ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಸರ್ಕಾರ 25 ವರ್ಷಗಳಿಂದ ಒಂದು ಆಸ್ಪತ್ರೆಯನ್ನೂ ನಿರ್ಮಿಸಿಲ್ಲ: ಕಾಂಗ್ರೆಸ್

|
Google Oneindia Kannada News

ಅಹಮದಾಬಾದ್, ಏಪ್ರಿಲ್ 24: ಗುಜರಾತ್ ಸರ್ಕಾರ ಕಳೆದ 25 ವರ್ಷಗಳಿಂದ ಒಂದು ಆಸ್ಪತ್ರೆಯನ್ನೂ ನಿರ್ಮಿಸಿಲ್ಲ ಎಂದು ಕಾಂಗ್ರೆಸ್ ಟೀಕೆ ಮಾಡಿದೆ.

ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿರುವುದಷ್ಟೇ ಇಷ್ಟು ವರ್ಷಗಳಲ್ಲಿ ಒಂದೇ ಒಂದು ಹೊಸ ಆಸ್ಪತ್ರೆಯನ್ನೂ ನಿರ್ಮಾಣ ಮಾಡಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಜೀವ್ ಸತವ್ ಹೇಳಿದ್ದಾರೆ.

ಅಗತ್ಯವಿಲ್ಲದ ಯೋಜನೆಗಳಿಗೆ ಖುರ್ಚು ಮಾಡುವ ಹಣವನ್ನು ಕೊರೊನಾ ಲಸಿಕೆ ಉತ್ಪಾದನೆಗೆ ಬಳಸಿ: ರಾಹುಲ್ ಅಗತ್ಯವಿಲ್ಲದ ಯೋಜನೆಗಳಿಗೆ ಖುರ್ಚು ಮಾಡುವ ಹಣವನ್ನು ಕೊರೊನಾ ಲಸಿಕೆ ಉತ್ಪಾದನೆಗೆ ಬಳಸಿ: ರಾಹುಲ್

ಈ 25 ವರ್ಷಗಳಲ್ಲಿ 13 ವರ್ಷ ನರೇಂದ್ರ ಮೋದಿಯವರೇ ಮುಖ್ಯಮಂತ್ರಿಯಾಗಿದ್ದರೂ ಕೂಡ ಯಾವುದೇ ಆಸ್ಪತ್ರೆ ನಿರ್ಮಿಸಿಲ್ಲ.

Congress Says Gujarat Government Has Not Built A Hospital In 25 Years

' 2014ರಲ್ಲಿ ನರೇಂದ್ರ ಮೋದಿವರು ದೇಶವನ್ನು ಗುಜರಾತ್ ಮಾದರಿಯಲ್ಲಿ ಅಭಿವೃದ್ಧಿಪಡಿಸುತ್ತೇನೆ ಎಂದಿದ್ದರು, ಹೇಳಿದಂತೆಯೇ ಮಾಡಿದ್ದಾರೆ' ಎಂದು ವ್ಯಂಗ್ಯವಾಡಿದರು. 'ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳು ನಿರ್ಮಾಣವಾಗಿಲ್ಲ, ಯಾವ್ಯಾವ ದೊಡ್ಡ ಆಸ್ಪತ್ರೆಗಳಿವೆಯೋ ಅವೆಲ್ಲವು ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ನಿರ್ಮಿತವಾದಂಥವು' ಎಂದರು.

'ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಜ್‌ಕೋಟ್‌ನಲ್ಲಿ AIIMS ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದರು, 2020ರಲ್ಲಿ ಭೂಮಿಪೂಜೆಯನ್ನು ಕೂಡ ನೆರವೇರಿಸಿದ್ದರು, ಆದರೆ ಇನ್ನೂ ನಿರ್ಮಾಣ ಹಂತದಲ್ಲೇ ಇದೆ'.

ಇದೀಗ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದಾಗಿ ಪರಿಸ್ಥಿತಿ ಚಿಂತಾಜನಕವಾಗಿದೆ, ನಮಗೆ ಬೇಕಾದಷ್ಟು ಆಮ್ಲಜನಕವೂ ಇಲ್ಲ, ಆಮ್ಲಜನಕವಿಲ್ಲದೆ ಜನರು ಮೃತಪಡುತ್ತಿದ್ದಾರೆ. ಗುಜರಾತ್‌ನಲ್ಲಿರುವ ಕೇವಲ 16 ಆಸ್ಪತ್ರೆಗಳಲ್ಲಿ ಮಾತ್ರ ಕೋವಿಡ್ 19 ರೋಗಿಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ.

Recommended Video

KL Rahul ಮುಂಬೈ ವಿರುದ್ಧ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು ಇದೇ ಕಾರಣಕ್ಕೆ | Oneindia Kannada

33 ಜಿಲ್ಲೆಗಳ ಪೈಕಿ ಒಂದು ಜಿಲ್ಲೆಯ ಆಸ್ಪತ್ರೆಯಲ್ಲಿ ಮಾತ್ರ ಸಿಟಿ ಸ್ಕ್ಯಾನ್ ವ್ಯವಸ್ಥೆ ಇದೆ. ಕೊರೊನಾ ಸೋಂಕಿತರ ಶವ ಸಂಸ್ಕಾರ ಮಾಡಲು 5-6 ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ಇದೆ ಎಂದು ಹೇಳಿದರು.

English summary
The Gujarat government has not built a single hospital in the past 25 years that the BJP has been in power in the state, the Congress said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X