎಸ್ಐ ಬೇಡಿಕೆ

ಖಾಸಗಿ ಕಂಪನಿಯ ಮಹಿಳಾ ಸಿಬ್ಬಂದಿ ನೀಡಿದ ದೂರು ದಾಖಲಿಸಿಕೊಂಡ ಪಿಎಸ್ಐ ಶ್ವೇತಾ ಜಡೇಜಾ, ಆರೋಪಿಯಿಂದಲೇ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗುತ್ತಿದೆ. ಸಮಾಜ ವಿರೋಧಿ ಚಟುವಟಿಕೆಗಳ ತಡೆ(PASA) ಕಾಯ್ದೆ ಅಡಿಯಲ್ಲಿ ಕ್ರಮ ತೆಗೆದುಕೊಳ್ಳದಿರಲು 35 ಲಕ್ಷ ರೂಪಾಯಿ ನೀಡಬೇಕು ಎಂದು ಆರೋಪಿ ಕನೇಲ್ ಶಾ ಸಹೋದರ ಭವೇಶ್ ಬಳಿ ಬೇಡಿಕೆಯಿಟ್ಟಿದ್ದರು.

20 ಲಕ್ಷ ಪಡೆದ ಪಿಎಸ್ಐನಿಂದ ಬಾಕಿ 15 ಲಕ್ಷಕ್ಕಾಗಿ ಬೇಡಿಕೆ

20 ಲಕ್ಷ ಪಡೆದ ಪಿಎಸ್ಐನಿಂದ ಬಾಕಿ 15 ಲಕ್ಷಕ್ಕಾಗಿ ಬೇಡಿಕೆ

ಆರೋಪಿ ಕೇನಾಲ್ ಶಾ ಸಹೋದರ ಭವೇಶ್ ರಿಂದ ಪಿಎಸ್ಐ ಶ್ವೇತಾ ಜಡೇಜಾ 20 ಲಕ್ಷ ರೂಪಾಯಿ ಪಡೆದುಕೊಂಡಿದ್ದರು ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಫೆಬ್ರವರಿ ತಿಂಗಳಿನಲ್ಲಿ ಮಧ್ಯವರ್ತಿಯಿಂದ 20 ಲಕ್ಷ ರೂಪಾಯಿ ಪಡೆದ ಮಹಿಳಾ ಪಿಎಸ್ಐ ಬಾಕಿ ಉಳಿದ 15 ಲಕ್ಷಕ್ಕಾಗಿ ದುಂಬಾಲು ಬಿದ್ದಿದ್ದರು ಎಂದು ಎಫ್ಐಆರ್ ನಲ್ಲಿ ಹೇಳಲಾಗಿದೆ.

ಮಹಿಳಾ ಪಿಎಸ್ಐಯನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ ಕೋರ್ಟ್

ಮಹಿಳಾ ಪಿಎಸ್ಐಯನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ ಕೋರ್ಟ್

ಕಳೆದ ಶುಕ್ರವಾರ ಪಿಎಸ್ಐ ಶ್ತೇತಾ ಜಡೇಜಾರನ್ನು ಬಂಧಿಸಿದ ಪೊಲೀಸರು ಶನಿವಾರ ಕೋರ್ಟ್ ಗೆ ಹಾಜರುಪಡಿಸಿದ್ದರು. ಹೆಚ್ಚಿನ ವಿಚಾರಣೆಗಾಗಿ ಆರೋಪಿ ಸ್ಥಾನದಲ್ಲಿರುವ ಶ್ವೇತಾ ಜಡೇಜಾರನ್ನು ಏಳು ದಿನಗಳ ಕಾಲ ವಶಕ್ಕೆ ನೀಡುವಂತೆ ಮನವಿ ಸಲ್ಲಿಸಲಾಗಿತ್ತು. ಪೊಲೀಸರ ಮನವಿಗೆ ಸಮ್ಮತಿಸಿದ ಕೋರ್ಟ್ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ 3 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ.

English summary
Demanding Rs.35 Lakh Bribe From Rape Accused; Women PSI Arrested In Ahmadabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X