ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮಸ್ತೆ ಟ್ರಂಪ್ ಕಾರ್ಯಕ್ರಮದಿಂದಲೇ ಕೊರೊನಾ ಹರಡಿದೆ: ಕಾಂಗ್ರೆಸ್ ಆರೋಪ

|
Google Oneindia Kannada News

ಅಹಮದಾಬಾದ್, ಮೇ 7: ಬಿಜೆಪಿ ಸರ್ಕಾರ ಆಯೋಜನೆ ಮಾಡಿದ್ದ 'ನಮಸ್ತೆ ಟ್ರಂಪ್' ಕಾರ್ಯಕ್ರಮದಿಂದಲೇ ಗುಜರಾತ್‌ಗೆ ಕೊರೊನಾ ಹರಡಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ. ಫೆಬ್ರವರಿ 24ರಂದು ಅಹಮದಾಬಾದಿನಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮ ನಡೆದಿತ್ತು. ಇದು ಇಡೀ ರಾಜ್ಯಾದ್ಯಂತ ವೈರಸ್ ಹರಡು ಕಾರಣವಾಗಿದೆ ಎಂದಿದ್ದಾರೆ.

ಈ ಕುರಿತು ಎಸ್‌ಐಟಿ ವಿಶೇಷ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಅಮಿತ್ ಚಾವ್ಡಾ ಒತ್ತಾಯಿಸಿದ್ದಾರೆ. ಆದರೆ ಬಿಜೆಪಿ ಮಾತ್ರ ಈ ಮಾತಿನಲ್ಲಿ ಯಾವುದೇ ಹುರುಳಿಲ್ಲ ಎಂದಿದೆ. ವಿಶ್ವ ಆರೋಗ್ಯ ಸಂಸ್ಥೆಯು ಕೊರೊನಾ ಒಂದು ಸಾಂಕ್ರಾಮಿಕ ರೋಗ ಎಂದು ಘೋಷಿಸುವುದಕ್ಕೂ ಮುನ್ನವೇ ಈ ಕಾರ್ಯಕ್ರಮ ನಡೆದಿತ್ತು ಎಂದು ಹೇಳಿದೆ.

ನಿರ್ಲಕ್ಷದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ನಿರ್ಧಾರ

ನಿರ್ಲಕ್ಷದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ನಿರ್ಧಾರ

ರಾಜ್ಯ ಬಿಜೆಪಿ ಸರ್ಕಾರ ಆಯೋಜಿಸಿದ್ದ ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ ಮೂಲಕ ಸ್ವತಂತ್ರ ತನಿಖೆಯಾಗಬೇಕು ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಚವ್ದಾ ಅವರು ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಗುಜರಾತ್ ಹೈಕೋರ್ಟ್ ಮೆಟ್ಟಿಲೇರುವುದಾಗಿ ಅಮಿತ್ ಅವರು ತಿಳಿಸಿದ್ದಾರೆ.

ಚೀನಾದ ಮೇಲೆ ಟ್ರಂಪ್ ಆರೋಪ: ಅಮೆರಿಕ ವಿಜ್ಞಾನಿಗಳಿಂದಲೇ ತಿರಸ್ಕಾರಚೀನಾದ ಮೇಲೆ ಟ್ರಂಪ್ ಆರೋಪ: ಅಮೆರಿಕ ವಿಜ್ಞಾನಿಗಳಿಂದಲೇ ತಿರಸ್ಕಾರ

ಜನವರಿಯಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು

ಜನವರಿಯಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು

ಜನವರಿಯಲ್ಲಿಯೇ, ಕೊರೋನಾ ವೈರಸ್ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟವಾಗಿ ಹೇಳಿದೆ. ಅಲ್ಲದೆ ದೊಡ್ಡ ಸಭೆ, ಸಮಾರಂಭಗಳನ್ನು ಆಯೋಜಿಸುವುದನ್ನು ತಡೆಯುವಂತೆ ಎಲ್ಲ ದೇಶಗಳಿಗೂ ಸೂಚಿಸಿತ್ತು. ಅಂತಹ ಎಚ್ಚರಿಕೆಯ ಹೊರತಾಗಿಯೂ, 'ನಮಸ್ತೆ ಟ್ರಂಪ್' ಅನ್ನು ರಾಜಕೀಯ ಲಾಭಕ್ಕಾಗಿ ಯೋಜಿಸಲಾಗಿತ್ತು ಮತ್ತು ಗುಜರಾತ್ ಸರ್ಕಾರ ಅದಕ್ಕೆ ಅನುಮತಿಯನ್ನು ನೀಡಿತ್ತು" ಎಂದು ಅಮಿತ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಆರೋಪ ತಳ್ಳಿ ಹಾಕಿದ ಬಿಜೆಪಿ

ಕಾಂಗ್ರೆಸ್ ಆರೋಪ ತಳ್ಳಿ ಹಾಕಿದ ಬಿಜೆಪಿ

ಕಾಂಗ್ರೆಸ್ ಆರೋಪವನ್ನು ರಾಜ್ಯ ಬಿಜೆಪಿ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಇದೊಂದು ಆಧಾರ ರಹಿತ ಆರೋಪ. ಕೊವಿಡ್-19 ಒಂದು ಸಾಂಕ್ರಾಮಿಕ ರೋಗ ಎಂದು ವಿಶ್ವಸಂಸ್ಥೆ ಘೋಷಿಸುವ ಮುನ್ನವೇ ಈ ಕಾರ್ಯಕ್ರಮ ನಡೆದಿದೆ ಮತ್ತು ನಮಸ್ತೆ ಟ್ರಂಪ್ ಕಾರ್ಯಕ್ರಮ ನಡೆದು ಒಂದು ತಿಂಗಳ ನಂತರ ರಾಜ್ಯದಲ್ಲಿ ಕೊರೊನಾ ವೈರಸ್ ಪಾಸಿಟಿವ್ ವರದಿಯಾಗಿದೆ ಎಂದು ಹೇಳಿದೆ.

ಕೊರೊನಾ ತಂದ ಆಪತ್ತು: ಡೊನಾಲ್ಡ್ ಟ್ರಂಪ್ ರಾಜಕೀಯ ಭವಿಷ್ಯಕ್ಕೆ ಕುತ್ತು?ಕೊರೊನಾ ತಂದ ಆಪತ್ತು: ಡೊನಾಲ್ಡ್ ಟ್ರಂಪ್ ರಾಜಕೀಯ ಭವಿಷ್ಯಕ್ಕೆ ಕುತ್ತು?

ದೇಶದಲ್ಲಿರುವ ಕೊರೊನಾ ಸೋಂಕಿತರೆಷ್ಟು?

ದೇಶದಲ್ಲಿರುವ ಕೊರೊನಾ ಸೋಂಕಿತರೆಷ್ಟು?

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 55 ಸಾವಿರದ ಗಡಿ ದಾಟಿದೆ. 15267 ಮಂದಿ ಗುಣಮುಖರಾಗದ್ದಾರೆ. 1894 ಮಂದಿ ಮೃತಪಟ್ಟಿದ್ದಾರೆ.

English summary
The Gujarat Congress on Wednesday alleged that the "Namaste Trump" event, organised by the state BJP government in Gujarat, on February 24 was responsible for the spread of coronavirus in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X