ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ನಲ್ಲಿ ಟ್ರೇನಿ ಮಹಿಳಾ ಸಿಬ್ಬಂದಿ ಬೆತ್ತಲೆ ಪರೀಕ್ಷೆ

|
Google Oneindia Kannada News

ಸೂರತ್, ಫೆಬ್ರವರಿ 22: ಗುಜರಾತಿನ ನಗರ ಪಾಲಿಕೆಯ ಟ್ರೇನಿ ಮಹಿಳಾ ಸಿಬ್ಬಂದಿಯನ್ನು ದೈಹಿಕ ಪರೀಕ್ಷೆ ಹೆಸರಿನಲ್ಲಿ ಬೆತ್ತಲೆ ಮಾಡಿದ ಹೇಯ ಘಟನೆ ನಡೆದಿದೆ.

ಇದೇ ವಾರದ ಆರಂಭದಲ್ಲಿ ಭುಜ್‌ನ ಕಾಲೇಜಿನಲ್ಲಿ ಋತುಮತಿಯಾಗಿದ್ದಾರೆಯೇ ಎಂದು ತಿಳಿಯಲು ವಿದ್ಯಾರ್ಥಿನಿಯರ ಒಳ ಉಡುಪು ತೆಗೆಸಿದ ಘಟನೆ ನಡೆದ ಬೆನ್ನಲ್ಲೇ ಈ ಮನಕಲಕುವ ಘಟನೆ ನಡೆದಿದೆ.

ವಿದ್ಯಾರ್ಥಿನಿಯರು ಮುಟ್ಟಾಗಿದ್ದಾರಾ ಎಂದು ಕಾಲೇಜಿನಲ್ಲಿ ಒಳ ಉಡುಪು ಬಿಚ್ಚಿ ನೋಡ್ತಾರೆವಿದ್ಯಾರ್ಥಿನಿಯರು ಮುಟ್ಟಾಗಿದ್ದಾರಾ ಎಂದು ಕಾಲೇಜಿನಲ್ಲಿ ಒಳ ಉಡುಪು ಬಿಚ್ಚಿ ನೋಡ್ತಾರೆ

ಅಷ್ಟೇ ಅಲ್ಲದೆ ವೈದ್ಯರು ಮನಸ್ಸಿಗೆ ಬಂದಂತೆ ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ.ಟ್ರೇನಿ ಸಿಬ್ಬಂದಿ ನೇಮಕಕ್ಕೂ ಮುನ್ನ ದೈಹಿಕ ಪರೀಕ್ಷೆ ಮಾಡಿಸಿಕೊಳ್ಳಬೇಕು.

Civic Body Women Trainee Staff Made To Stand Naked For Exam

ಇದಕ್ಕಾಗಿ ನೂರು ಮಂದಿಯನ್ನು ಸೂರತ್ ಮುನ್ಸಿಪಲ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗೆ ಕಳುಹಿಸಲಾಗಿತ್ತು. ಅಲ್ಲಿ ತಲಾ ಹತ್ತು ಮಂದಿಯ ತಂಡ ಮಾಡಿ ಕೊಠಡಿಯಲ್ಲಿ ಬೆತ್ತಲೆ ನಿಲ್ಲಿಸಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

ಪುರುಷರಿಗೆ ಮಾತ್ರ ಸಾಮಾನ್ಯ ವೈದ್ಯಕೀ ಪರೀಕ್ಷೆ ಮಾಡಲಾಗಿದೆ ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ವಿದ್ಯಾರ್ಥಿನಿಯರು ಮುಟ್ಟಾಗಿದ್ದಾರಾ ಎಂದು ಖಚಿತಪಡಿಸಿಕೊಳ್ಳಲು ಬಲವಂತವಾಗಿ ಒಳ ಉಡುಪುಗಳನ್ನು ತೆಗೆಸಿ ಅವಮಾನ ಮಾಡಿರುವ ಘಟನೆ ಗುಜರಾತ್‌ನ ಕಾಲೇಜಿನಲ್ಲಿ ನಡೆದಿದೆ.

ಭುಜ್‌ನ ಶ್ರೀ ಸಹಜಾನಂದ ಬಾಲಕಿಯರ ಸಂಸ್ಥೆಯಲ್ಲಿ ಈ ಘಟನೆ ನಡೆದಿದೆ. ಕೆಲ ವಿದ್ಯಾರ್ಥಿಗಳು ಸಂಸ್ಥೆಯ ಧಾರ್ಮಿಕ ನಿಯಮ ಉಲ್ಲಂಘಿಸಿದ್ದಾರೆ ಎಂದು ಹಾಸ್ಟೆಲ್‌ನ ಮುಖ್ಯಸ್ಥರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆಸಲಾಗಿತ್ತು.

ಹಾಸ್ಟೆಲ್‌ನಲ್ಲಿ ಇರುವ ಯುವತಿಯರು ಒಂದು ವೇಳೆ ಋತುಮತಿಯಾದ್ರೆ, ಅವರು ದೇಗುಲಕ್ಕೆ ಹಾಗೂ ಅಡುಗೆ ಕೋಣೆಗೆ ಪ್ರವೇಶ ನೀಡುವಂತಿಲ್ಲ. ಇತರ ವಿದ್ಯಾರ್ಥಿನಿಯರನ್ನು ಮುಟ್ಟುವಂತಿಲ್ಲ.

English summary
Female trainee clerks of the Surat Municipal Corporation were allegedly made to stand naked together in a room for a medical test at a civic body-run hospital in Surat, prompting authorities to order a probe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X