• search
 • Live TV
ಅಹಮದಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾವೈರಸ್: ಸೂರತ್, ವಡೋದರ, ರಾಜ್‌ಕೋಟ್‌ನಲ್ಲಿ ರಾತ್ರಿ ವೇಳೆ ಕರ್ಫ್ಯೂ ಜಾರಿ

|

ಅಹಮದಾಬಾದ್, ನವೆಂಬರ್ 21: ಗುಜರಾತ್‌ನಲ್ಲಿ ಕೋವಿಡ್-19 ಪ್ರಕರಣದ ಹೆಚ್ಚಳವನ್ನು ತಡೆಯುವ ಉದ್ದೇಶದಿಂದ ಗುಜರಾತ್ ಸರ್ಕಾರ ನವೆಂಬರ್ 20 ರಿಂದ ಸೂರತ್, ವಡೋದರಾ ಮತ್ತು ರಾಜ್‌ಕೋಟ್ ನಗರಗಳಲ್ಲಿ ರಾತ್ರಿ ವೇಳೆ ಕರ್ಫ್ಯೂ ವಿಧಿಸಿದೆ.

ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಈ ಮೇಲೆ ಹೆಸರಿಸಿದ ನಗರದಲ್ಲಿ ಕರ್ಫ್ಯೂ ಜಾರಿಗೆ ಇರಲಿದ್ದು, ನವೆಂಬರ್ 20ರಿಂದ ನವೆಂಬರ್ 23ರ ಬೆಳಿಗ್ಗೆ 6 ಗಂಟೆಯವರೆಗೆ 57 ಗಂಟೆಗಳ ವೀಕೆಂಡ್ ಕರ್ಫ್ಯೂ ಜಾರಿಗೆ ಬಂದಿದೆ. ಅಲ್ಲದೆ ಅಹಮದಾಬಾದ್‌ನಲ್ಲಿ ಮೆಟ್ರೋ ಸಂಚಾರ ರದ್ದುಗೊಂಡಿದೆ.

ಕೊವಿಡ್ 19 :ದೆಹಲಿ ಆಸ್ಪತ್ರೆಗಳಲ್ಲಿ 300 ಹೆಚ್ಚುವರಿ ಹಾಸಿಗೆಗಳ ಸೇರ್ಪಡೆ

ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ನವೆಂಬರ್ 21 ರಿಂದ ಸೂರತ್, ರಾಜ್‌ಕೋಟ್ ಮತ್ತು ವಡೋದರಾ ನಗರಗಳಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ಕರ್ಫ್ಯೂ ಘೋಷಿಸಿದರು.

"ಮುಂದಿನ ಘೋಷಣೆಯಾಗುವವರೆಗೂ ಕರ್ಫ್ಯೂ ಜಾರಿಯಲ್ಲಿರುತ್ತದೆ. ವೈರಸ್ ಹೆಚ್ಚಳವನ್ನು ತಡೆಗಟ್ಟಲು ಅಧಿಕಾರಿಗಳೊಂದಿಗೆ ಸಹಕರಿಸುವಂತೆ ನಾನು ನಾಗರಿಕರನ್ನು ಒತ್ತಾಯಿಸುತ್ತೇನೆ" ಎಂದು ಪಟೇಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನವೆಂಬರ್ 20 ರಂದು ಅಹಮದಾಬಾದ್ ನಗರದಲ್ಲಿಯೇ 305 ಕೊರೊನಾವೈರಸ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಇದರ ನಂತರ ಸೂರತ್ ನಗರದಲ್ಲಿ 205, ವಡೋದರಾದಲ್ಲಿ 116 ಮತ್ತು ರಾಜ್‌ಕೋಟ್‌ನಲ್ಲಿ 83 ಹೊಸ ಪ್ರಕರಣಗಳು ದಾಖಲಾಗಿವೆ.

   ಧ್ರುವ ಸರ್ಜಾ ನೋಡಲು ಮುಗಿಬಿದ್ದ ಅಭಿಮಾನಿಗಳು | Oneindia Kannada

   ರಾಜ್ಯಾದ್ಯಂತ, ನವೆಂಬರ್ 20 ರಂದು 1,420 ಹೊಸ ಪ್ರಕರಣಗಳು ವರದಿಯಾಗಿವೆ. ನವೆಂಬರ್ 19 ರಂದು ಗುಜರಾತ್‌ನಲ್ಲಿ 1,340 ಪ್ರಕರಣಗಳು, ನವೆಂಬರ್ 12 ರಂದು 1,120 ಪ್ರಕರಣಗಳು ದಾಖಲಾಗಿವೆ.

   English summary
   Gujarat Deputy Chief Minister Nitin Patel announced a curfew between 9:00 pm and 6:00 am in Surat, Rajkot, and Vadodara from November 21
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X