ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೌಕ್ತೆ ಚಂಡಮಾರುತ ದುರಂತ: ನಾಪತ್ತೆಯಾಗಿದ್ದ ತಗ್‌ಬೋಟ್‌ನ 7 ಸಿಬ್ಬಂದಿಯ ಶವ ಪತ್ತೆ

|
Google Oneindia Kannada News

ಅಹಮದಾಬಾದ್, ಮೇ 23: ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ನಾಪತ್ತೆಯಾಗಿದ್ದ ತಗ್‌ಬೋಟ್‌ನ ಕ್ಯಾಪ್ಟನ್ ನಾಗೇಂದ್ರ ಕುಮಾರ್ ಸಹಿತ ಏಳು ಜನರ ಮೃತದೇಹ ಪತ್ತೆಯಾಗಿದೆ. ಗುಜರಾತ್‌ನ ವಲ್ಸದ್ ಪ್ರದೇಶದಲ್ಲಿ ಈ ಮೃತದೇಹಗಳು ಭಾನುವಾರ ದೊರೆತಿದೆ. ವರಪ್ರದಾ ಹೆಸರಿನ ತಗ್‌ಬೋಟ್‌ನಲ್ಲಿದ್ದ 11 ಮಂದಿ ಚಂಡಮಾರುತದ ಸುಳಿಗೆ ಸಿಲುಕಿ ನಾಪತ್ತೆಯಾಗಿದ್ದರು.

ತೌಕ್ತೆ ಚಂಡಮಾರುತಕ್ಕೆ ಸಿಲುಕಿ P305 ಬಾರ್ಜ್ ಮುಳುಗಡೆಯಾಗಿತ್ತು. ಈ ಬೃಹತ್ ಬಾರ್ಜ್‌ಅನ್ನು ಎಳೆಯುತ್ತಿದ್ದ ವರಪ್ರದಾ ತಗ್‌ಬೋಟ್‌ನಲ್ಲಿದ್ದ 11 ಜನರು ಕೂಡ ಮುಂಬೈನ ಕರಾವಳಿ ಭಾಗದಿಂದ ಈ ಸಂದರ್ಭದಲ್ಲಿ ನಾಪತ್ತೆಯಾಗಿದ್ದರು. ಇದರಲ್ಲಿ ಏಳು ಮಂದಿ ಈಗ ಶವವಾಗಿ ಪತ್ತೆಯಾಗಿದ್ದಾರೆ.

ಯಾಸ್ ಚಂಡಮಾರುತ: ಅಪಾಯಕಾರಿ ಪ್ರದೇಶದಿಂದ ಜನರ ಸ್ಥಳಾಂತರಕ್ಕೆ ಪ್ರಧಾನಿ ಸೂಚನೆಯಾಸ್ ಚಂಡಮಾರುತ: ಅಪಾಯಕಾರಿ ಪ್ರದೇಶದಿಂದ ಜನರ ಸ್ಥಳಾಂತರಕ್ಕೆ ಪ್ರಧಾನಿ ಸೂಚನೆ

ಮುಂಬೈ ಪೊಲೀಸರ ಜೊತೆಗೆ ವಲ್ಸದ್ ಪೊಲೀಸರು ಸಂಪರ್ಕದಲ್ಲಿದ್ದಾರೆ. ಶನಿವಾರ ನಾಲ್ಕು ಮೃತದೇಹಗಳು ಪತ್ತೆಯಾಗಿದ್ದರೆ ಭಾನುವಾರ ಮೂರು ಮೃತದೇಹಗಳು ದೊರೆತಿವೆ. ಇನ್ನು ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ವಿವಿಧ ಭಾಗದಲ್ಲಿ 8 ಅಪರಿಚಿತ ಮೃತದೇಹಗಳು ಪತ್ತೆಯಾಗಿದೆ ಎಂದು ಮಾಹಿತಿ ದೊರೆತಿದೆ.

Cyclone Tauktae: Captain of Tugboat and Other 6 Bodies Found in Valsad, Gujarat

ಕಳೆದ ಸೋಮವಾರ ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಮುಳುಗಿದ್ದ ಪಿ 305 ಬಾರ್ಜ್ ಇರುವ ಸ್ಥಳವನ್ನು ಶನಿವಾರ ಪತ್ತೆಹಚ್ಚಲಾಗಿದೆ. ಈ ಬಗ್ಗೆ ಭಾರತೀಯ ನೌಕಾಪಡೆಯ ವಕ್ತಾರರು ಈ ಮೊದಲು ಮಾಹಿತಿಯನ್ನು ನೀಡಿದ್ದಾರೆ.

ಯಾಸ್ ಚಂಡಮಾರುತ: ಒಡಿಶಾದ 3 ಜಿಲ್ಲೆಗೆ ಹೆಚ್ಚು ಅಪಾಯ ಎಂದ ಹವಾಮಾನ ಇಲಾಖೆಯಾಸ್ ಚಂಡಮಾರುತ: ಒಡಿಶಾದ 3 ಜಿಲ್ಲೆಗೆ ಹೆಚ್ಚು ಅಪಾಯ ಎಂದ ಹವಾಮಾನ ಇಲಾಖೆ

ಬಾರ್ಜ್ ಮುಳುಗಡೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಈಗ 66ಕ್ಕೆ ಏರಿಕೆಯಾಗಿದ್ದು 9 ಮಂದಿಯ ಸುಳಿವು ಇನ್ನೂ ದೊರೆತಿಲ್ಲ. ಘಟನೆ ನಡೆದ ಸಂದರ್ಭದಲ್ಲಿ 261 ಜನರು ಬಾರ್ಜ್‌ನಲ್ಲಿದ್ದರು ಎಂದು ನೌಕಾಪಡೆ ಮಾಹಿತಿ ನೀಡಿದೆ. ಇದರಲ್ಲಿ 186 ಜನರನ್ನು ರಕ್ಷಣೆ ಮಾಡಲಾಗಿದೆ. ಬಾರ್ಜ್ P305ನಲ್ಲಿ ನಾಪತ್ತೆಯಾಗಿದ್ದ 9 ಜನರ ಜೊತೆಗೆ ವರಪ್ರದಾ ತಗ್ ಬೋಟ್‌ನಲ್ಲಿದ್ದ 11 ಜನರಿಗಾಗಿ ನೌಕಾಪಡೆ ಹಾಗೂ ಕೋಸ್ಟ್‌ಗಾರ್ಡ್ ಸಿಬ್ಬಂದಿಗಳು ಹುಡುಕಾಟವನ್ನು ನಡೆಸುತ್ತಿದ್ದರು. ವರಪ್ರದಾ ತಗ್‌ಬೋಟ್‌ನಲ್ಲಿ 13 ಜನರಿದ್ದು ಇಬ್ಬರನ್ನು ರಕ್ಷಣೆ ಮಾಡಲಾಗಿದೆ.

English summary
Cyclone Tauktae: Captain of Tugboat and Other 6 Bodies Found in Valsad, Gujarat which Sank Off in Cyclone Tauktae.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X