ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ನಲ್ಲಿ ಕೊವ್ಯಾಕ್ಸಿನ್ ಲಸಿಕೆ ಶೀಘ್ರವೇ ಉತ್ಪಾದನೆ

|
Google Oneindia Kannada News

ಅಹಮದಾಬಾದ್, ಮೇ 21; ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಲಸಿಕೆ ಕೊರತೆ ಬಗ್ಗೆ ಬಹಳ ಚರ್ಚೆ ನಡೆಯುತ್ತಿದೆ. ಗುಜರಾತ್ನಲ್ಲಿ ಶೀಘ್ರವೇ ಲಸಿಕೆ ಉತ್ಪಾದನೆ ಆರಂಭವಾಗಲಿದೆ ಎಂದು ಕಂಪನಿ ಹೇಳಿದೆ.

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಗುಜರಾಜ್ ರಾಜ್ಯದ ಭರೂಚ್ ಜಿಲ್ಲೆಯ ಅಂಕಲೇಶ್ವರದಲ್ಲಿ ತನ್ನ ಉತ್ಪಾದನಾ ಘಟಕವನ್ನು ಹೊಂದಿದೆ. ಬೇರೆ-ಬೇರೆ ಲಸಿಕೆಗಳನ್ನು ಇಲ್ಲಿ ಉತ್ಪಾದಿಸಲಾಗುತ್ತಿದೆ.

ಕೋಲಾರದಲ್ಲಿ ಕೊವ್ಯಾಕ್ಸಿನ್ ಉತ್ಪಾದನಾ ಘಟಕ ಸ್ಥಾಪನೆಕೋಲಾರದಲ್ಲಿ ಕೊವ್ಯಾಕ್ಸಿನ್ ಉತ್ಪಾದನಾ ಘಟಕ ಸ್ಥಾಪನೆ

ಅಂಕಲೇಶ್ವರದಲ್ಲಿ ಶೀಘ್ರವೇ ಕೊವ್ಯಾಕ್ಸಿನ್ ಉತ್ಪಾದನೆ ಆರಂಭವಾಗಲಿದೆ. ವರ್ಷಕ್ಕೆ 200 ಮಿಲಿಯನ್ ಡೋಸ್ ಲಸಿಕೆಯನ್ನು ಇಲ್ಲಿ ಉತ್ಪಾದನೆ ಮಾಡುವ ಗುರಿ ಇದೆ ಎಂದು ಭಾರತ್ ಬಯೋಟೆಕ್ ಹೇಳಿದೆ. ಇದರಿಂದ ವಿವಿಧ ರಾಜ್ಯಗಳಿಗೆ ಲಸಿಕೆ ಸರಬರಾಜು ಮಾಡಲು ಸಹಾಯಕವಾಗಲಿದೆ.

ಮಕ್ಕಳ ಮೇಲೆ ಕೊವ್ಯಾಕ್ಸಿನ್ ಲಸಿಕೆ ವೈದ್ಯಕೀಯ ಪ್ರಯೋಗಕ್ಕೆ ಅನುಮತಿಮಕ್ಕಳ ಮೇಲೆ ಕೊವ್ಯಾಕ್ಸಿನ್ ಲಸಿಕೆ ವೈದ್ಯಕೀಯ ಪ್ರಯೋಗಕ್ಕೆ ಅನುಮತಿ

 Covaxin Production In Ankleshwar Gujarat Soon

ಈಗಾಗಲೇ 2-18 ವರ್ಷದ ವಕ್ಕಳ ಮೇಲೆ ಕೊವ್ಯಾಕ್ಸಿನ್ ಲಸಿಕೆ ಪ್ರಯೋಗ ಮಾಡಲು ಡಿಸಿಜಿಐ ಅನುಮತಿ ನೀಡಿದೆ. ವಿವಿಧ ರಾಜ್ಯಗಳು ಲಸಿಕೆಗಾಗಿ ಭಾರತ್ ಬಯೋಟೆಕ್‌ಗೆ ಬೇಡಿಕೆ ಸಲ್ಲಿಸಿವೆ. ಆದ್ದರಿಂದ ಉತ್ಪಾದನೆ ಹೆಚ್ಚಿಸಬೇಕಿದೆ.

ಕರ್ನಾಟಕ; ಮೇ 22ರಿಂದ 18-44 ವರ್ಷದವರಿಗೆ ಲಸಿಕೆಕರ್ನಾಟಕ; ಮೇ 22ರಿಂದ 18-44 ವರ್ಷದವರಿಗೆ ಲಸಿಕೆ

ಪ್ರಸ್ತುತ ಹೈದರಾಬಾದ್‌ನಲ್ಲಿ ಮಾತ್ರ ಕೊವ್ಯಾಕ್ಸಿನ್ ತಯಾರಾಗುತ್ತಿದೆ. ಕರ್ನಾಟಕದ ಕೋಲಾರದಲ್ಲಿ ಉತ್ಪಾದನಾ ಘಟಕ ನಿರ್ಮಾಣ ಹಂತದಲ್ಲಿದ್ದು, ಒಂದು ತಿಂಗಳಿನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಭಾರತದಲ್ಲಿ ಪ್ರಸ್ತುತ ಕೋವಿಶೀಲ್ಡ್‌ ಮತ್ತು ಕೊವ್ಯಾಕ್ಸಿನ್ ಲಸಿಕೆಗಳು ಲಭ್ಯವಿದೆ. ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯು ಭಾರತಕ್ಕೆ ಬಂದಿದೆ. ಆದರೆ ಹೈದರಾಬಾದ್‌ನಲ್ಲಿ ಮಾತ್ರ ಲಭ್ಯವಿದೆ.

English summary
Covaxin product availability at Ankleshwar, Gujarat to commence soon said Bharat biotech. In a plant plans to produce 200 million doses of Covaxin per year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X