ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಬಿಜೆಪಿ-ಕಾಂಗ್ರೆಸ್ ವಿದ್ಯಾರ್ಥಿ ಘಟಕಗಳ ಬೀದಿ ಕಾಳಗ, 10 ಮಂದಿಗೆ ಗಾಯ

|
Google Oneindia Kannada News

ಅಹ್ಮದಾಬಾದ್, ಜನವರಿ 07: ಬಿಜೆಪಿ ಮತ್ತು ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕಗಳಾದ ಎಬಿವಿಪಿ ಮತ್ತು ಎನ್‌ಎಸ್‌ಯುಐ ನಡುವೆ ಬೀದಿ ಕಾಳಗ ನಡೆದಿದ್ದು 10 ಮಂದಿ ಗಾಯಗೊಂಡಿದ್ದಾರೆ.

ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ಖಂಡಿಸಿ ಅಹ್ಮದಾಬಾದ್ ಸಮೀಪದ ಎಬಿವಿಪಿ ಕಚೇರಿ ಬಳಿ ಎನ್‌ಎಸ್‌ಯುಐ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು, ಈ ವೇಳೆ ಎಬಿವಿಪಿ ಮತ್ತು ಎನ್‌ಎಸ್‌ಯುಐ ನಡುವೆ ಗುಂಪು ಸಂಘರ್ಷ ಉಂಟಾಗಿದ್ದು ಈ ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದಾರೆ.

ಜೆಎನ್‌ಯು ಆವರಣದಲ್ಲಿ ಗಲಭೆ; ವರದಿ ಕೇಳಿದ ಅಮಿತ್ ಶಾಜೆಎನ್‌ಯು ಆವರಣದಲ್ಲಿ ಗಲಭೆ; ವರದಿ ಕೇಳಿದ ಅಮಿತ್ ಶಾ

ಘರ್ಷಣೆಯಲ್ಲಿ ಗುಜರಾತ್‌ ಎನ್‌ಎಸ್‌ಯುಐ ನ ಪ್ರಧಾನ ಕಾರ್ಯದರ್ಶಿ ನಿಖಿಲ್ ಸವಾನಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ವಿ.ಎಸ್ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿಖಿಲ್ ಸವಾನಿ ಅವರಿಗೆ ಗುಂಪೊಂದು ಹೊಡೆಯುತ್ತಿರುವ ವಿಡಿಯೋ ಬಿಡುಗಡೆ ಆಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Clashes Between ABVP And NSUI In Ahmedabad

ಎರಡೂ ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ಕಲ್ಲು ಮತ್ತು ದೊಣ್ಣೆಗಳಿಂದ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಘರ್ಷಣೆಯಲ್ಲಿ ಸಾರ್ವಜನಿಕ ಆಸ್ತಿಗೂ ಹಾನಿ ಆಗಿದೆ.

ಘಟನೆ ನಡೆದ ಕೂಡಲೆ ಪೊಲೀಸರು ಮಧ್ಯ ಪ್ರವೇಶಿಸಿದ್ದು, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಘಟನೆ ಬಗ್ಗೆ ಎಫ್‌ಐಆರ್ ಸಹ ದಾಖಲಿಸಿಕೊಂಡಿದ್ದಾರೆ.

ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಮೇಲೆ ಮಾರಣಾಂತಿಕ ಹಲ್ಲೆಜೆಎನ್‌ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಮೇಲೆ ಮಾರಣಾಂತಿಕ ಹಲ್ಲೆ

ಘಟನೆ ಬಗ್ಗೆ ಮಾತನಾಡಿರುವ ಎನ್‌ಎಸ್‌ಯುಐ ಕಾರ್ಯದರ್ಶಿ ಭವಿಕ್ ಸೋಲಂಕಿ, 'ನಮ್ಮ ಪ್ರತಿಭಟನೆ ಶಾಂತವಾಗಿತ್ತು, ಆದರೆ ಎಬಿವಿಪಿ ಸದಸ್ಯರು ಅಚಾನಕ್ಕಾಗಿ ಬಂದು ದೊಣ್ಣೆಗಳಿಂದ ನಮ್ಮ ಮೇಲೆ ಹಲ್ಲೆ ಪ್ರಾರಂಭಿಸಿದರು' ಎಂದಿದ್ದಾರೆ.

ಬಿಜೆಪಿಯೇ ಹಿಂದೆ ನಿಂತು ಜೆಎನ್ ಯುನಲ್ಲಿ ಹಿಂಸಾಚಾರ ಮಾಡಿಸಿತಾ?ಬಿಜೆಪಿಯೇ ಹಿಂದೆ ನಿಂತು ಜೆಎನ್ ಯುನಲ್ಲಿ ಹಿಂಸಾಚಾರ ಮಾಡಿಸಿತಾ?

ಎಬಿವಿಪಿ ಸಹ ಘಟನೆ ಬಗ್ಗೆ ಹೇಳಿಕೆ ನೀಡಿದ್ದು, 'ಎನ್‌ಎಸ್‌ಯುಐ ಸದಸ್ಯರು ಧ್ವಜಗಳನ್ನು ಹಿಡಿದು ಕಚೇರಿ ಬಳಿ ಬಂದರು, ನಂತರ ಧ್ವಜಗಳನ್ನು ತೆಗೆದು ಕೋಲುಗಳಿಂದ ನಮ್ಮ ಮೇಲೆ ಹಲ್ಲೆ ಮಾಡಲು ಆರಂಭಿಸಿದರು' ಎಂದಿದ್ದಾರೆ.

English summary
Clashes between ABVP and NSUI in Ahmedabad. 10 people injured, NSUI Gujrat general secretory badly injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X