ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ರೋಗಿ ಮೇಲೆ ಆಸ್ಪತ್ರೆ ಸಿಬ್ಬಂದಿಯಿಂದ ಹಲ್ಲೆ

|
Google Oneindia Kannada News

ಅಹಮದಾಬಾದ್, ಸೆಪ್ಟೆಂಬರ್ 18: ಕೊರೊನಾ ವೈರಸ್ ರೋಗಿಯೊಬ್ಬರನ್ನು ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿ ಮತ್ತು ಕಾವಲುಗಾರರು ಅಮಾನುಷವಾಗಿ ಥಳಿಸುವ ವಿಡಿಯೋವೊಂದು ವೈರಲ್ ಆಗಿದೆ. ಗುಜರಾತ್‌ನ ರಾಜ್‌ಕೋಟ್ ಸಿವಿಲ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಕೋವಿಡ್ ರೋಗಿಯು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದ. ಆತನನ್ನು ನಿಯಂತ್ರಿಸಿದ್ದೇ ವಿನಾ ನಾವು ಹೊಡೆದಿಲ್ಲ. ಆತ ತನಗೆ ತಾನು ಗಾಯ ಮಾಡುವುದನ್ನು ಮತ್ತು ಇತರೆ ವೈದ್ಯಕೀಯ ಸಿಬ್ಬಂದಿಗೆ ಹಾನಿ ಮಾಡುವುದನ್ನು ತಡೆಯಲು ಪ್ರಯತ್ನ ಮಾಡಿದ್ದೆವು ಎಂದು ಆಸ್ಪತ್ರೆಯ ಅಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಹಪ್ಪಳ ತಿಂದು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆಯೇ?: ಸಂಜಯ್ ಮಹಾರಾಷ್ಟ್ರದಲ್ಲಿ ಹಪ್ಪಳ ತಿಂದು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆಯೇ?: ಸಂಜಯ್

ಈ ವಿಡಿಯೋವನ್ನು ಒಂದು ವಾರದ ಹಿಂದೆ ಚಿತ್ರೀಕರಿಸಲಾಗಿದೆ ಎನ್ನಲಾಗಿದೆ. ಪಿಪಿಇ ಕಿಟ್‌ನಲ್ಲಿರುವ ನರ್ಸಿಂಗ್ ಸಿಬ್ಬಂದಿ, ರೋಗಿಯನ್ನು ನೆಲಕ್ಕೆ ಒತ್ತಿಹಿಡಿಯಲು ಪ್ರಯತ್ನಿಸುವ ದೃಶ್ಯಗಳು ಸೆರೆಯಾಗಿವೆ. ಈ ವಿಡಿಯೋವನ್ನು ಯಾರು ಚಿತ್ರೀಕರಿಸಿದ್ದರು ಎನ್ನುವುದಕ್ಕೆ ಮಾಹಿತಿ ಇಲ್ಲ.

Covid Patient Thrashed Inside Rajkot Civil Hospital In Gujarat

Recommended Video

Nepalದ ಹೊಸ ಪುಸ್ತಕಗಳಳಲ್ಲಿ ಭಾರತವನ್ನು ಸೇರಿಸಿಕೊಂಡ ಭೂಪಟ | Oneindia Kannada

ಪಿಪಿಇ ಕೊಟ್ ಧರಿಸಿದ್ದ ಒಬ್ಬ ಸಿಬ್ಬಂದಿ ರೋಗಿಯ ಮೇಲೆ ಕುಳಿತುಕೊಂಡರೆ, ಮತ್ತೊಬ್ಬ ಆತನಿಗೆ ಹೊಡೆಯುತ್ತಾ ಸುಮ್ಮನಿರುವಂತೆ ಗದರಿಸುತ್ತಾನೆ. ಆಸ್ಪತ್ರೆಯ ಕಾವಲುಗಾರ ಕೂಡ ರೋಗಿಯನ್ನು ನಿಯಂತ್ರಿಸಲು ಬಲಪ್ರಯೋಗ ಮಾಡಿದ್ದಾನೆ.

'ನಮ್ಮ ಸಿಬ್ಬಂದಿ ಆ ರೋಗಿಯು ತನಗೆ ಅಪಾಯ ತಂದುಕೊಳ್ಳದಂತೆ ಮತ್ತು ಬೇರೆಯವರಿಗೂ ತೊಂದರೆ ಮಾಡದಂತೆ ತಡೆಯಲು ಪ್ರಯತ್ನಿಸಿದ್ದರಷ್ಟೇ. ಸರಿಯಾಗಿ ವರ್ತಿಸುವಂತೆ ಆತನಿಗೆ ತಿಳಿಹೇಳಿದರೂ ಆತ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ತನ್ನ ಬಟ್ಟೆಗಳನ್ನು ಕಿತ್ತುಹಾಕಲು ಕೂಡ ಆತ ಪ್ರಯತ್ನಿಸಿದ್ದ. ಅವರನ್ನು ತಡೆದು ಹಾಸಿಗೆಗೆ ವಾಪಸ್ ಕರೆದುಕೊಂಡು ಹೋಗಲು ನಮ್ಮ ಸಿಬ್ಬಂದಿ ಹರಸಾಹಸ ಪಟ್ಟರು' ಎಂದು ಆಸ್ಪತ್ರೆಯ ವರಿಷ್ಠಾಧಿಕಾರಿ ಡಾ. ಪಂಕಜ್ ಬುಚ್ ತಿಳಿಸಿದ್ದಾರೆ.

English summary
A video goes viral of Gujarat's Rajkot Civil Hosiptal nursing staff tharshing a patient.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X