ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೇಟಿಂಗ್‌ಗಾಗಿ ಕಾಫಿ ಶಾಪ್: ಇದು ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆ!

|
Google Oneindia Kannada News

ಅಹಮದಾಬಾದ್, ಫೆಬ್ರವರಿ 19: ಗುಜರಾತ್‌ನಲ್ಲಿ ಕೆಲವೇ ದಿನಗಳಲ್ಲಿ ನಡೆಯಲಿರುವ ಪಾಲಿಕೆ ಚುನಾವಣೆಗೆ ಪ್ರಚಾರ ಕಾರ್ಯ ಭರ್ಜರಿಯಾಗಿ ಸಾಗಿದೆ. ಪಕ್ಷಗಳು ಜನರಿಗೆ ಭರವಸೆಗಳ ಮಹಾಪೂರವನ್ನೇ ಹರಿಸಿವೆ. ಆದರೆ ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯಲ್ಲಿನ ಘೋಷಣೆಯೊಂದು ಗುಜರಾತ್‌ನ ವಡೋದರಾದಲ್ಲಿ ವಿವಾದ ಹುಟ್ಟುಹಾಕಿದೆ.

ಯುವಜನರಿಗೆಂದು ಡೇಟಿಂಗ್‌ಗಾಗಿ ಕಾಫಿ ಶಾಪ್‌ಗಳ ನಿರ್ಮಾಣ ಮಾಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದು, ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಭಾರತೀಯ ಸಂಸ್ಕೃತಿಯನ್ನು ಕಾಂಗ್ರೆಸ್ ಅರ್ಥಮಾಡಿಕೊಂಡಿಲ್ಲ ಎಂದು ಆರೋಪಿಸಿದೆ. ಮುಂದೆ ಓದಿ...

"ಕಾಂಗ್ರೆಸ್ ಭಾರತೀಯ ಮೌಲ್ಯಗಳನ್ನು ಅರ್ಥ ಮಾಡಿಕೊಂಡಿಲ್ಲ"

"ಕಾಂಗ್ರೆಸ್ ಎಂದಿಗೂ ಭಾರತೀಯ ಮೌಲ್ಯಗಳೊಂದಿಗೆ ಒಂದಾಗಿಲ್ಲ. ಇದಕ್ಕೆ ಪ್ರಣಾಳಿಕೆಯಲ್ಲಿನ ಈ ಘೋಷಣೆಯೇ ಸಾಕ್ಷಿ. ಡೇಟಿಂಗ್ ತಾಣ ನಿರ್ಮಿಸುವ ಕಾಂಗ್ರೆಸ್ ಘೋಷಣೆ ಲವ್ ಜಿಹಾದ್ ಪ್ರಚಾರ ಮಾಡುವಂತಿದೆ" ಎಂದು ವಡೋದರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಬಿಹಾರ ಚುನಾವಣೆ ಪ್ರಣಾಳಿಕೆ: 10 ಲಕ್ಷ ಉದ್ಯೋಗದ ಭರವಸೆ ನೀಡಿದ ಆರ್‌ಜೆಡಿಬಿಹಾರ ಚುನಾವಣೆ ಪ್ರಣಾಳಿಕೆ: 10 ಲಕ್ಷ ಉದ್ಯೋಗದ ಭರವಸೆ ನೀಡಿದ ಆರ್‌ಜೆಡಿ

"ಇಲ್ಲಿ ಡೇಟಿಂಗ್ ಅವಶ್ಯಕತೆ ಇದೆಯೇ?"

"ಕಾಂಗ್ರೆಸ್ ಎಂದಿಗೂ ಭಾರತೀಯ ಸಂಸ್ಕೃತಿಯನ್ನು ತನ್ನದು ಎಂದು ಒಪ್ಪಿಕೊಂಡಿಲ್ಲ. ಡೇಟಿಂಗ್ ಎನ್ನುವುದು ಪಾಶ್ಚಾತ್ಯ ಸಂಸ್ಕೃತಿ. ಪಾಶ್ಚಿಮಾತ್ಯ ದೇಶಗಳಲ್ಲಿ ಬಹುಪಾಲು ಮಂದಿ ಕುಟುಂಬದೊಂದಿಗೆ ಬದುಕದ ಕಾರಣ ಡೇಟ್ ಮಾಡುವುದು ಅವಶ್ಯಕವಿದೆ. ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಅವರು ಡೇಟಿಂಗ್ ಮಾಡುತ್ತಾರೆ. ಭಾರತದಲ್ಲಿ, ಅದರಲ್ಲೂ ಗುಜರಾತ್‌ನಲ್ಲಿ ಹೆಚ್ಚು ಮಂದಿ ಅವಿಭಕ್ತ ಕುಟುಂಬದಲ್ಲಿರುವವರು. ಇಲ್ಲಿ ಡೇಟಿಂಗ್ ಅವಶ್ಯಕತೆಯೇ ಇಲ್ಲ" ಎಂದಿದ್ದಾರೆ.

"ಕಾಂಗ್ರೆಸ್ ಪ್ರಣಾಳಿಕೆ ಯುವಜನರ ದಾರಿ ತಪ್ಪಿಸುತ್ತಿದೆ"

ಡೇಟಿಂಗ್ ಎನ್ನುವುದು ದೈಹಿಕ ಆಕರ್ಷಣೆ. ಡೇಟಿಂಗ್ ‌ನಲ್ಲಿ ಭಾವನಾತ್ಮಕ ಆಕರ್ಷಣೆ ಎನ್ನುವುದು ಇಲ್ಲ ಎಂದು ಬಿಜೆಪಿ ಮುಖಂಡ ಹೇಳಿದ್ದು, ಕಾಂಗ್ರೆಸ್‌ನ ಈ ಪ್ರಣಾಳಿಕೆ ಯುವಜನತೆಯ ದಾರಿ ತಪ್ಪಿಸುವಂತಿದೆ ಎಂದು ದೂರಿದ್ದಾರೆ. ಹಿಂದೂ ಯುವತಿಯರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿರುವ ಸಮುದಾಯವೇ ಇದೆ. ಈ ಡೇಟಿಂಗ್ ಲವ್ ಜಿಹಾದ್ ಅನ್ನು ಪ್ರೇರೇಪಿಸುತ್ತದೆ. ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನನ್ನು ತರುತ್ತೇವೆ ಎಂದು ಹೇಳಿದ್ದಾರೆ.

GHMC: ಬಿಜೆಪಿ ಪ್ರಣಾಳಿಕೆಯಲ್ಲಿ ಕೊರೊನಾ ಲಸಿಕೆ, ಚಿಕಿತ್ಸೆGHMC: ಬಿಜೆಪಿ ಪ್ರಣಾಳಿಕೆಯಲ್ಲಿ ಕೊರೊನಾ ಲಸಿಕೆ, ಚಿಕಿತ್ಸೆ

 ಪ್ರಣಾಳಿಕೆ ಸಮರ್ಥಿಸಿಕೊಂಡ ಕಾಂಗ್ರೆಸ್ ಮುಖಂಡ

ಪ್ರಣಾಳಿಕೆ ಸಮರ್ಥಿಸಿಕೊಂಡ ಕಾಂಗ್ರೆಸ್ ಮುಖಂಡ

ತನ್ನ ಪಕ್ಷದ ಭರವಸೆಯನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್‌ನ ಚಂದ್ರಕಾಂತ್ ಶ್ರೀವಾಸ್ತವ, ಸಮಯದೊಂದಿಗೆ ಸಮಾಜವೂ ಬದಲಾಗಬೇಕು ಎಂದು ವಾದಿಸಿದ್ದಾರೆ. ಪ್ರತಿ ನಾಣ್ಯಕ್ಕೂ ಎರಡು ಮುಖಗಳಿವೆ. ಪ್ರತಿ ಪ್ರಣಾಳಿಕೆಯೂ ಒಂದು ಸಿದ್ಧಾಂತ ಪ್ರತಿಪಾದಿಸುತ್ತದೆ. ಕೆಲವು ಜನರು ಎಲ್ಲದರಲ್ಲೂ ಸಮಸ್ಯೆಗಳನ್ನು ಕಂಡುಹಿಡಿಯುತ್ತಾರೆ. ಹೆಚ್ಚು ಜನರಿಗೆ ಯಾವುದು ಒಳಿತೋ ಅದನ್ನು ನಾವು ಮಾಡಬೇಕು. ಸಮಯದೊಂದಿಗೆ ನಾವು ಬದಲಾಗಬೇಕು ಎಂದು ಹೇಳಿದ್ದಾರೆ. ಅಹಮದಾಬಾದ್, ಸೂರತ್, ರಾಜಾ‌ಕೋಟ್, ವಡೋದರಾ, ಜಮ್‌ನಗರ ಹಾಗೂ ಭಾವ್ ‌ನಗರದಲ್ಲಿ ಫೆಬ್ರವರಿ 21ರಂದು ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯಲಿವೆ.

English summary
Controversy created in Gujarat's Vadodara after Congress in its manifesto of civic body polls promised 'dating destination with coffee shops' to the youth
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X